ಶಂಕರಲಿಂಗ ಜಾತ್ರೆಯ ಆರಂಭ
ಸಂಕೇಶ್ವರ 30: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಮಠ ಸಂಕೇಶ್ವರದಲ್ಲಿ ಪ್ರತಿ ವಾರ್ಷಿಕ ಸಿದ್ಧಸಾಂಖ್ಯೇಶ್ವರ ಜಾತ್ರೆ ಮತ್ತು ಆದ್ಯ ಶಂಕರಾಚಾರ್ಯ ವಿದ್ಯಾಶಂಕರ ಭಾರತಿ ದೇವಗೋಸಾವಿ ಜೀವಂತ ಸಮಾಧಿ ಪಡೆದುಕಕೊಂಡಿರುವ ಮಹಾಸ್ವಾಮಿಗಳ ಆರಾಧನಾಂಗ ರಥೋತ್ಸವ ಶ್ರೀಶಕೆ 1946 ಕ್ರೋಧಿನಾಮ ಸಂವತ್ಸರ ಮಾಘ ಶುದ್ಧ ಪಷ್ಠಿಯಿಂದ ಹುಣ್ಣಿಮೆ ಸೋಮವಾರ ದಿ: 03 ರಿಂದ 12 ರ ವರೆಗೆ ಜರುಗಲಿದ್ದು ಸಮಸ್ತ ಭಕ್ತರ ಕಲ್ಯಾಣಕ್ಕಾಗಿ ಋಗ್ವೇದ ದಶಗ್ರಂಥ ಪಾರಾಯಣವನ್ನು ಆಯೋಜಿಸಲಾಗಿದೆ. ಎಲ್ಲ ಭಕ್ತರು ಅದರ ಲಾಭವನ್ನು ಪಡೆಯಬೇಕು.
ನಾಳೆ ಶುಕ್ರವಾರ ದಿ:31 ರಂದು ಮುಂಜಾನೆ 10 ಗಂಟೆಗೆ ಉದಕ ಶಾಂತಿ, ಸಂಪ್ರೋಕ್ಷಣ ವಿಧಿ ಹಾಗೂ ಯಜ್ಞ ಹೋಮಗಳ ಹವಣಗಳನ್ನು ಏರಿ್ಡಸಿದ್ದು ನಗರದ ಎಲ್ಲ ಸದ್ಭಕ್ತರು ಹಾಗೂ ಎಲ್ಲ ಸಮಾಜಯ 24 ಜಾತಿಗಳಿಗೆ ಸೇರಿದ ಸಮಾಜದ ಮುಖಂಡ ದಂಪತಿಗಳು ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು ಸದ್ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮಗಳ ವಿವರ - ಸೋಮವಾರ ದಿ: 03/02/2025 ರಂದು ರಾತ್ರಿ 9 ಕ್ಕೆ ಅನ್ನಪೂರ್ಣೇಶ್ವರಿ ಕೋಠಿ ಪೂಜೆ, ಮಂಗಳವಾರ 04/02/2025 ರಂದು ಮುಂಜಾನೆ 9 ಗಂಟೆಗೆ ರಥಪೂಜೆ, ನವಗ್ರಹ ಹೋಮ, ರಥಸ್ಥದೇವತಾ ಪೂಜೆ, ಹೋಮ-ಬಲಿದಾನ, ಮೈರಾಳ ಬ್ರಹ್ಮಪೂಜೆ ಮಹಾನೈವೇದ್ಯ, ಬುಧವಾರ ದಿ: 05/02/2025 ರಂದು ನಿತ್ಯ ಪೂಜೆ ಮಧ್ಯಾಹ್ನ 2 ಗಂಟೆಗೆ ರಥವು ಮಠದಿಂದ ನಾರಾಯಣೇಶ್ವರ ಮಂದಿರಕ್ಕೆ ಒಯ್ಯಲಾಗುವುದು. ಗುರುವಾರ ದಿ: 06/02/2025 ರಂದು ರಥದ ವಾಸ್ತವ್ಯ ಬನಶಂಕರಿ ದೇವಸ್ಥಾನ ಹತ್ತಿರ ಇರುತ್ತದೆ. ಶುಕ್ರವಾರ ದಿ: 07/02/2025 ರಂದು ಮಹಾಯಾತ್ರೆ ಮುಂಜಾನೆ ಆದ್ಯ ಶಂಕರಾಚಾರ್ಯ ವಿದ್ಯಾಶಂಕರ ಭಾರತಿ (ದೇವಗೋಸಾವಿ) ಪೂಜೆ ಸಾಯಂಕಾಲ ರಥೋತ್ಸವ ಮಠಕ್ಕೆ ರಥದ ಆಗಮನ ಇರುವುದು.
ಜಾತ್ರೆಯ ಉತ್ಸವ ಕಾಲಕ್ಕೆ ನಿತ್ಯ ಪಲ್ಲಕ್ಕಿ ಉತ್ಸವ ಮಂತ್ರ ಪುಷ್ಪ ಜರುಗುವುದು ಎಲ್ಲ ಕಾರ್ಯಕ್ರಮಗಳಿಗೆ ಭಕ್ತರು ಉಪಸ್ಥಿತರಿದ್ದು ಅಗ್ನಿಹೋತ್ರ ಯಜ್ಞದರ್ಶನ ಪ್ರಸಾದವನ್ನು ಪಡೆಯಬೇಕು ರಥೋತ್ಸವಕ್ಕಾಗಿ ದೇಣಗಿ ಹಾಗೂ ಕಾಣಿಕೆಯನ್ನು ಆಫೀಸಿನಲ್ಲಿ ಕೊಟ್ಟು ರಸೀದಿ ಪಡೆಯಬೇಕು. ಎಂದು ಶಂಕರಾಚಾರ್ಯ ಸಂಸ್ಥಾನ ಮಠದ ಮ್ಯಾನೇಜರ ಅರ್ಜುನ ಕಾನವಡೆ ಇವರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಪತ್ರಿಕಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.