ದುರುಗಮ್ಮನ ಗುಡಿ ಕೆಳ ಸೇತುವೆ ಜನ ಸಂಚಾರಕ್ಕೆ ಮುಕ್ತಗೊಳಿಸಲು ಬಿಎನ್‌ಹೆಚ್‌ಎಸ್ ಕರೆ
BNHS calls to open Durugammana Gudi Kela bridge for public traffic
ದುರುಗಮ್ಮನ ಗುಡಿ ಕೆಳ ಸೇತುವೆ ಜನ ಸಂಚಾರಕ್ಕೆ ಮುಕ್ತಗೊಳಿಸಲು ಬಿಎನ್‌ಹೆಚ್‌ಎಸ್ ಕರೆ
ಬಳ್ಳಾರಿ 28: ದುರುಗಮ್ಮನ ಗುಡಿ ಕೆಳ ಸೇತುವೆ ಜನ ಸಂಚಾರಕ್ಕೆ ಈ ಕೂಡಲೆ ತೆರವುಗೊಳಿಸಲು ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ (ಬಿಎನ್‌ಹೆಚ್‌ಎಸ್) ವತಿಯಿಂದ ಈಡಿಗ ಹಾಸ್ಟೆಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಮಿತಿಯ ಸಂಚಾಲಕರಾದ ಆರ್.ಸೋಮಶೇಖರ ಗೌಡ ಅವರು ಮಾತನಾಡುತ್ತಾ " ಕಾಮಗಾರಿ ಪ್ರಾರಂಭಿಸಿ 62 ದಿನ ಕಳೆದಿವೆ. ಬಳ್ಳಾರಿಯ ಜನತೆ ಇದೇ ತಿಂಗಳು ಅಂದರೆ ಜನವರಿ 26ರಂದು ತೆರವು ಮಾಡಬಹುದೆಂಬ ನೀರೀಕ್ಷೆಯಲ್ಲಿದ್ದರು. ಆದರೆ ಇಲ್ಲಿಯವರೆಗೆ ಸಾರ್ವಜನಿಕರ ಸಂಚಾರಕ್ಕೆ ಈ ಕೆಳಸೇತುವೆ ಬಂದ್ ಆಗಿರುವುದರಿಂದ ಜನತೆ ದಿನಿತ್ಯ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ.
ಸತ್ಯನಾರಾಯಣ ಪೇಟೆ ರಸ್ತೆಯ ಹತ್ತಿರ, ಮೋತಿ ವೃತ್ತದ ಹತ್ತಿರ ಮೇಲ್ಸೇತುವೆ ಹತ್ತಿರ ದಿನಂಪ್ರತಿ ಟ್ರಾಫಿಕ್ ಜಾಮ್ ಆಗಿ ಜನತೆ ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೆ ಮಹಾನಗರಪಾಲಿಕೆ ಹಾಗೂ ಸರ್ಕಾರ ಜನತೆಯ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ಖಂಡನೀಯ. ಆದ್ದರಿಂದ ಜನತೆಯ ಸಂಕಷ್ಟ ಹಾಗೂ ಬಳ್ಳಾರಿಯ ಟ್ರಾಫಿಕ್ ಜಾಮ್ಗಳನ್ನು ನಿವಾರಿಸಲು ಈ ಕೂಡಲೇ ದುರ್ಗಮ್ಮ ಗುಡಿ ಕೆಳಸೇತುವೆಯನ್ನು ಸಂಚಾರಕ್ಕೆ ತೆರವುಗೊಳಿಸಲು ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಆಗ್ರಹಿಸುತ್ತದೆ. ಒಂದು ವೇಳೆ ನಿಧಾನ ಗತಿಯಲ್ಲಿ ಹೀಗೆ ಮುಂದುವರೆದಿದ್ದಲ್ಲಿ, ದೊಡ್ಡ ಸಂಖ್ಯೆಯಲ್ಲಿ ಬಳ್ಳಾರಿಯ ಜನತೆ ಬಂದು ಕೆಳಸೇತುವೆ ಬಳಿ ಕುಳಿತು ಧರಣಿ ಕೂಡಲು ಮುಂದಾಗುವಂತೆ" ಕರೆ ನೀಡಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಸಮಿತಿಯ ಸದಸ್ಯರಾದ ಡಾ.ಪ್ರಮೋದ್ ವಹಿಸಿದ್ದರು. ಅವರು ಮಾತನಾಡುತ್ತಾ " ಇಡೀ ಬಳ್ಳಾರಿ ನಗರವು ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಗನ್ನಡಿ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳು, ಧೂಳು, ದುರ್ವಾಸನೆ ಬೀರುವ ಚರಂಡಿಗಳು, ಕುಡಿಯುವ ನೀರಿನಲ್ಲಿ ಚರಂಡಿ ನೀರಿನ ಮಿಶ್ರಣ, ಇಂತಹ ಅನೇಕ ಸಮಸ್ಯೆಗಳು ಜನರನ್ನ ಸಂಕಷ್ಟಕ್ಕೆ ಸಿಲುಕಿಸಿವೆ. ಈ ಹಿನ್ನೆಲೆಯಲ್ಲಿ ಜನತೆ ಇಂತಹ ಅನ್ಯಾಯಗಳನ್ನು ಸಹಿಸದೆ ಬಲಿಷ್ಠ ಹೋರಾಟಕ್ಕೆ ಮುಂದಾಗಬೇಕು. ಬಡಾವಣೆಗಳಲ್ಲಿ ಜನ ಸಮಿತಿಗಳನ್ನು ರಚಿಸಿಕೊಂಡು ಹೋರಾಟ ರೂಪಿಸಬೇಕು " ಎಂದರು. ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಃಓಊಖ ಸಂಚಾಲಕರಾದ ಸೋಮಶೇಖರ ಗೌಡ, ಸದಸ್ಯರಾದ ಶಾಂತಾ, ಡಾ.ಪ್ರಮೋದ್, ಅಂತೋನಿ, ಚಂದ್ರಶೇಖರ, ಜಾಫರ್, ಹನುಮಪ್ಪ, ಸೋಹಾನ್, ಎ.ದೇವದಾಸ್, ಗೋವಿಂದ್ , ರಾಜ ಮುಂತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 