ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ಅನುಕೂಲ: ಕಬ್ಬಿನ ಬೆಳೆಗೆ ಹೆಚ್ಚಿದ ಒಲವು
Benefits from Basaveshwara Lift Irrigation Project: Increased interest in sugarcane cultivation
ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ಅನುಕೂಲ: ಕಬ್ಬಿನ ಬೆಳೆಗೆ ಹೆಚ್ಚಿದ ಒಲವು
ಸಂಬರಗಿ 02: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಮುಖಾಂತರ ಕೆನಾಲ್ ನೀರಿನಿಂದ ಐದು ಕೆರೆಗಳು ನೀರು ತುಂಬಿ ತುಳುಕುತ್ತಿದ್ದು, ಮುಂಗಾರಿ ಬೆಳೆಗೆ ಅನುಕೂಲ ವಾತಾವರಣ ಇದ್ದು, ಕೊಳವೆಬಾವಿ, ತೆರೆದ ಬಾವಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ರೈತರು ಕಬ್ಬಿನ ಬೆಳೆ ಪಡೆದುಕೊಳ್ಳಲು ಒಲವು ಹೆಚ್ಚಿದೆ.
ಕೃಷ್ಣಾ ತೀರದಲ್ಲಿ ಇರುವ 265, 86032 ಈ ಜಾತಿಯ ಕಬ್ಬನ್ನು ಮೂರರಿಂದ ನಾಲ್ಕು ಸಾವಿರ ರೂಪಾಯಿ ಟನ್ ಕಬ್ಬಿನ ಬೀಜ ಖರೀದಿ ಮಾಡಿ ರೈತರು ತಮ್ಮ ಜಮೀನಿನಲ್ಲಿ ಜೂನ್ ಜುಲೈ ತಿಂಗಳಲ್ಲಿ ರೈತರು ಕಬ್ಬು ನಾಟಿ ಮಾಡುವ ಪ್ರಕ್ರಿಯೆಯಲ್ಲಿ ರೈತರು ತೊಡಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಇಲ್ಲಿಯವರೆಗೆ ಗಡಿಭಾಗದಲ್ಲಿರುವ ಮದಭಾವಿ, ಅರಳಿಹಟ್ಟಿ, ಜಕ್ಕಾರಟ್ಟಿ, ಬೊಮ್ಮನಾಳ ಇನ್ನೀತರ ಕೆರೆಗಳು ಹಾಗೂ ಅಗ್ರಾಣಿ ನದಿಗೆ ನೀರು ಹರಿದಿದಿಲ್ಲ. ಆದರೆ ಖಿಳೇಗಾಂವಿ ಬಸವೇಶ್ವರ ಏತನೀರಾವರಿ ಯೋಜನೆ ಮೊದಲನೆ ಹಂತದ ಕಾಮಗಾರಿ ಪೂರ್ಣಗೊಂಡು ಮದಭಾವಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹದಿನೈದು ಗ್ರಾಮಕ್ಕೆ ಕಾಲುವೆ ನೀರನ ಲಾಭ ಪಡೆದುಕೊಂಡಿದ್ದಾರೆ. ಅಗ್ರಾಣಿ ನದಿಯಲ್ಲಿ ನೀರು ಬಿಟ್ಟ ಕಾರಣ ಕಳೆದ ಎರಡು ತಿಂಗಳುಗಳಿಂದ ನೀರು ಹರಿಯುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಉದ್ದು, ಶೇಂಗಾ, ಹುರಳಿ ಇನ್ನೀತರ ಬೆಳೆ ರೈತರು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ವರ್ಷ ಕಬ್ಬಿನ ಬೆಳೆ ಹೆಚ್ಚಿಸುವ ಸಾಧ್ಯತೆ ಇದೆ.
ಕರೆ ತುಂಬಿದ ಪರಿಣಾಮ ಸಂಬರಗಿ, ಶಿರೂರ, ಪಾಂಡೇಗಾಂವ, ಮದಭಾವಿ, ಅರಳಿಹಟ್ಟಿ, ಬೊಮ್ಮನಾಳ, ಜಕ್ಕಾರಟ್ಟಿ, ಜಂಬಗಿ ಇನ್ನೀತರ ಗ್ರಾಮದಲ್ಲಿ ಕಬ್ಬಿನ ಹಾಗೂ ಮುಂಗಾರಿ ಬೆಳೆಗಳ ಪ್ರಮಾಣ ಹೆಚ್ಚಾಗಿದೆ. ರೈತರು ಕಾಲುವೆ ನೀರು ನೋಡಿ ದುಡ್ಡಿನ ಬೆಳೆಯ ಕಡೆಗೆ ಹೆಚ್ಚಿನ ಒಲವು ತೋರಿಸಿದ್ದಾರೆ. ಈಗಾಗಲೇ ಐದರಿಂದ ಆರು ಸಾವಿರ ಎಕರೆ ಕಬ್ಬು ಹೆಚ್ಚಾಗುವ ಸಾಧ್ಯತೆ ಇದೆ.
ಈ ಕುರಿತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಿಂಗಣ್ಣ ಬಿರಾದಾರ ಇವರನ್ನು ಸಂಪರ್ಕಿಸಿದಾಗ ಗಡಿ ಭಾಗದಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ರೈತರು ಕಬ್ಬಿನ ಬೆಳೆಯ ಕಡೆಗೆ ಒಲವು ಹೆಚ್ಚಿದ್ದು, ಈ ವರ್ಷ ಏಳರಿಂದ ಎಂಟು ಸಾವಿರ ಎಕರೆ ಕಬ್ಬು ಹೆಚ್ಚಾಗುವ ಸಾಧ್ಯತೆ ಇದ
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 