ಬರಮಲಿಂಗೇಶ್ವರ ಜಾತ್ರೆ ಸಂಪನ್ನ
Baramalingeshwara fair is prosperous
ಪಾಲಬಾವಿ 15: ಸಮೀಪದ ಕಪ್ಪಲಗುದ್ದಿ ಗ್ರಾಮದ ಆರಾಧ್ಯ ದೇವರಾದ ಬರಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವವು ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ಮುಂಜಾನೆ ದೇವಸ್ಥಾನದ ಅರ್ಚಕ ನಾಮದೇವ ನಾಯಿಕ ಅವರ ನೇತೃತ್ವದಲ್ಲಿ ದೇವರ ಕರ್ತೃ ಗದ್ದಿಗೆಗೆ ಅಭಿಷೇಕ, ವಸ್ತ್ರಧಾರಣೆ, ವಿಶೇಷ ಪೂಜೆ ಹಾಗೂ ನೈವೇದ್ಯ ಸಮರೆ್ಣ ನೆರವೇರಿತು. ಬಳಿಕ ನಾಲ್ಕು ದೇವರ ಗುಡಿಯಿಂದ ಬರಮಲಿಂಗೇಶ್ವರ ಹಾಗೂ ಭೀರದೇವರ ಪಲ್ಲಕ್ಕಿಗಳ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳಿನ ವಾಲಗ ಹಾಗೂ ಕುಂಭ ಆರತಿಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಪಲ್ಲಕ್ಕಿ ಉತ್ಸವದಲ್ಲಿ ಭಕ್ತರು ಭಂಡಾರ ಎರಚಿ, ಉರುಳು ಸೇವೆ ಸಲ್ಲಿಸುವ ಮೂಲಕ ದೇವರಿಗೆ ಹೊತ್ತ ಹರಕೆ ತೀರಿಸಿದರು. ನಂತರ ರಾಯಬಾಗ ತಾಲೂಕಿನ ನಿಡಗುಂದಿ ಹಾಗೂ ಮುಗಳಖೋಡದ ಡೊಳ್ಳಿನ ಗಾಯನ ಸಂಘಗಳ ಕಲಾವಿದರಿಂದ ‘ಹರದೇಶಿ-ನಾಗೇಶಿ’ ಡೊಳ್ಳಿನ ಪದಗಳ ಗಾಯನ ನಡೆಯಿತು. ಮಧ್ಯಾಹ್ನ ದಾಸೋಹದ ಮಹಾಮನೆಯಲ್ಲಿ ಅನ್ನಸಂತರೆ್ಣ ಏರಿ್ಡಸಲಾಗಿತ್ತು. ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಅನೇಕ ಭಕ್ತರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 