ಸಪ್ಟಂಬರ್ 15 ರಂದು ಬಳೋಬಾಳ ಪಿಕೆಪಿಎಸ್ ಮಹಾಸಭೆ
Balobala PKPS General Meeting on September 15
ಲೋಕದರ್ಶನ ವರದಿ
ಗೋಕಾಕ 01 : ತಾಲೂಕಿನ ಬಳೋಬಾಳ - ಬೀರನಗಡ್ಡಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಮಹಾ ಸಭೆಯು 2026 ಸಪ್ಟಂಬರ್ 15 ರಂದು ಮುಂಜಾನೆ 11:30 ಗಂಟೆಗೆ ಬಳೋಬಾಳ ಗ್ರಾಮದ ಲಕ್ಷ್ಮೀದೇವಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಬೆಳವಿ ಅವರು ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಘದ ಅಧ್ಯಕ್ಷರಾದ ಲಗಮವ್ವ ಭರಮಣ್ಣವರ ಹಾಗೂ ಉಪಾಧ್ಯಕ್ಷರಾದ ಮಾರುತಿ ಹರಿಜನ ಇವರ ಮುಂದಾಳತ್ವದಲ್ಲಿ ವಾರ್ಷಿಕ ಸಭೆಯು ನಡೆಯಲಿದ್ದು. ಸಭೆಯಲ್ಲಿ ಹಿಂದಿನ ಸಾಮಾನ್ಯ ಸಭೆಯ ನಡಾವಳಿ ದೃಢೀಕರಿಸುವುದು, ವರ್ಷದ ವಾರ್ಷಿಕ ವರದಿಯನ್ನು ಪರಿಗಣನೆ ತೆಗೆದುಕೊಳ್ಳುವುದು, ಮುಂದಿನ ವರ್ಷದ ಅಂದಾಜು ಪತ್ರಿಕೆಯ ಅನುಮೋದನೆ ಸೇರಿದಂತೆ ಸಂಸ್ಥೆಯ ಬೆಳವಣಿಗೆ ಕುರಿತು ಸುಧೀರ್ಘವಾಗಿ ಚರ್ಚಿಸಲಾಗುತ್ತದೆ. ಈ ವಾರ್ಷಿಕ ಸಭೆಯಲ್ಲಿ ಅಧಿಕೃತ ವಿಷಯಗಳ ಹೊರತಾಗಿ ಬೇರೆ ವಿಷಯ ಚರ್ಚಿಸುವುದಿದ್ದಲ್ಲಿ ಸದಸ್ಯರು ವಾರ್ಷಿಕ ಸಭೆಯ ದಿನಾಂಕದ ಐದು ದಿವಸ ಮುಂಚಿತವಾಗಿ ಸಂಘದ ಮುಖ್ಯ ಕಾರ್ಯನಿರ್ವಕರ ಹತ್ತಿರ ಲಿಖಿತ ಪತ್ರ ಸಲ್ಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 