ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳ ಸದುಪಯೋಗ: ದಡ್ಡಿ

ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳ ಸದುಪಯೋಗ: ದಡ್ಡಿ Beneficiaries should make good use of Pancha Guarantee Schemes: Daddi

             ಜಮಖಂಡಿ 21: ಗೃಹ ಲಕ್ಷ್ಮೀ ಯೋಜನೆಯಲ್ಲಿ ಮಹಿಳೆಯರು 1744,97, 57 ಸರಕಾರದ ಗೃಹ ಲಕ್ಷ್ಮೀ ಹಣದ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಯ ಅನ್ನಭಾಗ್ಯ ಯೋಜನೆಯಲ್ಲಿ 747 ನ್ಯಾಯ ಬೆಲೆ ಅಂಗಡಿಗಳಲ್ಲಿ 4,82,882 ಪಡಿತರ ಚೀಟಿದಾರರು ಅನ್ನಭಾಗ್ಯವನ್ನು ಪಡೆದುಕೊಳ್ಳುತ್ತಿದ್ದಾರೆಂದು ನೂತನ ಪಂಚ ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಅನೀಲಕುಮಾರ ದಡ್ಡಿ ಹೇಳಿದರು. 

               ನಗರದ ತಾಲೂಕ ಪಂಚಾಯತ ಸಭಾ ಸಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧ್ಯಕ್ಷ ಮೇಲೆ ಮೊದಲನೇ ಬಾರಿಗೆ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ. ಪಂಚ ಗ್ಯಾರಂಟಿ ಯೋಜನೆಗಳಿಂದ ಫಲಾನುಭವಿಗಳಿಗೆ ಸರಿಯಾಗಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂಬುವುದು ಕುರಿತು ಹಾಗೂ ಸದಸ್ಯರ ಕಾರ್ಯವೈಖರಿಗಳ ಬಗ್ಗೆ ತಿಳಿದುಕೊಳ್ಳಲು ಆಗಮಿಸಿದ್ದೇನೆ ಎಂದರು. 

                   ರಾಜ್ಯದಲ್ಲಿ ಸರಕಾರ ಚುನಾವಣೆ ಪೂರ್ವ ಸಮಯದಲ್ಲಿ ಸಿಎಂ, ಅವರು ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಘೋಷಣೆ ಮಾಡಲಾಗಿತ್ತು. ನುಡಿದಂತೆ ನಡೆದುಕೊಂಡ ಸರಕಾರ ಯಾವುದಾದರೂ ಇದ್ದರೆ ಅದು ನಮ್ಮ ಸರಕಾರ. ರಾಜ್ಯ, ಜಿಲ್ಲಾ, ತಾಲೂಕ ಸಮಿತಿಯನ್ನು ನೇಮಕ ಮಾಡಲಾಗಿದೆ. ಅವರು ಸರಿಯಾಗಿ ಕಾರ್ಯನಿರ್ವಹಿಸಲು ನೇಮಕ ಮಾಡಲಾಗಿದೆ. ಸಿಎಂ ಅವರ ಆದೇಶ ಮೇರೆಗೆ 52 ಸಾವಿರ ಕೋಟಿ ಅನುದಾನವನ್ನು ರಾಜ್ಯದಲ್ಲಿ ಖರ್ಚು ಮಾಡಲಾಗುತ್ತಿದೆ. ಆದರೆ ವಿರೋಧ ಪಕ್ಷದವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಜನತೆಗೆ ಸಿಎಂ, ಅವರು ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಗೃಹ ಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ, ಗೃಹಜೋತಿ, ಶಕ್ತಿಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಶಕ್ತಿಯೋಜನೆಯಲ್ಲಿ 5 ಕೋಟಿ ಅಧಿಕ ಪ್ರಯಾಣ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಎಲ್ಲ ಜಾತಿ, ಧರ್ಮದವರಿಗೆ ನ್ಯಾಯ ದೊರೆಕಿಸುವ ಕೆಲಸ ನಮ್ಮ ಸರಕಾರ ಮಾಡುತ್ತಿದೆ. ಅಧಿಕಾರಿಗಳು ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮಲ್ಲಿ ಸಣ್ಣ, ಪುಟ್ಟ ಲೋಪದೋಷಗಳು ಇದ್ದರೂ ಸಹ ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು. 

               ನಗರದ ಬಸ್ ನಿಲ್ದಾಣವನ್ನು ವೀಕ್ಷಣೆಯನ್ನು ಮಾಡಿದ್ದರು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರನ್ನು ಮಾತನಾಡಿಸುವ ಮೂಲಕ ಸರಕಾರದಿಂದ ಅನುಕೂಲತೆಗಳ ಬಗ್ಗೆ ವಿಚಾರಿಸಿದರು.  ತಾಲೂಕಾಧ್ಯಕ್ಷ ಕಲ್ಲಪ್ಪ ಗಿರಡ್ಡಿ, ಬಸವರಾಜ ಹರಕಂಗಿ, ಕುಮಾರ ಆಲಗೂರ, ಅಣ್ಣಪ್ಪ ಶಿರಹಟ್ಟಿ, ಶಂಬು ಕಂಕಣವಾಡಿ, ಸಾಧೀಕ ಭಂಟನೂರ, ಶ್ರೀಮಂತ ಪಾರ್ಥನಳ್ಳಿ, ತುಕಾರಾಮ ಪವಾರ, ರಾಮು ಚಿನಗುಂಡಿ, ಸಿದ್ರಾಮ ನ್ಯಾಮಗೌಡ ಸೇರಿದಂತೆ ಅನೇಕರು ಇದ್ದರು.