ದೆ್ವೇಷ ಭಾಷಣದ ವಿಧೇಯಕ ಅಂಗೀಕಾರ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ

ದೆ್ವೇಷ ಭಾಷಣದ ವಿಧೇಯಕ ಅಂಗೀಕಾರ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ BJP holds massive protest against passage of hate speech bill

 

ಬೆಳಗಾವಿ 24: ರಾಜ್ಯ ಸರ್ಕಾರ ಜಾರಿಗೆ ತಂದಿರುವ ದ್ವೇಷ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಬುಧವಾರ ಬಿಜೆಪಿ ಕಾರ್ಯಕರ್ತರು ರಾಣಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರಾ​‍್ಯಲಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.  

ರಾಜ್ಯ ಸರ್ಕಾರ ದುರುದ್ದೇಶದಿಂದ ದ್ವೇಷ ಮಸೂದೆ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆ ತನ್ನ ವಿರುದ್ಧ ಮಾತನಾಡುವ ಜನರ ಮೇಲೆ ಗದಾಪ್ರಹಾರ ನಡೆಸುವ ಷಡ್ಯಂತ್ರವಾಗಿದೆ. ಈ ಮಸೂದೆ ರಾಜ್ಯದ ಜನರಿಗೆ ಮಾರಕವಾಗಿದೆ. ಯಾವುದೇ ಕಾರಣಕ್ಕೂ ದ್ವೇಷ ಮಸೂದೆ ಕಾಯ್ದೆ ಜಾರಿಗೆ ತರಬಾರದು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕರು ಸಾಕಷ್ಟು ಜನ ದ್ವೇಷ ಭಾಷಣ ಮಾಡಿದ್ದಾರೆ. ಈ ಕಾಯ್ದೆ ಜಾರಿಯಾದರೇ ಮೊದಲು ಅನ್ವಯವಾಗುವುದು ಕಾಂಗ್ರೆಸ್ ನಾಯಕರಿಗೆ ಇಂಥ ವಿಧೇಯಕವನ್ನು ಸದನದಲ್ಲಿ ಅಂಗೀಕಾರ ಮಾಡಿರುವುದನ್ನು ಖಂಡಿಸಿದ್ದಾರೆ.  

ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ನಾಯಕರಿಗೆ, ರೈತರಿಗೆ ತೊಂದರೆಯಾಗಬೇಕು ಅಧಿಕಾರ ದುರುಪಯೋಗವಾಗಬೇಕೆಂದು ಈ ವಿಧೇಯಕವನ್ನು ತಂದಿದ್ದಾರೆ ಅದನ್ನು ಹಿಂಪಡೆಯುವಂತೆ ಆಗ್ರಹ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ಹಗರಣ, ಅಧಿಕಾರಿಗಳ ಆತ್ಮಹತ್ಯೆ, ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣಗಳನ್ನು ಮುಚ್ಚಿ ಹಾಕುವಂತ ಕೆಲಸ ನಡೆಯುತ್ತಿದೆ. ಈ ಯಾವ ವಿಷಯದಲ್ಲೂ ಗಮನವಿಲ್ಲ ಕೇವಲ ಸಿಎಂ ಬದಲಾವಣೆಯಲ್ಲಿ ಸರ್ಕಾರ ಮುಳುಗಿದೆ ಎಂದು ಆರೋಪಿಸಿದ ಅವರು ಈ ವಿಧೇಯಕವನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.  

ಬೆಳಗಾವಿ ಬಿಜೆಪಿ ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮುರುಘೇಂದ್ರಗೌಡ ಪಾಟೀಲ್, ದೀಪಾ ಕುಡಚಿ, ಸವಿತಾ ಕಾಂಬಳೆ ಸೇರಿದಂತೆ ಬಿಜೆಪಿ ಬೆಳಗಾವಿಯ ಉತ್ತರ, ದಕ್ಷಿಣ ಗ್ರಾಮೀಣ ಎಲ್ಲ ಪದಾಧಿಕಾರಿಗಳು ಮಂಡಳ ಅಧ್ಯಕ್ಷರು ಇನ್ನಿತರರು ಉಪಸ್ಥಿತರಿದ್ದರು.