ಜ.10, 11ರಂದು ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ
Belgaum District 17th Kannada Literary Conference on January 10th and 11th
ಹಾರೂಗೇರಿ, 07 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಜ.10 ಹಾಗೂ 11 ರಂದು ಪಟ್ಟಣದ ಆದಿನಾಥ ಜೈನ ದಿಗಂಬರ ಸಭಾಭವನದಲ್ಲಿ ರಸ ವಿವರ್ಶಕ ಹಿರಿಯ ಸಾಹಿತಿ ಡಾ.ವಿ.ಎಸ್.ಮಾಳಿ ಅವರ ಸರ್ವಾಧ್ಯಕ್ಷತೆಯಲ್ಲಿ ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಜ.10 ರಂದು ಶನಿವಾರ ಬೆಳಿಗ್ಗೆ 8ಗಂಟೆಗೆ ಮಹಾದೇವ ಜಾಧವ ರಾಷ್ಟ್ರಧ್ವಜ, ಜಿಲ್ಲಾ ಘಟಕ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಪರಿಷತ್ತು ಧ್ವಜ ಹಾಗೂ ರಾಯಬಾಗ ತಾಲೂಕು ಘಟಕ ಕಸಾಪ ಅಧ್ಯಕ್ಷ ಈರನಗೌಡ ಪಾಟೀಲ ನಾಡ ಧ್ವಜಾರೋಹನ ನೇರವೇರಿಸುವರು.
9.ಗಂಟೆಗೆ ಪಟ್ಟಣದ ಜಂಬಗಿ ಆಸ್ಪತ್ರೆಯಿಂದ ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಶ್ರೀ ವಿಶ್ವಕರ್ಮ ವೃತ್ತ, ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಶ್ರೀ ಚನ್ನವೃಷಭೇಂದ್ರ ವೃತ್ತದಿಂದ ಸಮ್ಮೇಳನದ ವೇದಿಕೆವರೆಗೆ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಡಾ.ವಿ.ಎಸ್.ಮಾಳಿ ಹಾಗೂ ಕನ್ನಡಾಂಬೆಯ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಭವ್ಯ ಮೆರವಣಿಗೆಯ ದಿವ್ಯ ಸಾನಿಧ್ಯವನ್ನು ಪರಮಾನಂದವಾಡಿಯ ಶ್ರೀ ಅಭಿನವ ಬ್ರಹ್ಮಾನಂದ ಸ್ವಾಮೀಜಿ ವಹಿಸಲಿದ್ದಾರೆ. ಮಾಜಿ ಶಾಸಕ ಪಿ.ರಾಜೀವ್ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದು, ಮಾಜಿ ಲೋಕಸಭಾ ಸದಸ್ಯ ಅಮರಸಿಂಹ ಪಾಟೀಲ ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ತಹಸೀಲ್ದಾರ ಮಹಾದೇವ ಸನಮುರಿ, ಚಿಕ್ಕೋಡಿ ಡಿಡಿಪಿಐ ಆರ್.ಎಸ್.ಸೀತಾರಾಮು ಪಾಲ್ಗೊಳ್ಳುವರು.
ಬೆಳಿಗ್ಗೆ 10.30ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನೇರವೇರಲಿದ್ದು, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ, ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಸಮ್ಮುಖ, ಸಮ್ಮೇಳನಾಧ್ಯಕ್ಷ ಡಾ.ವಿ.ಎಸ್.ಮಾಳಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ ಹಾಗೂ ಶಾಸಕ ಮಹೇಂದ್ರ ತಮ್ಮಣ್ಣವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯನವರು ಉದ್ಘಾಟಿಸಲಿರುವರು.
ಈವೇಳೆ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದು, ಜಿಲ್ಲಾ ಕಸಾಪ ಘಟಕ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿಗಳನ್ನಾಡಲಿದ್ದಾರೆ. ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಲೋಕಸಭೆ ಸದಸ್ಯರಾದ ಜಗದೀಶ ಶೆಟ್ಟರ ಮಳಿಗೆಗಳು, ಪ್ರೀಯಾಂಕಾ ಜಾರಕಿಹೊಳಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮತ್ತು ಲೋಕಸಭೆ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಗ್ರಂಥಗಳನ್ನು ಲೋಕಾರೆ್ಣಗೊಳಿಸುವರು.
ಮಧ್ಯಾಹ್ನ 2ಕ್ಕೆ ಬೆಳಗಾವಿ ಜಿಲ್ಲೆಯ ಜನಪದ ಕಲಾ ಪರಂಪರೆಗಳ ಮೊದಲ ಗೋಷ್ಠಿಯಲ್ಲಿ ಕವಲಗುಡ್ಡದ ಶ್ರೀ ಅಮರೇಶ್ವರ ಮಹಾರಾಜರು ಸಾನಿಧ್ಯ, ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸುವರು. ಡಾ.ಮಧುಸೂದನ ಬೀಳಗಿ ಡೊಳ್ಳಿನ ಪದಗಳು, ಡಾ.ಗುರುದೇವಿ ಹುಲೆಪ್ಪನವರ ಲಾವಣಿ/ತತ್ವಪದಗಳು, ಡಾ.ರಾಮಕೃಷ್ಣ ಮರಾಠೆ ಬಯಲಾಟಗಳ ಕುರಿತು ಮಾತನಾಡಲಿದ್ದಾರೆ. ಹಿಡಕಲ್ಲ ಹಾಲಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ, ಮಹಾದೇವಿ ದೇವರವರ ಹಾಗೂ ಈಶ್ವರಚಂದ್ರ ಬೆಟಗೇರಿ ಅವರಿಂದ ಕಲಾಪ್ರದರ್ಶನ ಜರುಗಲಿದೆ.
ಸಂಜೆ 4.30ಕ್ಕೆ ಕವಿ ಸಮಯ ಎರಡನೇ ಗೋಷ್ಠಿ ನಡೆಯಲಿದ್ದು, ಖ್ಯಾತ ಕಥೆಗಾರ ಕಲ್ಲೇಶ ಕುಂಬಾರ ಅಧ್ಯಕ್ಷತೆಯಲ್ಲಿ ನಾಗೇಶ ನಾಯಿಕ ಉದ್ಘಾಟಿಸುವರು. 6 ಗಂಟೆಗೆ ಸಾಂಸ್ಕೃತಿಕ ಹಬ್ಬ ನಡೆಯಲಿದ್ದು, ಆಯ್ದ ಕಲಾ ತಂಡಗಳಿಂದ ನೃತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
ಜ.11 ರಂದು ರವಿವಾರ ಬೆಳಿಗ್ಗೆ 9ಗಂಟೆಗೆ ಮೂರನೇ ಗೋಷ್ಠಿಯಲ್ಲಿ ಸಾಹಿತಿ ಶಿವಾನಂದ ಬೆಳಕೂಡ ಅಧ್ಯಕ್ಷತೆ ವಹಿಸಲಿದ್ದು, ಪ್ರಣಯ ಪಾಟೀಲ ಉದ್ಘಾಟಿಸುವರು. ರಂಗಕಲಾವಿದ ಜಯಾನಂದ ಮಾದರ, ಆಶುಕವಿ ಸಿದ್ದಪ್ಪ ಬಿದರಿ ಅತಿಥಿಗಳಾಗಿರುವರು.
10 ಗಂಟೆಗೆ ನಡೆಯಲಿರುವ ಸ್ಪರ್ಧಾ ಜಗತ್ತು ನಾಲ್ಕನೇ ಗೋಷ್ಠಿಯಲ್ಲಿ ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ವಿಶ್ರಾಂತ ಅಪರ ಆಯುಕ್ತ ವೆಂಕಟೇಶ ಮಾಚಕನೂರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವಿಜಯಪೂರ ಚಾಣಕ್ಯ ಕರಿಯರ ಅಕಾಡೆಮಿಯ ಎನ್.ಎಂ.ಬಿರಾದಾರ, ಶಿಕಾರಿಪುರ ಸಾಧನಾ ಅಕಾಡೆಮಿಯ ಮಂಜುನಾಥ ಬಿ ಆಗಮಿಸುವರು. ಬೆಳಗಾವಿ ಬಿಮ್ಸ್ ನಿರ್ದೇಶಕ ಡಾ.ಸಿದ್ದು ಹುಲ್ಲೋಳಿ ಅವರು ಸ್ಪರ್ಧಾರ್ಥಿಗಳಿಗೆ ದಿಕ್ಸೂಚಿ ನುಡಿಗಳನ್ನಾಡುವರು, ಈ ವೇಳೆ 50ಕ್ಕೂ ಹೆಚ್ಚು ಸಾಧಕರನ್ನು ಗೌರವಿಸಲಾಗುತ್ತಿದೆ.
12.30 ಗಂಟೆಗೆ ನೆಲ-ಜಲ-ಸಂಸ್ಕೃತಿ-ಚಿಂತನೆ ಕುರಿತ ಐದನೇ ಗೋಷ್ಠಿಯ ಸಾನಿಧ್ಯವನ್ನು ಶೇಗುಣಸಿಯ ಶ್ರೀ ಡಾ.ಮಹಾಂತ ಸ್ವಾಮೀಜಿ, ಜಾನಪದ ವಿದ್ವಾಂಸ ಡಾ.ಸಿ.ಕೆ.ನಾವಲಗಿ ಅತಿಥಿಗಳಾಗಿ, ನೆಲಮೂಲದ ಸಾಂಸ್ಕೃತಿಕ ಮೌಲ್ಯಗಳ ಕುರಿತು ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ಮತ್ತು ಜಾಲತಾಣ ಯುಗದಲ್ಲಿ ಪುಸ್ತಕ ಸಂಸ್ಕೃತಿ ಬಗ್ಗೆ ಪತ್ರಕರ್ತ ಬಾಲಶೇಖರ ಬಂದಿ ಮಾತನಾಡುವರು.
ಮಧ್ಯಾಹ್ನ 2.30ಕ್ಕೆ ಆರನೇ ಗೋಷ್ಠಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಸರ್ವಾಧ್ಯಕ್ಷ ಡಾ.ವಿ.ಎಸ್.ಮಾಳಿ ಅವರೊಂದಿಗೆ ಸಾಹಿತಿಗಳಾದ ಡಾ.ವೈ.ಎಂ,ಯಾಕೊಳ್ಳಿ, ಡಾ.ಅಶೋಕ ನರೋಡೆ, ಅಪ್ಪಾಸಾಬ ಅಲಿಬಾದಿ, ಎಚ್.ಐ.ತಿಮ್ಮಾಪೂರ, ಎಲ್.ಎಸ್.ಶಾಸ್ತ್ರೀ, ನಿರ್ಮಲಾ ಬಟ್ಟಲ, ಡಾ.ಸುಬ್ರಾಯ ಎಂಟೆತ್ತಿನವರ, ಡಾ.ರತ್ನಾ ಬಾಳಪ್ಪನವರ, ಡಾ.ಎ.ಕೆ.ಜಯವೀರ, ಡಾ.ಶಿರಿಷ್ ಜೋಶಿ, ಡಾ.ಪ್ರೀಯಂವದಾ ಹುಲಗಬಾಳಿ, ಡಾ.ಎಂ.ಬಿ.ಹೂಗಾರ, ಡಾ.ಅರುಣ ಕಲ್ಲೋಳಿಕರ, ವೀರಣ್ಣ ಮಡಿವಾಳರ ಹಾಗೂ ಡಾ.ಶೋಭಾ ಕೊಕಟನೂರ ಸಂವಾದ ನಡೆಸಲಿದ್ದಾರೆ.
3.30ಕ್ಕೆ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ ಸಾನಿಧ್ಯ ಹಾಗೂ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಅಧ್ಯಕ್ಷ ಡಾ.ವಾಯ್.ಬಿ.ಹಿಮ್ಮಡಿ ಅಧ್ಯಕ್ಷತೆಯ ಏಳನೇ ಗೋಷ್ಠಿಯಲ್ಲಿ ಸಾಧಕರಿಗೆ ಗೌರವ ನೇರವೇರುವದು.
ಸಂಜೆ 4.30ಕ್ಕೆ ಅಥಣಿ ಶಾಸಕ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಕನ್ನಡ ಸಂದೇಶ (ಸಮ್ಮೇಳನದ ಸಮಾರೋಪ) ಸಮಾರಂಭ ನಡೆಯಲಿದ್ದು, ಹಂದಿಗುಂದ ಶ್ರೀ ಶಿವಾನಂದ ಸ್ವಾಮೀಜಿ ಸಾನಿಧ್ಯ, ಸಮ್ಮೇಳನಾಧ್ಯಕ್ಷ ಡಾ.ವಿ.ಎಸ್.ಮಾಳಿ, ಮಂಗಲಾ ಮೆಟಗುಡ್ಡ ನೇತೃತ್ವದಲ್ಲಿ ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಅಣ್ಣಾಸಾಹೇಬ ಜೊಲ್ಲೆ, ರಮೇಶ ಕತ್ತಿ, ಎಸ್.ಬಿ.ಘಾಟಗೆ, ಯ.ರು.ಪಾಟೀಲ, ಮೋಹನಗೌಡ ಪಾಟೀಲ, ಡಿ.ಎಸ್.ನಾಯಿಕ, ಬಿ.ಎ.ಜಂಬಗಿ, ಅವಳೇಕುಮಾರ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಸಮ್ಮೇಳನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 