ವಿಜಯಪುರ, 9 : ಹನ್ನೆರಡನೇ ಶತಮಾನದ ಆದರ್ಶ ಪುರುಷ ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳ ಆಚರಣೆಯೊಂದೇ ಇಂದಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಡಾ.ಕಾಂತು ಇಂಡಿ ಹೇಳಿದರು.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಸವ ಜಯಂತೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಚಾರಗೋಷ್ಠಿ ಹಾಗೂ ವಚನ ಗಾಯನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲರೂ ಬಸವಣ್ಣನು ತೋರಿರುವ ಮಾರ್ಗದಲ್ಲಿ ಸಾಗಿ ಮುನ್ನಡೆಯಬೇಕಾದ ಅಗತ್ಯವಿದೆ ಎಂದರು.
ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ ಮಾತನಾಡಿ, ಬಸವಣ್ಣ ಈ ನಾಡು ಹಾಗೂ ದೇಶ ಕಂಡ ಶ್ರೇಷ್ಠ ಸಂತ ಸಮಾಜ ಸುಧಾರಕ. ಪಾಶ್ಚಿಮಾತ್ಯರು ಹಾಗೂ ಜಗತ್ತಿನ ಅನೇಖ ಪ್ರಖ್ಯಾತ ವಿಮರ್ಶಕರು ಬಸವಣ್ಣನನ್ನು ಪ್ರಥಮ ವಿಚಾರವಾದಿ ಎಂದು ಬಣ್ಣಿಸಿದ್ದಾರೆ ಮಾತ್ರವಲ್ಲದೇ ಮುಕ್ತ ವಿಚಾರವಾದಿ ಎಂದು ಸಾರಿದ್ದಾರೆ ಎಂದರು. ಪ್ರಗತಿಪರ ಅದರೊಂದಿಗೆ ಜನಪರ ಧೋರಣೆಯುಳ್ಳ ಮಹಾನ ಪರಿವರ್ತಕ ಅಣ್ಣ ಬಸವಣ್ಣ ಎಂದರು. ಸಮಾನತೆಯ ತತ್ವದ ಆಧಾರದ ಮೇಲೆ ಸಮಾಜವನ್ನು ಕಟ್ಟುವ ಕಾರ್ಯ ಮಾಡಿದ ಬಸವಣ್ಣನವರ ವಿಚಾರಗಳು ಎಂದೆಂದಿಗೂ ಪ್ರಸ್ತುತ ಎಂದರು.
ಬಸವಣ್ಣನವರ ವಚನಗಳನ್ನು ಕುಮಾರಿ ಪೃಥ್ವಿಶ್ರೀ ಇಂಡಿ, ಬಿ.ಎಸ್. ಸಜ್ಜನ, ಶಿವಾನಂದ ಕಲಗೊಂಡ, ರವಿ ಕಿತ್ತೂರ ಪ್ರಸ್ತುತ ಪಡಿಸಿದರು.
ಎಸ್.ಎಸ್. ಖಾದ್ರಿಇನಾಮದಾರ, ಪ್ರೊ. ಬಸವರಾಜ ಕುಂಬಾರ, ಪ್ರೊ. ಯು.ಎನ್. ಕುಂಟೋಜಿ, ಎಸ್.ವೈ. ನಡುವಿನಕೇರಿ, ಎಸ್.ಎ. ಕಿಣಗಿ, ಕೆ.ಕೆ. ಅಸ್ಕಿ, ಮನು ಪತ್ತಾರ, ಡಾ.ಅನಂತಪುರ, ಭರತೇಶ ಕಲಗೊಂಡ, ಡಾ.ಸುರೇಶ ಕಾಗಲರೆಡ್ಡಿ, ಭಾರತಿ ಭುಯ್ಯಾರ ಉಪಸ್ಥಿತರಿದ್ದರು