2028ಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯ ಮಂತ್ರಿಯಾಗಲಿ
Basanagouda Patil Yatnal should become the Chief Minister in 2028
ಲೋಕದರ್ಶನ ವರದಿ
ಇಂಡಿ 04 : ತಾಲ್ಲೂಕಿನ ಸಾತಲಗಾಂವ ಪಿ.ಆಯ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಸೇವಾ ಸಮೀತಿ ವತಿಯಿಂದ ಗ್ರಾಮದ ಹಾಲುಮತ ಸಮಾಜದ ಯುವಕ ನಾಗಪ್ಪ ಬಮಗೊಂಡ ಎಂಬಾತನು ವಿಜಯಪುರದ ನಗರ ಶಾಸಕ ಬಸನಗೌಡ ಆರ್ . ಪಾಟೀಲ(ಯತ್ನಾಳ) ಅವರು 2028 ಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿ ಎಂದು ಸಾತಲಗಾಂವ ಪಿ.ಆಯ್ ಗ್ರಾಮದಿಂದ ಸುಮಾರು 500 ಕಿಮೀ ದೂರದ ಆಂದ್ರ್ರದೇಶದ ಶ್ರೀಶೈಲಂದ ವಾರೆಗೆ ತನ್ನ ಎರಡೂ ಕಾಲಿಗೆ (ಮರಗಾಲು) ಕಟ್ಟಿಕೊಂಡು ಪಾದಯಾತ್ರೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ದಾನಯ್ಯ ಮಠಪತಿ, ಗುಂಡುರಾವ ಮಡಗೊಂಡ, ಬಸವರಾಜ ಮಡಗೊಂಡ, ಸಂಗಣ್ಣ ಹೊಸುರ, ರಮೇಶ ಮಸಳಿ ಹಾಗೂ ಸಾತಲಗಾಂವ ಪಿ.ಆಯ್ ಗ್ರಾಮಸ್ಥರು ಪಾದಯಾತ್ರೆ ತೆರಳುವ ಯುವಕನಿಗೆ ಶುಭ ಹಾರೈಸಿ ಬಿಳ್ಕೊಟ್ಟರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 