ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬ ಆಚರಣೆ
Bakrid festival celebrated at Eidgah ground
ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬ ಆಚರಣೆ
ಕಂಪ್ಲಿ 07: ಪಟ್ಟಣದ ಮುದ್ದಾಪುರ ಹಳೆ ಖದಿಂ ಸುನ್ನಿ ಈದ್ಗಾ ಮೈದಾನ ಮತ್ತು ಹೊಸ ಈದ್ಗಾ ಮೈದಾನಲ್ಲಿ ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್‌ಹಬ್ಬವನ್ನು ಮುಸ್ಲಿಂ ಭಾಂದವುರು ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಮುಸ್ಲಿಂರು ಖದಿಂ ಈದ್ಗಾ ಮೈದಾನದಲ್ಲಿ ತೆರಳಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ಪ್ರವಚನ ನೀಡಿ ನಂತರ ಮುಸ್ಲಿಂ ಧರ್ಮ ಗುರುಗಳು ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರಫ್ ಆಜಂ ಪಾಷ ಖಾದ್ರಿ ಸಾಹೇಬ್ ಮಾತನಾಡಿ ತ್ಯಾಗವನ್ನು ನೆನಪಿಸುವುದು ‘ಬಕ್ರೀದ್’ನ ಮುಖ್ಯ ಆಶಯ. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ದೇವನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಹಬ್ಬದ ಸಂದೇಶ ಸಾರಿ, ದಾನ ಹಿ ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು.
ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸೈಯ್ಯದ್ ಷಾಹ್ ಅಬ್ದುಲ್ ಖಾದರ್ ಖಾದ್ರಿ ಉರ್್ ಮುಕ್ತಿಯರ್ ಸಾಹಿಬ್, ಸೈಯ್ಯದ್ ಉಮೇಶ್ ಸಾಹೇಬ್ ಖಾದ್ರಿ, ಮಸೀದಿಗಳ ಪೇಶ ಇಮ್ಮಮ್ ರುಗಳು ಖದೀಮ ಸುನ್ನಿ ಈದ್ಗಾ ಮೈದಾನದ ಅಧ್ಯಕ್ಷರಾದ ಬಿ. ಗೌಸ ಪಾಷಾ, ಪದಾಧಿಕಾರಿಗಳಾದ ಕೋಟೆ ಗನಿಸಾಬ್, ಎಂ. ಸರ್ಮಾಸ್ ಸಾಬ್, ಸಿ. ಅಕ್ಕಾನಿ, ಕಂಪ್ಲಿಯ ಖದೀಮ್ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಎಂ. ಅರ್ಷದ್, ಕೋಟೆಯ ಜಾಮಿಯ ಮಸೀದಿಯ ಅಧ್ಯಕ್ಷರಾದ ಲಡ್ಡು ಹೊನ್ನೂರವಲಿ. ಮುಖಂಡರಾದ ಗೆಜ್ಜಳಿ ಭಾಷಾ ಸಾಬ್, ಎಂ ಮೆಹಮೂದ್ ಸಾಬ್, ಕೆ. ವಾಹಿದ. ಎಂ. ಶಬ್ಬೀರ, ಸೈಯದ್ ಉಸ್ಮಾನ್, ಬಿ. ಜಾಫರ್, ಎಂ.ಇಸ್ಮಾಯಿಲ್ ಬೇಗ್, ಮೆಹಬೂಬ್ ಸಾಬ್, ಬಡಿಗೇರ್ ಅಜೀಜ್ ಸಾಬ್, ಗೌಸ್ ಸಾಬ್ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 