ಧ್ವೇಷಭಾಷಣ ಮಸೂದೆ ವಿರುದ್ಧ ಬಿಜೆಪಿ ಪ್ರತಿಭಟನೆ ವಾಕ್ ಸ್ವಾತಂತ್ರ್ಯ ಕಸಿದು ಕೊಳ್ಳಲು ಹೋರಟಿರುವ ಕಾಂಗ್ರೆಸ್ ಸರ್ಕಾರ

ಧ್ವೇಷಭಾಷಣ ಮಸೂದೆ ವಿರುದ್ಧ ಬಿಜೆಪಿ ಪ್ರತಿಭಟನೆ ವಾಕ್ ಸ್ವಾತಂತ್ರ್ಯ ಕಸಿದು ಕೊಳ್ಳಲು ಹೋರಟಿರುವ ಕಾಂಗ್ರೆಸ್ ಸರ್ಕಾರ BJP protests against hate speech bill, Congress government is trying to take away freedom of speech


ಬ್ಯಾಡಗಿ 27 : ರಾಜ್ಯ ಕಾಂಗ್ರೆಸ್ ಸರಕಾರವು ಜಾರಿಗೊಳಿಸುತ್ತಿರುವ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಹಿ 2025 ಮಸೂದೆ’ ವನ್ನು ತಹಶಿಲ್ದಾರ ಕಛೇರಿ  ಮುಂಭಾಗ ಬಿಜೆಪಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ರತಿಭಟನೆ ನಡೆಯಿತು.ಸಂವಿಧಾನದಲ್ಲಿ ಕಲ19ರ ಅಡಿಯಲ್ಲಿ ನಾಗರಿಕರಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳ ಮೇಲೆ ವಿಧೇಯಕ ನೇರ ದಾಳಿ ನಡೆಸುತ್ತದೆ. ದ್ವೇಷ ಭಾಷಣ ಎಂಬ ಪದಕ್ಕೆ ಸ್ಪಷ್ಟ ಹಾಗೂ ನಿಖರ ವ್ಯಾಖ್ಯಾನವಿಲ್ಲದೆ, ಅಸ್ಪಷ್ಟ ಮತ್ತು ಏಕಪಕ್ಷೀಯ ವ್ಯಾಖ್ಯಾನಗಳಿಗೆ ಅವಕಾಶ ಕಲ್ಪಿಸಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಆರೋಪಿಸಿದೆ.ಮಾಜಿ ಶಾಸಕ . ಹಾವೇರಿ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸಂವಿಧಾನ ವಿರೋಧಿ, ಜನ ವಿರೋಧಿ ಹಾಗೂ ಪ್ರಜಾಸತಾತ್ಮಕ ಮೌಲ್ಯಗಳಿಗೆ ಅಪಾಯಕಾರಿಯಾದ ಮಸೂದೆ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರಕಾರ ತನ್ನ ಅಸಲಿ ಉದ್ದೇಶವನ್ನು ಸಾಭೀತುಪಡಿಸಿದೆ.  

ಈ ವಿಧೇಯಕ ಜಾರಿಗೆ ಬಂದಲ್ಲಿ ಆಡಳಿತ ಪಕ್ಷ ತನ್ನ ವಿರುದ್ಧ ಮಾತನಾಡುವ ವಿರೋಧಕ ಪಕ್ಷದ ನಾಯಕರು, ಸಾಮಾಜಿಕ, ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಸಾಮಾನ್ಯ ನಾಗರೀಕರ ಧ್ವನಿಯನ್ನು ದ್ವೇಷ ಭಾಷಣ ಎಂಬ ನೆಪದಲ್ಲಿ ಮೌನಗೊಳಿಸುವ ಸಾಧ್ಯತೆ ಸ್ಪಷ್ಟವಾಗುತ್ತದೆ ಕಾಂಗ್ರೆಸ್ ಸರ್ಕಾರ ಪ್ರತಿಯೊಬ್ಬರ ವಾಕ್ ಸ್ವಾತಂತ್ರ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಖಸಿದು ಕೊಳ್ಳುತ್ತಿದೆ ಎಂದುಎಂದು ಆರೋಪಿಸಿದರು. ಮಂಡಲ ಅಧ್ಯಕ್ಷ ನಿಂಗಪ್ಪ ಬತ್ತಲಕಟ್ಟಿ ಮಾತನಾಡಿ, ಭಾರತೀಯ ದಂಡ ಸಂಹಿತೆ ಹಾಗೂ ಇತರೆ ಪ್ರಚಲಿತ ಕಾನೂನುಗಳಲ್ಲಿ ಶಾಂತಿ ಭಂಗ, ಸಾಮಾಜಿಕ ಆಶಾಂತಿ ಉಂಟುಮಾಡುವ ಕೃತ್ಯಗಳನ್ನು ತಡೆಯಲು ಸಮರ​‍್ಕ ಕಾನೂನು ವ್ಯವಸ್ಥೆಗಳು ಈಗಾಗಲೇ ಅಸ್ಥಿತ್ವದಲ್ಲಿವೆ. ಅವುಗಳನ್ನು ಸರಿಯಾಗಿ ಜಾರಿಗೊಳಿಸದೆ ಹೊಸ ಮಸೂದೆ ತರುತ್ತಿರುವುದು ಯಾಕಾಗಿ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಹಾಲೇಶ ಜಾದವ್‌.ಮುಖಂಡ ಶಿವಬಸಪ್ಪ ಕುಳೇನೂರ, ಶಿವರಾಜ್ ಅಂಗಡಿ, ಸರೋಜಮ್ಮ ಉಳ್ಳಾಗಡ್ಡಿ, ಲೀಲಾವತಿ ಬಡಿಗೇರಿ​‍್ಶವರಾಯಪ್ಪ ಅಪ್ಪಣ್ಣನವರ, ವಿನಯ್  ಹಿರೇಮಠ, ಶಂಕ್ರ​‍್ಪ ಅಕ್ಕಿ, ಸುರೇಶ್ ಉದ್ಯೋಗಣ್ಣನವರ್,ವರುಣ ಮಲ್ಲಿಗಾರ, ಹಾಗೂ  ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.