ಬೆಳಗಾವಿ ಚಳಿಗಾಲ ಅದೀವೇಶನ ವಿದ್ಯಾರ್ಥಿಗಳಿಂದ ವಿಕ್ಷಣೆ

ಬೆಳಗಾವಿ ಚಳಿಗಾಲ ಅದೀವೇಶನ ವಿದ್ಯಾರ್ಥಿಗಳಿಂದ ವಿಕ್ಷಣೆ Belgaum Winter Festival observed by students

 ಯಮಕನಮರಡಿ, 13 : ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅದಿವೇಶನ ವಿಕ್ಷಣೆಗೆ ಎನ್‌.ಎಸ್‌.ಎಸ್‌. ವಿದ್ಯಾರ್ಥಿಗಳ ಜೊತೆ ಬೇಟಿ ನೀಡಿ ಅದಿವೇಶನ ವಿಕ್ಷಿಸಲಾಯಿತು. 

 ವಿದ್ಯಾರ್ಥಿಗಳು ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆಯ ಕಾರ್ಯಕಲಾಪಗಳನ್ನು ನೇರವಾಗಿ ನೋಡಿ  ವಿಧಾನಸಭೆಯ ಕಾರ್ಯ ಚಟುವಟಿಕೆಗಳನ್ನು ಅರಿತುಕೊಂಡರು. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀಯುತ ಆರ್ ಅಶೋಕ ರವರು ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಹಲವು ಅಭಿವೃದ್ಧಿ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶ್ನೆ ಕೇಳುತ್ತಿರುವ ದೃಶ್ಯವನ್ನು ವಿದ್ಯಾರ್ಥಿಗಳು ವಿಕ್ಷಕರ ಗ್ಯಾಲರಿಯಿಂದ ವಿಕ್ಷಿಸಿ ಸದನದ ಕಾರ್ಯಕಲಾಪಗಳ ಬಗ್ಗೆ ತಿಳಿದುಕೊಂಡರು.  

ನಂತರದಲ್ಲಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು.  

ಈ ಸಂದರ್ಭದಲ್ಲಿ ಮಾನ್ಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ  ಉಪಸ್ಥಿತಿ ಇದ್ದರು. ನಂತರದಲ್ಲಿ ರಾಜಸಂಹಗಡದ ಐತಿಹಾಸಿಕ ಕೋಟೆಗೆ ಬೇಟಿ ನೀಡಿ ವಿದ್ಯಾರ್ಥಿಗಳ ವಿಕ್ಷಣೆಗೆ ಅವಕಾಶ ಕಲ್ಪಿಸಲಾಯಿತು. ಅದಿವೇಶನ ವಿಕ್ಷಣೆಯ ಉಸ್ತುವಾರಿಯನ್ನು ಉಪನ್ಯಾಸಕರಾದ ಬಿ.ಬಿ.ಕೊಡ್ಲಿ, ಎಸ್‌.ಆರ್‌.ತಬರಿ ಹಾಗೂ ಸವಿತಾ ಗುರವ ವಹಿಸಿಕೊಂಡಿದ್ದರು.