ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿತ್ತಿದೆ: ಶಾಸಕ ಐಹೊಳೆ
Basic infrastructure has been provided to all villages in the constituency: MLA Aihole
ರಾಯಬಾಗ, 07 : ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ರಸ್ತೆ, ಚರಂಡಿ, ಅಂಗನವಾಡಿ ಕೇಂದ್ರಗಳು ಸೇರಿ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಡಿ ಎಮ್.ಐಹೊಳೆ ಹೇಳಿದರು.
ಶುಕ್ರವಾರ ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ಡಿ.ಎಮ್.ಎಫ್ ಯೋಜನೆಯಡಿ ಮಂಜೂರಾದ 50 ಲಕ್ಷ ರೂ. ಅನುದಾನದಲ್ಲಿ ನಂದಿಕುರಳಿ ರಸ್ತೆಯಿಂದ ಯಡ್ರಾಂವ ಬಸ್ ನಿಲ್ದಾಣ ವರೆಗೆ ರಸ್ತೆ ಸುಧಾರಣೆ ಕಾಮಗಾರಿ ಹಾಗೂ ನಸಲಾಪುರ ಗ್ರಾಮದಲ್ಲಿ ಜಿ.ಪಂ.ಇಲಾಖೆಯಿಂದ ಮಂಜೂರಾದ 20 ಲಕ್ಷ ರೂ.ಅನುದಾನದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಿ, ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಜಿ.ಪಂ.ಎಇಇ ವಿ.ಆರ್.ಭಜಂತ್ರಿ, ಎಇ ಎಸ್.ಎಸ್.ಹೊಸಮನಿ, ಸಿ.ಬಿ.ಕೆ.ಎಸ್.ಎಸ್.ಕೆ ನಿರ್ದೇಶಕ ಭರತೇಶ ಬನವನೆ, ಸದಾಶಿವ ಘೋರೆ್ಡ, ಯಡ್ರಾಂವ ಗ್ರಾ.ಪಂ.ಅಧ್ಯಕ್ಷೆ ಅಶ್ವಿನಿ ಧನಗರ, ಉಪಾಧ್ಯಕ್ಷೆ ಅಕ್ಕಾತಾಯಿ ಐಹೊಳೆ, ಕಲ್ಲಪ್ಪ ನಿಂಗನೂರೆ, ನಸಲಾಪುರ ಗ್ರಾ.ಪಂ.ಅಧ್ಯಕ್ಷ ಅರುಣ ನಾಯಿಕ, ರಾಜಗೌಡ ಪಾಟೀಲ, ಅಜೀತ ಸಂಗಮೇಶ್ವರ, ಮಾರುತಿ ನಿಂಗನೂರೆ, ಚೌಗೊಂಡ ಪಾಟೀಲ, ಬಸಪ್ಪ ಪಡಲಾಳೆ, ಸುರೇಶ ಐಹೊಳೆ, ಜ್ಯೋತೆಪ್ಪ ಮಾಳಿ, ಹನಮಂತ ಧನಗರ, ಮಹೇಶ ಬೆಳಸೆ, ಮಹಾದೇವ ಕಾಂಬಳೆ, ಸುರೇಂದ್ರ ಸಮಾಜೆ, ಯಾಕೂಬ ತಾಂಬಟ, ಪ್ರಕಾಶ ಖೊಂಬಾರೆ, ರಾಜು ಪರಮಾಜೆ, ಶಿವಾನಂದ ಕುಂಬಾರ, ಅನೀಲ ಪಾಟೀಲ, ರಾಜು ಕಾಂಬಳೆ, ನಿಂಗಪ್ಪ ಕುಂಬಾರ, ಗುತ್ತಿಗೆದಾರ ಕಿರಣ ಕಾಂಬಳೆ ಸೇರಿ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 