ಬೈಲಹೊಂಗಲ 01: ಮಲ್ಲಮ್ಮಳು ರಾಜಕೀಯ, ಸಾಮಜಿಕ, ಧಾಮರ್ಿಕ, ಆದ್ಯಾತ್ಮಿಕ, ಪ್ರಜ್ಞೆಯ ಜೊತೆಗೆ ನಾಡು, ನುಡಿ ಉಳಿಸಿದ್ದಾರೆ ಎಂದು ಬೈಲಹೊಂಗಲದ ಪತ್ರಿಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ, ಸಾಹಿತಿ ಪ್ರೇಮಾ ಅಂಗಡಿ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಬೆಳವಡಿ ಉತ್ಸವದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ವೀರ ರಾಣಿ ಬೆಳವಡಿ ಮಲ್ಲಮ್ಮಳು 12 ನೇ ಶತಮಾನದ ಶಿವ ಶರಣೆಯರ ಸ್ಪೂತರ್ಿ ಹಾಗೂ ಬದುಕನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಬದುಕು ಸಾಗಿಸಿ ನಮ್ಮೆಲ್ಲರಿಗೆ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ.
ಇಂದಿನ ಆಧುನಿಕ ದಿನಗಳಲ್ಲಿ ಯುವತಿಯರು ಕೇವಲ ಮೊಬೈಲ್ನಲ್ಲಿ ಕಾಲಹರಣ ಮಾಡುತ್ತಿದ್ದು, ಅಂದಿನ ದಿನಗಳಲ್ಲಿ ಮಲ್ಲಮ್ಮ ತನ್ನ ಆತ್ಮವೇ ಶರೀರದ ಚೈತನ್ಯವೆಂದು ಮುನ್ನುಗ್ಗಿದ್ದಳು. ಉತ್ಸವಗಳಲ್ಲಿ ಸಾಂಸ್ಕೃತಿಕ ಸಮಾರಂಭಗಳಲ್ಲಿ ಸಹಸ್ರಾರು ಜನರು ಸೇರಿ ಆನಂದಿಸುತ್ತಾರೆ. ಆದರೆ ವೀರರ ವಿಚಾರ ಸಂಕೀರಣ ಕಾರ್ಯಕ್ರಮದಲ್ಲಿ ಬೆರಳೆಣಿಕೆ ಪ್ರಮಾಣದಲ್ಲಿ ಜನರು ಸೇರುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಮದ ಎಲ್ಲ ಮಹಿಳೆ ಸಂಘಟನೆಗಳನ್ನು ಒಗ್ಗೂಡಿಸಿ ಒಂದು ರಸ ಪ್ರಶ್ನೆ ಆಯೋಜಿಸುವ ಏರ್ಪಡಿಸುವ ಮೂಲಕ ಹೊಸ ಆಯಾಮ ಬರೆಯಬೇಕಾಗಿದೆ ಎಂದರು.
ಮಲ್ಲಮ್ಮನ ಇತಿಹಾಸ ಕುರಿತು ಪಠ್ಯ ಪುಸ್ತಕದಲ್ಲಿ ಅಳವಡಿಸುವ ಜೊತೆಗೆ ಮಕ್ಕಳ ಬಾಲ್ಯಾವಶ್ಥೆಯಲ್ಲಿ ಪಾಲಕರು ವೀರರ ಕಥೆಗಳನ್ನು ಹೇಳಿ ಅವರಲ್ಲಿ ಸ್ಪೂತರ್ಿ ತುಂಬುವ ಕೆಲಸ ಮಾಡಬೇಕಿದೆ ಎಂದರು.
ಸಾಹಿತಿ ಗದಿಗೆಯ್ಯ ಹಿರೇಮಠ ಆಶಯ ನುಡಿ ಮಂಡಿಸಿ ಮಾತನಾಡಿ, ಉತ್ಸವದ ವಿಚಾರ ಸಂಕೀರಣದಲ್ಲಿ ಜಿಲ್ಲೆಯ ಎಲ್ಲ ಶಾಲಾ ಮಕ್ಕಳಿಗೆ ಅನುಮತಿ ನೀಡಿ ಅವರನ್ನು ಕರೆ ತರುವಂತಾಗಬೇಕು. ಇದರಿಂದ ಮಕ್ಕಳಲ್ಲಿ ವೀರ ತ್ಯಾಗ, ಬಲಿದಾನದ ಕುರಿತು ತಿಳುವಳಿಕೆ ಮೂಡುತ್ತದೆ ಎಂದರು.
ಬೆಳಗಾವಿ ರಾಣಿ ಚೆನ್ನಮ್ಮ ಪ್ರಾಧ್ಯಾಪಕ ಡಾ. ಏರಿಸ್ವಾಮಿ ಅವರು ಕನ್ನಡ ಮತ್ತು ಮರಾಠಿ ಸಾಹಿತ್ಯದಲ್ಲಿ ಬೆಳವಡಿ ಮಲ್ಲಮ್ಮನ ಕುರಿತು ಮಾತನಾಡಿ, ಬೆಳವಡಿ ಮಲ್ಲಮ್ಮಳು ಅಧಿಕಾರವಧಿಯಲ್ಲಿ ಕನ್ನಡ ಮತ್ತು ಮರಾಠಿ ಸೈನಿಕರ ಮಧ್ಯೆ ಯುದ್ಧವಾದರೂ ಅವರ ಮದ್ಯೆ ಬಾಂಧ್ಯವ್ಯ ಬೆಸೆಯಲು ಸಹಕಾರಿಯಾದರು. ಇಂದೂ ಸಹ ಅಂತಹ ವಿವಿಧ ಭಾಷಿಕರ ಮಧ್ಯೆ ಬಾಂದ್ಯವ್ಯ ಬೆಸೆಯುವ ಕೆಲಸವಾಗಬೇಕಿದೆ ಎಂದರು.
ಧಾರವಾಡ ಪತ್ರಗಾರ ಇಲಾಖೆ ಪತ್ರಪಾಲಕಿ ಮಂಜುಳಾ ಎಲಿಗಾರ ಅವರು ಸ್ಮಾರಕಗಳಲ್ಲಿ ಬೆಳವಡಿ ಮಲ್ಲಮ್ಮನ ವಿಷಯ ಕುರಿತು ಮಾತನಾಡಿ, ಬೆಳವಡಿ ಸುತ್ತಮುತ್ತಲಿನ ಭಾಗಗಳಾದ ಯಾದವಾಡ, ಮುಳಮುತ್ತಲು ಮುಂತಾದ ಕಡೆ ಇರುವ ಸ್ಮಾರಕಗಳನ್ನು ಒಂದುಗೂಡಿಸಿ ಮೂಸಿಯಂ ತೆರೆಯುವ ಕೆಲಸವಾಗಬೇಕೆಂದರು.
ನ್ಯಾಯವಾದಿ ಅಶ್ವಿನಿ ಪತ್ತಾರ ಅವರು ಮಹಿಳೆಯರ ಸ್ಪೂತರ್ಿ ಕುರಿತು ಮಾತನಾಡಿ, ಬೆಳವಡಿ ಮಲ್ಲಮ್ಮನ ಸ್ಪೂತರ್ಿಯಿಂದ ಅನೇಕ ಮಹಿಳೆಯರು ಉನ್ನತ ಮಟ್ಟಕ್ಕೆರಿದ್ದು, ಈ ನಿಟ್ಟಿನಲ್ಲಿ ಎಲ್ಲ ಮಹಿಳೆಯರು ಆದರ್ಶ ತತ್ವಗಳನ್ನು ಶೌರ್ಯ ಸಾಹಸಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.
ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಡಾ.ಎಸ್.ಎಸ್.ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಲ್ಲಮ್ಮನ ಇತಿಹಾಸ ಕುರಿತು ಸಮಗ್ರ ಅಧ್ಯಯನ ಮಾಡುವ ಜೊತೆಗೆ ಕುರುಹುಗಳನ್ನು ಪತ್ತೆ ಹಚ್ಚಿ ಬೃಹತ್ ಮೂಸಿಯಂ ನಿಮರ್ಾಣ ಅಗತ್ಯವಾಗಿದೆ ಎಂದರು.
ಮಲ್ಲಮ್ಮ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಬಿ.ಪಾಟೀಲ, ಜಿ.ಪಂ ಸದಸ್ಯ ಈರಣ್ಣ ಕರೀಕಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಕಾಲೇಜು ವಿದ್ಯಾಥರ್ಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಹಿರಿ ಸಾಹಿತಿ ಯ.ರು.ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ಮಹಾಂತೇಶ ಉಪ್ಪಿನ ನಿರೂಪಿಸಿದರು. ವಿರೇಶ ಕಾಡೇಶನವರ ವಂದಿಸಿದರು.
ರಸಪ್ರಶ್ನೆ ವಿಜೇತರು: ಬೆಳವಡಿ ಸರಕಾರಿ ಪ್ರೌಢಶಾಲೆ ಪ್ರಥಮ, ಕೆಂಗಾನೂರ ಸರಕಾರಿ ಪ್ರೌಢಶಾಲೆ ದ್ವಿತೀಯ, ಉಡಕೇರಿಯ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ ತೃತೀಯ ಸ್ಥಾನ ಪಡೆದರು.
ಆಶು ಭಾಷಣ ಸ್ಪಧರ್ೆ ವಿಜೇತರು: ಕುಮಾರ ಮಂಗಳಗಟ್ಟಿ ಪ್ರಥಮ, ಭವ್ಯಾ ಗುಗ್ಗರಿ ದ್ವಿತೀಯ, ರೇವತಿ ಮುಪ್ಪಯ್ಯನವರಮಠ, ಪೂಜಾ ವೀರಕ್ತಮಠ ತೃತೀಯ ಸ್ಥಾನ ಪಡೆದರು.