ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ
Beeralingeshwara Fair Festival
ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ
ಸವಣೂರು 05: :ತಾಲೂಕಿನ ಹುರುಳಿಕುಪ್ಪಿ ಗ್ರಾಮದ ಶ್ರಾವಣ ಮಾಸದಲ್ಲಿ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.ವಿವಿಧ ಪೂಜೆ ಹಾಗೂ ಕರಿ ಕಟ್ಟುವುದು ಕಾರ್ಯಕ್ರಮ ನೆರವೇರಿತು ನಂತರ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ಡೊಳ್ಳಿನ ಮೇಳ ಹಾಗೂ ಬಾಜಾ ಭಜಂತ್ರಿ ಮೇಳದವರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದ ಹೊರವಲಯದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ತಲುಪಿತು. ಭಕ್ತಾದಿಗಳು ಬಂಡಾರ ಹಚ್ಚುವ ಮೂಲಕ ದೀಡ ನಮಸ್ಕಾರ ಹಾಕಿ ತಮ್ಮ ಹರಿಕೆಯನ್ನು ತೀರಿಸಿದರು. ಸ್ವಾಮಿಯ ವಿವಿಧ ಪೂಜೆ ಡೊಳ್ಳಿನ ಮೇಳ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಿದವು.ಸುತ್ತಮುತ್ತಲಿನ ಗ್ರಾಮದ ಭಕ್ತರು ಶ್ರೀಬೀರಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದರು.ಈ ಸಂದರ್ಭದಲ್ಲಿ ಹೊನ್ನಪ್ಪ ಕೊಳ್ಳವರ,ಭರಮಪ್ಪ ಕಲಾದಗಿ, ಅಶೋಕ ಬಿಜ್ಜೂರ, ಫಕೀರಶ ಪೂಜಾರ,ಮಂಜು ಕೊಪ್ಪದ,ಏಕಪ್ಪ ಬಿಜ್ಜೂರ,ಪುಟ್ಟೇಶಶ ಕಳ್ಳಿಮನಿ,ಹನುಮಂತಪ್ಪ ವೈಯ್ಯಾಳಿ,ಉಡಚಪ್ಪ ಮಾನೇಗಾರ,ಗಣೇಶ ಕುಲಕರ್ಣಿ,ಮಂಜುನಾಥ ಪಿಳ್ಳಿ.ಹಾಗೂ ಗ್ರಾಮಸ್ಥರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 