ರಾಕಸಕೊಪ್ಪ ಜಲಾಶಯದ ನೀರಿನ ಮಟ್ಟ ವೀಕ್ಷಿಸಿದ ಶಾಸಕ ಅನಿಲ ಬೆನಕೆ
ಲೋಕದರ್ಶನ ವರದಿ
ಬೆಳಗಾವಿ 13: ದಿ. 13ರಂದು ಬೆಳಗಾವಿ ನಗರದನೀರಿನ ಸಮಸ್ಯೆಯನ್ನು ಬಗೆಹರಿಸಲು ಇಂದು ಶಾಸಕ ಅನಿಲ ಬೆನಕೆರವರುಕನರ್ಾಟಕ ಜಲ ಮಂಡಳಿ ಅಧಿಕಾರಿಗಳೊಂದಿಗೆ ರಾಕಸಕೊಪ್ಪ ಜಲಾಶಯಕ್ಕೆ ಭೆೇಟಿ ನೀಡಿ ಚಚರ್ೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಕಸಕೊಪ್ಪ ಜಲಾಶಯದಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಆಗುತ್ತಿದ್ದು ಇದರ ಸಾಮಥ್ರ್ಯ 0.5 (8 ಟಿ.ಎಮ್.ಸಿ) ಇರುತ್ತದೆ. ಸದ್ಯಕ್ಕೆ ಬೆಳಗಾವಿ ನಗರಕ್ಕೆ ದಿನವೊಂದಕ್ಕೆ 12 ಎಮ್.ಜಿ.ಡಿ ನೀರು ಪೂರೈಕೆ ಆಗುತ್ತಿದೆ ಹಾಗೂ ಇಂದಿನ ಮೌಲ್ಯ ಮಾಪನದ ಪ್ರಕಾರ 0.07 ಟಿ.ಎಮ.ಸಿ ನೀರು ಜಲಾಶಯದಲ್ಲಿದೆ ಎಂದು ತಿಳಿಸಿದರು.ಜಲಾಶಯದಲ್ಲಿ ಈಗಿರುವ ನೀರುಜೂನ 10 ರವರೆಗೆ ಬೆಳಗಾವಿ ನಗರಕ್ಕೆ ಸಮರ್ಪಕ ಪೂರೈಸಬಹುದಾಗಿದೆ. ಆದ್ದರಿಂದ ಬೆಳಗಾವಿಯ ಎಲ್ಲ ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಸಿಕೊಳ್ಳಬೇಕು ಹಾಗೂ ನೀರನ್ನು ಪೋಲಾಗದಂತೆ ಜಾಗೃತೆಯನ್ನು ವಹಿಸಿಕೊಳ್ಳಬೇಕು ಎಂದು ಶಾಸಕ ಅನಿಲ ಬೆನಕೆ ರವರು ಮಾದ್ಯಮಗಳ ಮುಖಾಂತರಜನರಲ್ಲಿ ವಿನಂತಿಸಿದರು. ನಂತರ ಅಧಿಕಾರಿಗಳೊಂದಿಗೆ ಚಚರ್ಿಸಿದ ಶಾಸಕರು ನೀರು ಪೋಲಾಗದಂತೆ ನಗರದಲ್ಲಿ ದುರಸ್ಥಿಯಲ್ಲಿರುವ ಪೈಪಲೈನ್ಗಳನ್ನು ರಿಪೇರಿ ಮಾಡಿ ವ್ಯವಸ್ಥಿತವಾಗಿ ಇಡಬೇಕು ಎಂದು ಸೂಚಿಸಿದರು ಹಾಗೂ ನೀರಿನಅಭಾವ ಬಾರದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು ಹಾಗೂ ಈ ತಿಂಗಳಿನಲ್ಲಿ ಉತ್ತಮ ಮಳೆಯಾದರೆ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಲಮಂಡಳಿ ಸಹಾಯಕ ಇಂಜಿನೀಯರಾದ ಮಲ್ಲಿಕಾಜರ್ುನ ರಾಚುನಾಯ್ಕರರವರು ಶಾಸಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಜಲ ಮಂಡಳಿ ಸಹಾಯಕಇಂಜಿನೀಯರ ಮಲ್ಲಿಕಾಜರ್ುನ ರಾಚನಾಯ್ಕರ, ಜಲ ಮಂಡಳಿ ಇತರ ಸಿಬ್ಬಂದಿಗಳು, ಮುಖಂಡರಾದ ಮಹಾಲಿಂಗಪ್ಪತಂಗಡಗಿ, ರಾಹುಲ ಮುಚ್ಚಂಡಿ, ನಾಗೇಶ ಲಂಗರಖಂಡೆ, ವಿಪುಲ ಜಾಧವ, ಶಾಸಕರ ಆಪ್ತ ಸಹಾಯಕರಾದ ವಿ.ಎಮ್.ಪತ್ತಾರ, ಶಂಕರ ಪಾಟೀಲ, ಮನೊಹರ ಮುತಗೇಕರ ಹಾಗೂ ಇತರರು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 