ಬಾಲ ಭಾರತಿ ವಿದ್ಯಾ ಮಂದಿರ: ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ
Bal Bharati Vidya Mandir: National Science Day Celebration
ತಾಳಿಕೋಟೆ 02 : ಪಟ್ಟಣದ ಬಾಲಭಾರತಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಪೋಷಕರ ಶಿಕ್ಷಕರ ಸಭೆ ಭಾನುವಾರ ಜರುಗಿತು. ಈ ಸಭೆಯ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಆರಿ್ಬ. ದಮ್ಮೂರಮಠ ವಹಿಸಿಕೊಂಡು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ಜ್ಯೋತಿ ಬೆಳಗಿಸಿ ಮಕ್ಕಳಿಗೆ ಪ್ರಸ್ತುತ ದಿನಮಾನಗಳಲ್ಲಿ ವಿಜ್ಞಾನದ ಕ್ಷೇತ್ರ ವ್ಯಾಪ್ತಿ ಎಲ್ಲ ಮಕ್ಕಳು ತಿಳಿದು ಜ್ಞಾನದ ಬೆಳಕನ್ನ ಮೂಡಿಸುವ ನಾಗರಿಕರಾಗಿ ಸಮಾಜದ ಬದಲಾದ ಪರಿಸ್ಥಿತಿಯಲ್ಲಿ ಸಂಸ್ಕಾರ, ಸಂಸ್ಕೃತಿಗಳ ವಿಚಾರಧಾರೆಗಳನ್ನು ತಿಳಿಸುವ ಏಕೈಕ ಪ್ರತಿಷ್ಠಿತ ಶಾಲೆ ಬಾಲಭಾರತಿ ವಿದ್ಯಾ ಮಂದಿರ ಆಗಿದೆ ಎಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ರಾಜುಸಿಂಗ್ ವಿಜಾಪುರ ಸಮೂಹ ಸಂಪನ್ಮೂಲ ವ್ಯಕ್ತಿಗಳು ಅವರು ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ತಮ್ಮ ಅನುಭವದ ನುಡಿಗಳನ್ನು ಇಂದಿನ ಆಧುನಿಕ ಭರಾಟೆಯಲ್ಲಿ ಸಂಸ್ಕಾರವನ್ನು ಮರೆತು ಬದುಕುವುದಕ್ಕಿಂತ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನ ನೀಡುವಲ್ಲಿ ಈ ವಿದ್ಯಾಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಹಾಗೆ ಇಂದಿನ ದಿನಗಳಲ್ಲಿ ಮೊಬೈಲನ್ನು ಪಾಲಕರು ಮಕ್ಕಳಿಗೆ ಕೊಡದೆ ಪಠ್ಯಪುಸ್ತಕವನ್ನು ಓದುವುದರ ಜೊತೆಗೆ ಒಳ್ಳೆಯ ವಿಚಾರಗಳನ್ನು ತಿಳಿಸಿ ಮಕ್ಕಳಲ್ಲಿ ವಿಜ್ಞಾನದ ಪರಿಕಲ್ಪನೆ ಹೊಸ ಹೊಸ ಆವಿಷ್ಕಾರದ ಬಗ್ಗೆ ತಿಳಿಸಬೇಕೆಂದು ಸಲಹೆ ಸೂಚನೆಗಳನ್ನು ನೀಡಿದರು ಹಾಗೂ ಬಾಲಭಾರತಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಮಹೇಶ ಓದಿ ಅವರು ಪ್ರಾಸ್ತಾವಿಕ ನುಡಿಗಳನ್ನು ಹೇಳಿ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಬಾಲಭಾರತಿ ವಿದ್ಯಾಮಂದಿರ ಸಂಸ್ಥೆಯು ಪಬ್ಲಿಕ್ ಮಾದರಿಯ ಶಿಕ್ಷಣವನ್ನು ಕೊಡುವಲ್ಲಿ ಮುಂಚೂಣಿಯಲ್ಲಿ ತನ್ನ ಕಾರ್ಯ ಮಾಡ್ತಾ ಸಾಗುತ್ತಿದೆ ಎಂದು ತಿಳಿಸಿದರು.
ಹಾಗೂ ಈ ಸದರಿ ಸಭೆಯಲ್ಲಿ ಬಾಲಭಾರತಿ ವಿದ್ಯಾಮಂದಿರ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಅಮರಸಿಂಗ್ (ಬಾಬು) ಹಜೇರಿ ದಾದಾ, ಸಹ ಕಾರ್ಯದರ್ಶಿಗ ಹನುಮಂತರಾವ್ ದೇಶಪಾಂಡೆ ಹಾಗೂ ಕೋಶಾಧ್ಯಕ್ಷರಾದ ಶ್ಯಾಮ್ ಹಂಚಾಟೆ ಹಾಗೂ ಎಲ್ ಎ ಎಚ್ ವಿದ್ಯಾಭಾರತಿ ಪ್ರೌಢಶಾಲೆಯ ಪ್ರಧಾನ ಗುರುಗಳಾದ ಹಾಗೂ ಆಡಳಿತ ಅಧಿಕಾರಿಗಳಾದ ಪ್ರದೀಪ ಗೊಂಡ, ಪಾಲಕ ಪ್ರತಿನಿಧಿಗಳಾದ ಕಾಶಿನಾಥ್ ಪರಂಪುರ್ , ಪ್ರಕಾಶ ದೊಡ್ಡಮನಿ ಹಾಗೂ ವಿವಿಧ ಪಾಲಕ ಬಂಧುಗಳು ಮಾತೇಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ರಾಘವೇಂದ್ರ ರಾವ್ ಎಸ್ ಕುಲಕರ್ಣಿ, ಸ್ವಾಗತ ಹಾಗೂ ಪರಿಚಯವನ್ನು ಕುಮಾರಿ ವಾಸಂತಿ ಅಡ್ವಾನಿ ಮಾತಾಜಿ, ಮಕ್ಕಳಿಗೆ ಬಹುಮಾನ ವಿತರಣೆಯನ್ನು ಸುಜಾತ ಯಾದಗಿರಿ ಮಾತಾಜಿ, ಕಾರ್ಯಕ್ರಮದ ವಂದನಾರೆ್ಣಯನ್ನು ಬೀನಾ ಸುರಪುರ ಮಾತಾಜಿ ನೆರವೇರಿಸಿದರು ಹಾಗೂ ರೂಪಾ ನಾಗಾವಿ, ಲಕ್ಷ್ಮಿ ಕುಲಕರ್ಣಿ , ರಮೇಶ ಕುಲಕರ್ಣಿ, ಈರಣ್ಣ ಶರಣರ, ಶೈಲಶ್ರೀ ಸುರಪುರ, ರೇಣುಕಾ ಸಜ್ಜನ, ಸುಮಂಗಲಾ ಯಾಳವಾರ,ಶಶಿಕಲಾ ಕುಂಟೋಜಿ, ಶ್ರೀದೇವಿ ಬಿರಾದಾರ, ಅಶ್ವಿನಿ ಸಜ್ಜನ, ಸಹನಾ ವಾಲಿ ,ವೀಣಾ ಮಂಕಣಿ ಮುಂತಾದವರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 