ಬಸವಲಿಂಗ ಸ್ವಾಮಿಜಿ ಅವರಿಗೆ ರಾಣಿಚನ್ನಮ್ಮ ಹಾಗೂ ಬಸವಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಸನ್ಮಾನ

ಬಸವಲಿಂಗ ಸ್ವಾಮಿಜಿ ಅವರಿಗೆ ರಾಣಿಚನ್ನಮ್ಮ ಹಾಗೂ ಬಸವಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಸನ್ಮಾನ Basavalinga Swamiji honored by Rani Channamma and Basava Environment Conservation Committee

           ಹುಬ್ಬಳ್ಳಿ 14: ರುದ್ರಾಕ್ಷಿಮಠದಲ್ಲಿ 77ನೇ ವಾರ್ಷಿಕ ನಿಜಗುಣರ ಜಯಂತಿ ಉತ್ಸವ ಮತ್ತು ನಿಜಗುಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಗಲಿರುಳು ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿರುವ ಹಾಗೂ ಸಧೃಡ ಸಮಾಜ ನಿರ್ಮಾಣಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಅಂತಃಕರಣವುಳ್ಳ ಪರಮಪೂಜ್ಯರು, ಸದಾ ನಗುಮುಖದಿಂದ ಭಕ್ತರನ್ನು ಮಾತನಾಡಿಸುವ, ಮೃದು ಸ್ವಭಾವದರು ದ್ರಾಕ್ಷಿಮಠದ ಪೀಠಾಧ್ಯಕ್ಷರಾದ ಪೂಜ್ಯಶ್ರೀ ಬಸವಲಿಂಗ ಸ್ವಾಮಿಜಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾಸಮಿತಿಯ, ಬಸವಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ​‍್ಣ ಮಾಡಿ, ಗ್ರಂಥ, ಹಣ್ಣುಗಳನ್ನು ನೀಡಿಗೌರವ ಪೂರ್ವಕವಾಗಿ ಶ್ರದ್ಧಾಭಕ್ತಿಯಿಂದ ಗೌರವಿಸಿದರು. ನಮನಗಳನ್ನು ಸಲ್ಲಿಸಲಾಯಿತು. ಭಕ್ತಿಯಿಂದ ಶ್ರೀಗಳದರ್ಶನ ಆಶೀರ್ವಾದ ಪಡೆದರು.

      ಧಾರವಾಡ ಮುರುಘಾ ಮಠದ ಪೂಜ್ಯಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಪೂಜ್ಯಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮಿಜಿ, ದೊಡ್ಡವಾಡ ಹಿರೇಮಠದ ಪೂಜ್ಯಶ್ರೀ ಜಡೇಸಿದ್ಧೇಶ್ವರ ಶಿವಾಚಾಯ9ರು, ಪೂಜ್ಯಶ್ರೀ ಚನ್ನಮಲ ್ಲಸ್ವಾಮಿಜಿ,ವಾಕರ ಸಾಸಂಸ್ಥೆಯ ಮಾಜಿಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ,   ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊಎಸ್‌.ಎಂ.ಸಾತ್ಮಾರ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕರ್ಯಕದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದಕಾರ್ಯಾಧ್ಯಕ್ಷ, ಹೊರಕೇರಿಮಾಸ್ತರಶಿಕ್ಷಣ ಪ್ರತಿಷ್ಠಾನಟ್ರಸ್ಟಿ,  ಗ್ರಂಥಪಾಲಕಡಾ. ಸುರೇಶಡಿ. ಹೊರಕೇರಿ,ಪ್ರೊ ಕೆ.ಎಸ್‌.ಕೌಜಲಗಿ, ಚನ್ನಬಸಪ್ಪಧಾರವಾಡಶೆಟ್ಟರ, ವಿಶ್ವನಾಥಹಿರೇಗೌಡರ, ಪ್ರೊಬಿ.ಸಿ.ಗೌಡರ, ಅಮೃತಜಾದವ, ಸದಾಶಿವಚೌಶೆಟ್ಟಿ, ಸಮಥ9 ಕುಸುಗಲ್, ಎಂ.ಪಿ.ಕುಂಬಾರ, ವಿದ್ಯಾಒಂಟಮೂರಿ, ಅನುಸೂಯಾ ಪಾಟೀಲ, ಬಸವರಾಜ, ಮುಂತಾದವರುಇದ್ದರು.