ಕೇಂದ್ರ ಸೇವಾ ತೆರಿಗೆ ಇಳಿಕೆ ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಕೇಂದ್ರ ಸೇವಾ ತೆರಿಗೆ ಇಳಿಕೆ ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ BJP workers celebrate, welcoming the reduction in central service tax

ಕೇಂದ್ರ ಸೇವಾ ತೆರಿಗೆ ಇಳಿಕೆ ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಬ್ಯಾಡಗಿ 24:  ಕೇಂದ್ರ ಸರ್ಕಾರ ಕೆಲಸಕ್ಕೂ ಮತ್ತು ಸೇವಾ ತೆರಿಗೆ ಜಿಎಸ್ಟಿಗಳ ದರ ಇಳಿಕೆ ಮಾಡಿದ್ದನ್ನು ಸ್ವಾಗತಿಸಿ  ಬಿಜೆಪಿ ಕಾರ್ಯಕರ್ತರು  ಪಟ್ಟಣದಲ್ಲಿ ಪಟಾಕಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಪಟ್ಟಣದ ಪುರಸಭೆಯ ಮುಂದೆ ತಾಲೂಕು ಬಿಜೆಪಿ ಘಟಕದ ವತಿಯಿಂದ ಯೋಜಿಸಿದ್ದ ಜಿಎಸ್ಟಿ ಇಳಿಕೆಯ ಉಡುಗೊರೆ ಮೋದಿ ಸರ್ಕಾರಕ್ಕೆ ಧನ್ಯವಾದಗಳು ಎಂಬ ಘೋಷವಾಕ್ಯದ ಅಡಿಯಲ್ಲಿ ಸಂಭ್ರಮಿಸಿದರು.  

ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ಕೇಂದ್ರ ಸರ್ಕಾರ ಜಿಎಸ್ಟಿಗಳ ಇಳಿಕೆ ಮಾಡಿ ಜನರಿಗೆ ನವರಾತ್ರಿ ಉಡುಗೊರೆ ನೀಡಿದೆ ದೇಶದ ಇತಿಹಾಸದಲ್ಲಿ ಜಿಎಸ್ಟಿಗಳ  ಏರಿಸಿದ್ದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಇಳಿಸಿದ ಉದಾಹರಣೆ ಎಲ್ಲೂ ಇಲ್ಲ ನರೇಂದ್ರ ಮೋದಿಯವರು ಈ ಕೆಲಸ ಮಾಡಿ ಬಡ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.  

ಮಾಜಿ ಪುರಸಭೆ ಅಧ್ಯಕ್ಷ ಹಿರಿಯ ಮುಖಂಡ ಮುರಿಗೆಪ್ಪ ಶೆಟ್ಟರ್ ಮಾತನಾಡಿ ಇಡೀ ದೇಶದಲ್ಲಿ ಜಿಎಸ್ಟಿ ಇಳಿಕೆಯು ಬಡ ಜನರ ಭಾರವನ್ನು ಕಡಿಮೆ ಮಾಡುವ ಕೆಲಸ ನಮ್ಮ ಪ್ರಧಾನಿ ಮೋದಿಜಿ ಅವರು ಮಾಡಿದ್ದಾರೆ ಎಂದರು. ಈ  ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬತ್ತಲಕಟ್ಟಿ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸಣ್ಣ ಛತ್ರದ . ಸ್ಥಾಯಿ ಸಮಿತಿಗೆ ಅಧ್ಯಕ್ಷ ಚಂದ್ರಣ್ಣ ಶೆಟ್ಟರ್‌. ಪುರಸಭೆಯ ಉಪಾಧ್ಯಕ್ಷರಾದ ಸುಭಾಷ್ ಮಾಳಗಿ. ಪುರಸಭೆಯ ಸದಸ್ಯರಾದ ಸರೋಜಾ ಉಳ್ಳಾಗಡ್ಡಿ .ಕಲಾವತಿ ಬಡಿಗೇರ. ಫಕೀರಮ್ಮ ಚಲವಾದಿ. ಕವಿತಾ ಸೊಪ್ಪಿನಮಠ .ಮಲ್ಲಮ್ಮ ಪಾಟೀಲ. ಹನುಮಂತ್ ಮ್ಯಾಗೇರಿ. ವಿನಯ್ ಕುಮಾರ್ ಹಿರೇಮಠ. ಮುಖಂಡರಾದ ಶಿವಯೋಗಿ ಗಡಾದ.  ಜ್ಯೋತಿ ಕುದರಿಹಾಳ್‌. ವಿದ್ಯಾ ಶೆಟ್ಟಿ . ಎಂಎಸ್ ಪಾಟೀಲ್‌.ಜಿತೆಂದ್ರ ಸುಣಗಾರ ಹಾಗೂ ಮೋದಿಜಿಯವರ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.