ಬಿಎಂಸಿ : ಗೆದ್ದು ಬೀಗಿದ ಬಿಜೆಪಿ, ಸೋತ ಶಿವಸೇನ ಶಿವಸೇನಾ (UBT) ಕಮಾಲ್ ಮಾಡದ ಠಾಕ್ರೆ ದ್ವಯರ ತಂತ್ರ...: ಕೈತಪ್ಪಿದ 28 ವರ್ಷಗಳ ಆಡಳಿತದ ಹಿಡಿತ
BMC: BJP wins, Shiv Sena loses Shiv Sena (UBT) fails to impress Thackeray duo...: 28 years of rule
ಮುಂಬೈ: ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ (BMC) ಚುನಾವಣೆಯ ಮತಎಣಿಕೆ ಶುಕ್ರವಾರ (ಜ.16) ಬೆಳಿಗ್ಗೆ ಆರಂಭಗೊಂಡಿದ್ದು, ಈವರೆಗಿನ ಅಂಕಿ-ಅಂಶದ ಪ್ರಕಾರ ಭಾರತೀಯ ಜನತಾ ಪಕ್ಷದ ನೇತೃತ್ವದ ಮಹಾಯುತಿ ಮೈತ್ರಿಕೂಟ 130 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರುವ ನಿರೀಕ್ಷೆಯಲ್ಲಿದೆ. ಅಲ್ಲದೇ ಕಳೆದ 28 ವರ್ಷಗಳ ಶಿವಸೇನಾ(ಉದ್ದವ್ ಠಾಕ್ರೆ) ಆಡಳಿತದ ಹಿಡಿತ ಕೈತಪ್ಪಿದಂತಾಗಿದೆ.
ಚುನಾವಣ ಫಲಿತಾಂಶದಲ್ಲಿ ಶಿವಸೇನಾ (ಉದ್ದವ್ ಬಣ) ಎಂಎನ್ ಎಸ್ ಮೈತ್ರಿ 71 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಪಕ್ಷ 14 ವಾರ್ಡ್ ಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವುದಾಗಿ ವರದಿ ತಿಳಿಸಿದೆ.
ಬಿಎಂಸಿ ಫಲಿತಾಂಶದಲ್ಲಿ 135ನೇ ವಾರ್ಡ್ ನಲ್ಲಿ ಬಿಜೆಪಿಯ ನವನಾಥ್ ಬನ್ ಗೆಲುವು ಸಾಧಿಸಿದ್ದಾರೆ. ವಾರ್ಡ್ ಸಂಖ್ಯೆ 51ರಲ್ಲಿ ಶಿವಸೇನಾ(ಶಿಂಧೆ)ದ ವರ್ಷಾ ತೆಂಬಾವಲ್ಕರ್ ಜಯಗಳಿಸಿದ್ದಾರೆ. ಅಲ್ಲದೇ ವಾರ್ಡ್ ಸಂಖ್ಯೆ 1ರಲ್ಲಿ ಶಿವಸೇನಾ(ಶಿಂಧೆ)ದ ರೇಖಾ ರಾಮ್ ಯಾದವ್ ಅವರು ಕಾಂಗ್ರೆಸ್ ನ ಶೀತಲ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.
ಚುನಾವಣ ಆಯೋಗದ ಅಧಿಕೃತ ಮಾಹಿತಿ ಪ್ರಕಾರ, ಬಿಎಂಸಿಯ ಫಲಿತಾಂಶದಲ್ಲಿ, ಬಿಜೆಪಿ 17 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ. ಶಿವಸೇನಾ(ಉದ್ಧವ್ ಬಣ) 9, ಕಾಂಗ್ರೆಸ್ 3, ಎಐಎಂಐಎಂ 2, ಸಮಾಜವಾದಿ ಪಕ್ಷ 01, ಎನ್ ಸಿಪಿ 01, ನೋಟಾ 01 ವಾರ್ಡ್ ನಲ್ಲಿ ಮುನ್ನಡೆ ಸಾಧಿಸಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹುಟ್ಟೂರಾದ ನಾಗ್ಪುರ್ ನಗರಪಾಲಿಕೆಯ 151 ವಾರ್ಡ್ ಗಳಲ್ಲಿ ಬಿಜೆಪಿ 78 ವಾರ್ಡ್ ಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ 22 ವಾರ್ಡ್ ಗಳಲ್ಲಿ ಮುನ್ನಡೆ ಗಳಿಸಿದೆ.
ಪುಣೆ ನಗರಪಾಲಿಕೆಯ 165 ವಾರ್ಡ್ ಗಳಲ್ಲಿ ಬಿಜೆಪಿ 50 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಪವಾರ್ ಕುಟುಂಬದ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವತ್ತ ದಾಪುಗಾಲಿಟ್ಟಿದೆ. ನಾಗ್ಪುರದಲ್ಲಿ ಎನ್ ಸಿಪಿ ಮೈತ್ರಿ 5 ವಾರ್ಡ್ ಗಳಲ್ಲಿ, ಕಾಂಗ್ರೆಸ್-ಶಿವಸೇನಾ(ಉದ್ಧವ್ ) 7 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ.
ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ತವರಾದ ಥಾಣೆ ಮುನ್ಸಿಪಲ್ ಕಾರ್ಪೋರೇಶನ್ ನ 131 ವಾರ್ಡ್ ಗಳಲ್ಲಿ ಬಿಜೆಪಿ 21 ವಾರ್ಡ್ ಗಳಲ್ಲಿ, ಎನ್ ಸಿಪಿ 6, ಶಿವಸೇನಾ (ಉದ್ಧವ್), ಎಂಎನ್ ಎಸ್, ಎನ್ ಸಿಪಿ 6 ವಾರ್ಡ್ ಗಳಲ್ಲಿ ಮುನ್ನಡೆ ಗಳಿಸಿದೆ.
ನಾಸಿಕ್ ಮುನ್ಸಿಪಲ್ ಕಾರ್ಪೋರೇಶನ್ ನ 122 ವಾರ್ಡ್ ಗಳಲ್ಲಿ ಬಿಜೆಪಿ 12, ಎಂವಿಎ-ಎಂಎನ್ ಎಸ್ 9 ಹಾಗೂ ಶಿವಸೇನಾ, ಎನ್ ಸಿಪಿ 11 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿರುವುದಾಗಿ ಆಯೋಗದ ಅಂಕಿ-ಅಂಶ ತಿಳಿಸಿದೆ.
227
ಸದಸ್ಯ ಬಲದ ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ ಅಧಿಕಾರದ ಚುಕ್ಕಾಣಿ ಹಿಡಿಯಲು 114 ಸದಸ್ಯ ಬಲದ ಅಗತ್ಯವಿದೆ. ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ ನೇತೃತ್ವದ ಮಹಾಯುತಿ 125ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಗಳಿಸಿದೆ. ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿ 80ಕ್ಕೂ ಅಧಿಕ ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿ ಎರಡನೇ ಸ್ಥಾನಕ್ಕೆ ಕುಸಿದಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 