ಬಿಜೆಪಿಯವರು ಸುಳ್ಳು ಹೇಳುತ್ತ ಜನರಿಗೆ ತಪ್ಪು ದಾರಿ ತೋರಿಸುತ್ತಿದ್ದಾರೆ: ನಾಡಗೌಡಾ (ಆಪ್ಪಾಜಿ)
BJP is telling lies and misleading people: Nadagowda (Apappaji)
ಮುದ್ದೇಬಿಹಾಳ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ರವರ ನೇತೃತ್ವದ ಸರಕಾರ ಪಂಚ ಗ್ಯಾರಂಟಿ ನೀಡುವ ಮೂಲಕ ಉತ್ತಮ ಜನಪರ ಆಡಳಿತ ನೀಡುತ್ತಿದೆ. ಕಾರಣ ಬಿಜೆಪಿಯರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಸುಳ್ಳು ಹೇಳುವ ಮೂಲಕ ಜನರಿಗೆ ತಪ್ಪು ದಾರಿ ತೋರಿಸುತ್ತಿದ್ದಾರೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ (ಆಪ್ಪಾಜಿ) ಹೇಳಿದರು.
ತಾಲೂಕಿನ ನಾಗರಬೆಟ್ಟನಲ್ಲಿ ಗ್ರಾಮಪಂಚಾಯಿತಿ ವತಿಯಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರ್ಮಿಸಿದ ಎನ್‌ಎಸ್‌ಎಲ್‌ಎಮ್ ನೂತನ ಕಟ್ಟಡ ಲೋಕಾರೆ್ಣಗೊಳಿಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯ ಸರಕಾರದಿಂದ ವಿಶೇಷ ಅನುದಾನ ತರುವ ಮೂಲಕ ಮತಕ್ಷೇತ್ರದಲ್ಲಿ ಶೈಕ್ಷಣಿಕ ಸುಧಾರಣೆಗಾಗಿ, ಕೃಷಿ, ತೋಟಗಾರಿಗಿಕೆ, ಚರಂಡಿ ಹಾಗೂ ರಸ್ತೆಗಳ ನಿರ್ಮಾಣ ಸೇರಿದಂತೆ ಅನೇಕ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಿಜೆಪಿಯವರಿಗೆ ಸುಳ್ಳು ಹೇಳುವುದನ್ನುಬಿಟ್ಟು ಬೇರೆ ಏನು ಗೊತ್ತಿಲ್ಲ. ಜನರು ಅವರ ಮಾತುಗಳಿಗೆ ಮರುಳಾಗಬೇಡಿ. ಇನ್ನಷ್ಟು ಅಬಿವೃದ್ಧಿ ಕೆಲಸಗಳನ್ನು ನಡೆಸಲು ಮುಖ್ಯಮಂತ್ರಿಗಳಿಗೆ ವಿಶೇಷ ಹೆಚ್ಚುವರಿ ಅನುದಾನ ಬಿಡುಗಡೆಗೆ ಆಗ್ರಹಿಸಲಾಗಿದೆ. ಅವರು ಕೂಡ ಅನುದಾನ ನೀಡುವುದಾಗಿ ಭರವಸೆ ಕೋಟಿದ್ದಾರೆ ಮುಂಬರುವ ದಿನಗಳಲ್ಲಿ ಮಾದರಿಯ ಮತಕ್ಷೇತ್ರ ವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಈ ವೇಳೆ ಸರಕಾರದ ಗ್ಯಾರಂಟಿ ಯೋಜನೆ ಸಮೀತಿಯ ತಾಲೂಕಾ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಅವರು ಮಾತನಾಡಿ ಸರಕಾರದ ಆಸೇಯದಂತೆ ಶಾಸಕರಾದ ಸಿ ಎಸ್ ನಾಡಗೌಡ (ಅಪ್ಪಾಜಿ) ಮಾರ್ಗದರ್ಶನದಲ್ಲಿ ಬಡವರ ಕಲ್ಯಾಣಕ್ಕಾಗಿ ಪಂಚ ಗ್ಯಾಮರಂಟಿ ಯೋಜನೆಗಳು ಸಮರ್ಕವಾಗಿ ಜನರಿಗೆ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ. ಹಾಗೇನಾದರೂ ಗ್ಯಾರಂಟಿ ಯೋಜನೆಯ ಪಡೆದುಕೊಳ್ಳದೇ ಇರುವವರು ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸದುಪಯೋಗಪಡೆದುಕೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ಪಂಚಾಯತ ರಾಜ್ಯ ಇಲಾಖೆ ಶಿವರಾಜ ನಾಯಕ, ಪಂಚಾಯಿತ ಅಭಿವೃದ್ಧಿ ಅಧಿಕಾರಿ ರಾಜು ನಾರಾಯಣಿ, ಬಿ ಜಿ ಮಠ, ಕಲ್ಲಣ್ಣ ಪ್ಯಾಟಿ. ವಿರೇಶ ಹೂಗಾರ, ಎಂ ಎಸ್ ಪಾಟೀಲ, ಕೆ ಎಚ್ ಕುಂಬಾರ, ರುದ್ರಗೌಡ ಪಾಟೀಲ, ಅಯ್ಯಪ್ಪ ಮಲಗಲದಿನ್ನಿ ಸೇರಿದಂತೆ ಹಲವರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 