ಕಳ್ಳರ ಬಗ್ಗೆ ಜಾಗೃತರಾಗಿ ಇರಬೇಕು:ಬಿ ಎಸ್ ನೇಗನಾಳ

ಕಳ್ಳರ ಬಗ್ಗೆ ಜಾಗೃತರಾಗಿ ಇರಬೇಕು:ಬಿ ಎಸ್ ನೇಗನಾಳ Be aware of thieves: BS Neganal

               ಇಂಡಿ  24: ತಾಲ್ಲೂಕಿನ್ಯಾದಂತ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಸಾಗಿದ್ದು.ಜನರು ಜಾಗೃತರಾಗಿ ಇರಬೇಕು ಎಂದು ಹೋರ್ತಿ ಪೋಲಿಸ್ ಠಾಣೆ ಎ ಎಸ್ ಐ ಬಿ ಎಸ್ ನೇಗನಾಳ ಅವರು ಹೇಳಿದರು ಅವರು ಇಂಡಿ ತಾಲ್ಲೂಕಿನ ಹೋರ್ತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ತಡವಲಗಾ ನಿಂಬಾಳ ಲಿಂಗದಹಳ್ಳಿ ಕ್ಯಾತೀನಕೇರಿ ಗ್ರಾಮಗಳಲ್ಲಿ ಜನರಿಗೆ ಜಾಗೃತಿ ನೀಡಿದ ಅವರು ಬೀಗ ಹಾಕಿದ ಮನೆಗಳಲ್ಲೇ ಬಹುತೇಕ ಕಳ್ಳತನಗಳು ನಡೆಯುತ್ತಿರುವುದರಿಂದ  ಸಾರ್ವಜನಿಕರು ಬೆಚ್ಚಿ ಬೀಳುವಂತೆ ಮಾಡಿವೆ.ಅದರಲ್ಲೂ ವಿಶೇಷವಾಗಿ, ಮನೆಗೆ ಬೀಗ ಹಾಕಿ ಎರಡಕ್ಕಿಂತ ಹೆಚ್ಚು ದಿನ ಬೇರೆ ಊರಿಗೆ ಹೋಗುವವರು, ‘ಮನೆಯೊಳಗಿನ ಚಿನ್ನಾಭರಣ, ನಗದು ನಮ್ಮದಲ್ಲ’ ಎಂದುಕೊಂಡು ಅಳುಕಿನಿಂದಲೇ ಮನೆಯಿಂದ ಹೊರಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ.

                 ಮನೆ ಮಂದಿಯೆಲ್ಲ ಊಟ ಮಾಡಿ, ಮಲಗಿ ಗಾಢ ನಿದ್ರೆಗೆ ಜಾರಿದ ಸಂದರ್ಭ, ಮಧ್ಯರಾತ್ರಿ ನಂತರ ಉಪಾಯವಾಗಿ ಒಳ ಪ್ರವೇಶಿಸುವ ಕಳ್ಳರು, ತಿಜೋರಿ ಬಳಿಯಿರುವ ಬೀಗದ ಕೈ ತೆಗೆದುಕೊಂಡು, ಒಳಗಿರುವ ನಗ, ನಾಣ್ಯ ಕಳವು ಮಾಡಿರುವ ಪ್ರಕರಣಗಳೂ ವರದಿಯಾಗುತ್ತಿವೆ.ಹಾಗೂ ತೋಟದ ಮನೆಯಲ್ಲಿ ಇರುವ ನಿವಾಸಿಗಳು ರಾತ್ರಿ ಹೋತ್ತು ಜಾಗೃತರಾಗಿ ಇರಬೇಕು. ಅಪರಿಚಿತರು ಬಂದು ಮನೆ ಬಾಗಿಲು ಬಡಿದರೆ ಬಾಗೀಲು ತೆರೆಬೇಡಿ, ಕಳ್ಳರು ಎಂದು ಗುರುತಾದ ತಕ್ಷಣ ಪೋಲೀಸ್ ಠಾಣೆ ಪೋನ್ ಮಾಡಿ ಅಥವಾ 112 ಕ್ಕೆ ಕಾಲ್ ಮಾಡಿ ನಾವು ನಿಮ್ಮ ನೆರವಿಗೆ ಬರುತ್ತೆವೆ.

                  ಹಾಗೂ ಅಪರಿಚಿತರು ತಮಗೆ ಪೋನ್ ಕಾಲ್ ಮಾಡಿ ಓಟಿಪಿ ಕೇಳಿದರೆ ಓಟಿಪಿ ಹೇಳಬೇಡಿ.ರೇಗ್ಗು ಹಾಗೂ ಇತರೆ ಸಾಮಾನುಗಳನ್ನು ಮಾರುತ್ತಾ ತಮ್ಮ ಮನೆಗೆ ಬಂದು ತಮ್ಮ ಮನೆಗಳಲ್ಲಿ ಎಷ್ಟು ಜನ ಇದ್ದಾರೆ ಎಂದು ಕಲೆ ಹಾಕುತ್ತಾರೆ ಅವರು ಸಮಯದಲ್ಲಿ ಬಂದಾಗ ಪೋಟೋ ತೆಗೆದುಕೊಳ್ಳುವ ಒಳ್ಳೆಯದು.ಬೆಳೆಗ್ಗೆ ವಾಕಿಂಗ್ ಹೋಗುವಾಗ ಒಟ್ಟಿಯಾಗಿ ಹೋಗಬೇಡಿ ಎಂದು ಹೇಳಿದರು.ಈ ಪೋಲಿಸ್ ಸಿಬ್ಬಂದಿಗಳಾದ ಡಿ ಬಿ ಮಹಲದಾರ ಎಸ್ ಡಿ ವಸ್ತ್ರದ ಹಾಗೂ ದಶರಥ ಹಾಗೂ ಗ್ರಾಮದ ಹಿರಿಯರಾದ ನಾಗಪ್ಪ ಮಕಣಿ ಶರಣಪ್ಪ ಖಸ್ಕಿ ಶಿವಪ್ಪ ಹೊಸಮನಿ ಶಂಕರ್ರ​‍್ಪ ಪೋತೆ ಶಿವಾನಂದ ಮಿರ್ಜಿ ಅಣ್ಣಾರಾಯ ಬಿರಾದಾರ ಬಸಣ್ಣ ದೇವರನಾವದಗಿ ಬಾಬುರಾಯ ಜಿಗಜಿಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು