ಮಾರ್ಚ 8ರಿಂದ ಬೆಳಗಾವಿ ಚಾಂಗದೇವರ ಜಾತ್ರೆ ಆರಂಭ

ಮಾರ್ಚ 8ರಿಂದ ಬೆಳಗಾವಿ ಚಾಂಗದೇವರ ಜಾತ್ರೆ ಆರಂಭ Belagavi Changadevara Fair begins from March 8th

ಬೆಳಗಾವಿ 02 : ನಗರದ ಕಣಬರ್ಗಿ ರಸ್ತೆಯ ಶ್ರೀ ಯಮನೂರ​‍್ಪ (ಚಾಂಗದೇವ) ದೇವರ ಜಾತ್ರೆ ಮಾರ್ಚ 8ರಿಂದ 13ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.  ದಿನಾಂಕ 8ರಂದು ಗಂಧಾಭಿಷೇಕ ಉತ್ಸವ ನಿಮಿತ್ತ ಪಲ್ಲಕ್ಕಿ ಉತ್ಸವ ದೇವಸ್ಥಾನದಿಂದ ಸಿದ್ದೇಶ್ವರ ದೇವಸ್ಥಾನದವರೆಗೂ ಹೋಗಿ ಬರುವದು. ನಂತರ ದೇವಸ್ಥಾನದಲ್ಲಿ ಸಂಜೆ ಗಂಧಾಭಿಷೇಕ ನಡೆಯುವುದು. ದಿನಾಂಕ: 9ರಂದು ಮಹಾಪೂಜೆ ಹಾಗೂ ಮಹಾಪ್ರಸಾದ ನಡೆಯುವದು ಮಧ್ಯಾಹ್ನ ಶ್ರೀ ಯಲ್ಲಾಲಿಂಗೇಶ್ವರ ಭಜನಾ ಮಂಡಳ ಇವರಿಂದ ಭಜನಾ ಕಾರ್ಯಕ್ರಮ ಜರಗುವುದು.  

ದಿ. 10ರಂದು ಸಂಜೆ ಮಹಾಪೂಜೆ ಮತ್ತು ಅಶ್ವಪೂಜೆ ನಡೆಯುವುದು ಪಲ್ಲಕ್ಕಿ ಪ್ರದಕ್ಷಿಣಿ ಜರುವುದು ನಂತರ ಭಜನಾ ಕಾರ್ಯಕ್ರಮ ನಡೆಯುವುದು 11ರಂದು ಬೆಳಿಗ್ಗೆ ದಂಡವತ ಕಾರ್ಯಕ್ರಮ  9ರಿಂದ 11ರವರೆಗೆ ಸಂಜೆ ಗುರುಪೂಜೆ ನಡೆಯುವುದು ಸಂಜೆ ಭಜನಾ ಕಾರ್ಯಕ್ರಮ ಜರಗುವುದು   12ರಂದು ಮಹಾಪ್ರಸಾದ ಕಾರ್ಯಕ್ರಮ ಜರಗುವುದು ಸಂಜೆ ಪಲ್ಲಕ್ಕಿ ಉತ್ಸವ ದೇವಸ್ಥಾನ ಪ್ರದಕ್ಷಿಣಿ ನಡೆಯುವುದು ಸಂಜೆ ಭಜನೆ, ಕೀರ್ತನೆ, ಶ್ಯಾಮದತ್ತ ಭಜನಾ ಮಂಡಳ ನಿಪ್ಪಾಣಿ ಇವರಿಂದ ಕಾರ್ಯಕ್ರಮ ಜರಗುವುದು.  

13 ರಂದು ಮಧ್ಯಾಹ್ನ ಗಾರಾಣಿ ಹಾಕುವ ಕಾರ್ಯಕ್ರಮ ನಡೆಯುವುದು. ಈ ರೀತಿ ಜರಗುವ ಕಾರ್ಯಕ್ರಮಗಳಿಗೆ ಸರ್ವರು ಭಾಗವಹಿಸಲು ವಿವರಗಳಿಗೆ ಮೋ ನಂ. 9880532238, 8904090884 ಗೆ ಸಂಪರ್ಕಿಸಲು ಕೋರಲಾಗಿದೆ.