ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕಕ್ಕೆ ಶೂನ್ಯ, ಸುಳ್ಳು-ದುರ್ಬಳಕೆ-ಅಹಂಕಾರಕ್ಕೆ ಪೂರ್ಣ ಅಂಕ
Belgaum session: Zero marks for North Karnataka, full marks for lies-abuse-arrogance
ಬೆಳಗಾವಿ 21: ಅಧಿವೇಶನ ಮುಗಿದಿದೆ. ಆದರೆ ಉತ್ತರ ಕರ್ನಾಟಕದ ಜನರಿಗೆ ಸಿಕ್ಕಿದ್ದೇನು? ಉತ್ತರ ಒಂದೇ ಮತ್ತೊಮ್ಮೆ ಮೋಸ. ಮತ್ತೆ ನಿರಾಶೆ. ಮತ್ತೆ ಕಡೆಗಣನೆ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ನಡೆಯಬೇಕಿದ್ದ ಅಧಿವೇಶನ, ಈ ಬಾರಿ ಸಂಪೂರ್ಣವಾಗಿ ಕಾಂಗ್ರೆಸ್ ಸರ್ಕಾರದ ಸುಳ್ಳು, ದುರ್ಬಳಕೆ ಮತ್ತು ಅಹಂಕಾರದ ಪ್ರದರ್ಶನ ವೇದಿಕೆಯಾಗಿಯೇ ಉಳಿದಿದೆ. ನೀರಾವರಿ, ಉದ್ಯೋಗ, ಕೈಗಾರಿಕೆ, ಮೂಲಸೌಕರ್ಯ, ವಿಶೇಷ ಪ್ಯಾಕೇಜ್ ಶ್ರಿ ಈ ಭಾಗದ ಜನರ ಬದುಕಿಗೆ ನೇರವಾಗಿ ಸಂಬಂಧಿಸಿದ ಯಾವ ವಿಷಯಕ್ಕೂ ಯಾವುದೇ ಸ್ಪಷ್ಟ ನಿರ್ಣಯಗಳು ಹೊರಬಂದಿಲ್ಲ.ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸುಳ್ಳು ಹೇಳಿಕೆಗಳು, ಸದನದ ಗೌರವಕ್ಕೆ ಧಕ್ಕೆ ತಂದ ವರ್ತನೆ ಮತ್ತು ‘ಗೃಹ ಲಕ್ಷ್ಮಿ’ ಯೋಜನೆಯಲ್ಲಿ ನಡೆದಿರುವ ರೂ. 5,000 ಕೋಟಿ ದುರ್ಬಳಕೆಯ ಗಂಭೀರ ಆರೋಪಗಳು ಮಾತ್ರ ಈ ಅಧಿವೇಶನದ ಪ್ರಮುಖ ಸುದ್ದಿಗಳಾಗಿ ಹೊರಹೊಮ್ಮಿವೆ. ಇದು ಕಾಂಗ್ರೆಸ್ ಆಡಳಿತದ ನೈಜ ಮುಖವನ್ನು ಬಯಲಿಗೆಳೆದ ಅಧಿವೇಶನವಾಗಿದೆ.
ಸದನದಲ್ಲೇ ಸುಳ್ಳು ಹೇಳುವ ಸಚಿವರು ಇದು ಪ್ರಜಾಪ್ರಭುತ್ವವೇ?ಶಾಸನಸಭೆ ಜನರ ಧ್ವನಿಯಾಗಬೇಕಾದ ಪವಿತ್ರ ವೇದಿಕೆ. ಆದರೆ ಅಲ್ಲಿ ಸಚಿವೆಗಳು ನಿರ್ಲಜ್ಜವಾಗಿ ಸುಳ್ಳು ಹೇಳುತ್ತಿದ್ದರೆ, ಪ್ರಶ್ನೆ ಕೇಳುವ ಶಾಸಕರನ್ನು ತಿರಸ್ಕರಿಸುತ್ತಿದ್ದರೆ, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ನೇರ ಅವಮಾನವಲ್ಲವೇ?ಲಕ್ಷ್ಮಿ ಹೆಬ್ಬಾಳ್ಕರ್ ಅವರ ವರ್ತನೆ ಕೇವಲ ರಾಜಕೀಯ ಶಿಷ್ಟಾಚಾರದ ಉಲ್ಲಂಘನೆಯಲ್ಲ. ಅದು ಸದನದ ಪಾವಿತ್ರ್ಯಕ್ಕೆ ಹಾಕಿದ ಮಸಿ. ಕಾಂಗ್ರೆಸ್ ಸರ್ಕಾರದ ಅಹಂಕಾರಿ ಸಂಸ್ಕೃತಿಯ ಪ್ರತಿಬಿಂಬವೇ ಈ ವರ್ತನೆ.ಗೃಹ ಲಕ್ಷ್ಮಿ: ಮಹಿಳೆಯರ ಹೆಸರಿನಲ್ಲಿ ರಾಜ್ಯದ ಹಣದ ದೋಚಾಟ?ಮಹಿಳಾ ಸಬಲೀಕರಣ ಎಂಬ ಸುಂದರ ಮುಖವಾಡದ ಹಿಂದೆ ನಿಜವಾಗಿ ನಡೆಯುತ್ತಿರುವುದೇನು?‘ಗೃಹ ಲಕ್ಷ್ಮಿ’ ಯೋಜನೆಯಲ್ಲಿ ಸುಮಾರು ?5,000 ಕೋಟಿ ಹಣ ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದರೂ, ಕಾಂಗ್ರೆಸ್ ಸರ್ಕಾರ ಇದುವರೆಗೂ ಒಂದು ಸ್ಪಷ್ಟ ಉತ್ತರ ನೀಡಿಲ್ಲ.ಹಣ ಯಾರಿಗೆ ಹೋಯಿತು?ಹೇಗೆ ಹೋಯಿತು?ಲೆಕ್ಕಪತ್ರಗಳು ಎಲ್ಲಿವೆ?ಪ್ರಶ್ನೆಗಳು ಸಾವಿರ. ಉತ್ತರ ಶೂನ್ಯ.
ಇದು ಜನಕಲ್ಯಾಣ ಯೋಜನೆಯೇ, ಅಥವಾ ರಾಜ್ಯದ ಖಜಾನೆಯನ್ನು ಖಾಲಿ ಮಾಡುವ ಯೋಜನೆಯೇ ಎಂಬ ಅನುಮಾನ ಈಗ ಜನಮನದಲ್ಲಿ ಗಟ್ಟಿಯಾಗಿ ಬೇರೂರಿದೆ.ಉತ್ತರ ಕರ್ನಾಟಕ: ಮತ್ತೆ ‘ಸ್ಟೆಪ್‌ಮದರ್’ ವರ್ತನೆಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿಯಾಗುವುದಿಲ್ಲ. ನಿರ್ಣಯಗಳಿಲ್ಲದ ಅಧಿವೇಶನ ಕೇವಲ ರಾಜಕೀಯ ನಾಟಕವಷ್ಟೇ.ಈ ಭಾಗದ ಯುವಕರಿಗೆ ಉದ್ಯೋಗ, ರೈತರಿಗೆ ನೀರು, ಪ್ರದೇಶಕ್ಕೆ ಕೈಗಾರಿಕೆ ಯಾವುದಕ್ಕೂ ದಿಕ್ಕು ತೋರಿಸದ ಕಾಂಗ್ರೆಸ್ ಸರ್ಕಾರ, ಉತ್ತರ ಕರ್ನಾಟಕವನ್ನು ಮತ್ತೊಮ್ಮೆ ಬಲಿಪಶುವಾಗಿಸಿದೆ. ಇದು ಅಭಿವೃದ್ಧಿಯ ಮೇಲಿನ ನಿರ್ಲಕ್ಷ್ಯವಲ್ಲ, ನೇರ ದ್ರೋಹ.ಬಿಟ್ಟಿ ಭಾಗ್ಯಗಳ ಮದ್ಯದಲ್ಲಿ ಮುಳುಗಿದ ರಾಜ್ಯಬಿಟ್ಟಿ ಭಾಗ್ಯಗಳ ಆಮಿಷಕ್ಕೆ ಮರುಳಾಗಿ ಮತ ಚಲಾಯಿಸಿದ ಪರಿಣಾಮವಾಗಿ ಇಂದು ರಾಜ್ಯದ ಆರ್ಥಿಕತೆ ಉಸಿರುಗಟ್ಟುತ್ತಿದೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುವ ಸರ್ಕಾರ, ಅಸ್ಪಷ್ಟ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿಯುತ್ತಿದೆ.
ಇದು ಆಡಳಿತವಲ್ಲ ಶ್ರಿ ಅರಾಜಕತೆ. ಇದು ಜನಸೇವೆಯಲ್ಲ ಶ್ರಿ ಜನವಂಚನೆ.ಕಠಿಣ ಸತ್ಯಏನೆಂದ್ರೆ ರಾಜ್ಯ ಉಳಿಯಬೇಕಾದರೆ ಈ ಸರ್ಕಾರ ಉಳಿಯಬಾರದುಇವತ್ತು ಆತ್ಮವಲೋಕನ ಮಾಡಿಕೊಳ್ಳಬೇಕಾದ ಸಮಯ ಬಂದಿದೆ.ಸುಳ್ಳು, ದುರ್ಬಳಕೆ, ಅಹಂಕಾರ ಮತ್ತು ಉತ್ತರ ಕರ್ನಾಟಕದ ಮೇಲಿನ ನಿರ್ಲಕ್ಷ್ಯ ಈ ಎಲ್ಲದರ ಒಟ್ಟು ಫಲವೇ ಇಂದಿನ ಕಾಂಗ್ರೆಸ್ ಸರ್ಕಾರ.ರಾಜ್ಯ ಉಳಿಯಬೇಕಾದರೆ ಈ ಸರ್ಕಾರ ಉಳಿಯಬಾರದು ಎಂಬುದು ಕಟುವಾದರೂ ಅಚಲವಾದ ಸತ್ಯ.ಜನರು ಪ್ರಶ್ನೆ ಕೇಳಲೇಬೇಕು.ಉತ್ತರ ಕೊಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.ಇಲ್ಲವಾದರೆ ಜನರ ತೀಪು ಮುಂದಿನ ದಿನಗಳಲ್ಲಿ ಇನ್ನೂ ಕಠಿಣವಾಗುವುದು ಖಚಿತ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 