ನೂತನ ಅಧ್ಯಕ್ಷರಾಗಿ ಬೆಳ್ಳೆಟ್ಟೆರ ಅವಿರೋಧ ಆಯ್ಕೆ
Bellette elected unopposed as new president
ಹಾವೇರಿ 12 : ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಹಾವೇರಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಹಿರೇಕೆರೂರಿನ ಡಾ. ಬಿ. ಆರ್. ತಂಬಾಕದ ಬಾಲಕರ ಪ್ರೌಢಶಾಲೆಯ ಶಿಕ್ಷಕ ಡಾ. ರಾಜೇಂದ್ರ ಬೆಳ್ಳೆಟ್ಟೆರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಎಚ್. ಪಿ. ಬಣಕಾರ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಜಿಲ್ಲಾ ಗುರುಭವನದಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ರಾಜೇಂದ್ರ ಬೆಟ್ಟೆಳ್ಳೇರ ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯ ಘಟಕದ ಜಿ. ಆರ್. ಭಟ್, ಮತ್ತಿತರರು ಶುಭ ಹಾರೈಸಿದ್ದಾರೆ. ಸಭೆಯಲ್ಲಿ ಎಚ್. ಪಿ. ಬಣಕಾರ, ಕಾರ್ಯದರ್ಶಿ ಎನ್. ಎನ್. ಕುಂದೂರು, ಹಾವೇರಿ ತಾಲೂಕು ಅಧ್ಯಕ್ಷ ಎಂ. ಬಿ. ರಮೇಶ, ಡಿ. ಡಿ. ಲಂಗೋಟಿ, ಕುಮಾರ ಗಾಣಗೇರ, ಎಸ್. ಡಿ. ಪರಡ್ಡಿ, ಬಸವರಾಜ ಜೆ. ಎ. ಎಂ. ಎಚ್. ಪಾಟೀಲ, ಗಣೇಶ ಬೆಳಕೇರಿ, ರವಿ ವಿ. ಎಸ್. ವಿ. ಕಪ್ಪರದ, ಎಸ್. ಎನ್. ಮಳೆಪ್ಪನವರ, ಮತ್ತಿತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 