ಮುಗಳಿಹಾಳದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಾಗೋಜಿ ಕೊಪ್ಪದ ಶ್ರೀಗಳು
Bagoji Koppada Sri inaugurated the Laksha Deepotsava program in Mugalihala
ಯರಗಟ್ಟಿ 06 : ಸಮೀಪದ ಮುಗಳಿಹಾಳ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಐದನೇ ದಿನಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಬಾಗೋಜಿಕೊಪ್ಪದ ಡಾ: ಮ.ಘ.ಚ. ಮುರುಘ ರಾಜೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿ ಮಾತನಾಡಿದರು.ಬೆಳಕಿನ ಸಂಭ್ರಮ, ಏಕತೆಯ ಪ್ರತೀಕವಾಗಿದೆ.ದೇಶಕ್ಕೆ ಬೆಳಕಿನ ಹಬ್ಬವಾಗಿ ಪರಿಣಮಿಸಿರುವ ಲಕ್ಷ ದೀಪೋತ್ಸವ ಪ್ರತಿವರ್ಷ ಬಹಳ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಉತ್ಸವವು ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ವಿಶೇಷ ಸ್ಥಾನ ಹೊಂದಿದೆ.ಲಕ್ಷ ದೀಪೋತ್ಸವದ ಮುಖ್ಯ ಉದ್ದೇಶ ಅಂತರಂಗದ ಕತ್ತಲೆಯನ್ನು ತೆರವುಗೊಳಿಸುವುದು ಮತ್ತು ಸಕಾರಾತ್ಮಕ ಬದಲಾವಣೆಗೆ ಪ್ರೇರೇಪಿಸುವುದು.
ಭಕ್ತರು ಬಸವೇಶ್ವರ ದೇವಸ್ಥಾನದಲ್ಲಿ ದೀಪಗಳನ್ನು ಬೆಳಗಿಸುತ್ತಾರೆ. ಪ್ರತಿ ದೀಪವು ಆಶೆ, ಶಕ್ತಿ, ಜ್ಞಾನ ಮತ್ತು ಶಾಂತಿಯ ಸಂಕೇತವಾಗಿದೆ ಎಂದರು.ಈ ಸಂದರ್ಭದಲ್ಲಿ ಅಕ್ಷಯ ಮಠಪತಿ, ಗ್ರಾಮ ಪಂಚಾಯತ ಸದಸ್ಯರಾದ ರಾಮನಗೌಡ ಗಂಗರಡ್ಡಿ, ಮಾಜಿ ಗ್ರಾ ಪ ಅಧ್ಯಕ್ಷ ಶಿವಲಿಂಗಪ್ಪ ಅಕ್ಕಿಸಾಗರ, ರಾಮಯ್ಯ ಹಿರೇಮಠ, ಮಹಾದೇವ ಗಾಣಿಗೇರ, ಬಸವರಾಜ ಹಸಬಿ ಹಾಗೂ ಇನ್ನಿತರರು ಇದ್ದರುಪೋಟೋ ಶೀರ್ಷಿಕೆ: ಯರಗಟ್ಟಿ ಸಮೀಪದ ಮುಗಳಿಹಾಳ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವಕ್ಕೆ ಬಾಗೋಜಿ ಕೊಪ್ಪದ ಡಾ: ಮ.ಘ. ಚ. ಮುರುಘ ರಾಜೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು. ರಾಮನಗೌಡ ಗಂಗರಡ್ಡಿ, ಶಿವಲಿಂಗಪ್ಪ ಅಕ್ಕಿಸಾಗರ, ಬಸವರಾಜ ದಳವಾಯಿ, ಮಹಾದೇವ ಗಾಣಿಗೇರ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 