ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾದವತಿಯಿಂದ ಅಹೋರಾತ್ರಿ ಧರಣಿ
BJP farmer's movement holds overnight sit-in at the town's Tahsildar's office premises
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾದವತಿಯಿಂದ ಅಹೋರಾತ್ರಿ ಧರಣಿ
ಸಿಂದಗಿ 15 ; ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾದವತಿಯಿಂದ ಅಹೋರಾತ್ರಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜೀಣಗಿ ಮಾತನಾಡಿ, ರಾಜ್ಯದಲ್ಲಿ ಅತೀವೃಷ್ಠಿಯಿಂದ ವಿವಿಧ ಬೆಳೆಗಳು ಹಾನಿಯಾಗಿವೆ. ಮನೆಗಳು ಬಿದ್ದಿವೆ, ನೆರೆಹಾವಳಿಯಿಂದ ಮನೆಗಳಿಗೆ ನೀರು ನುಗ್ಗಿವೆ. ಇಂತಹ ಸಂದರ್ಭದಲ್ಲಿ ಜನರ ಕಷ್ಠ ಕೇಳಲು ಸಿಎಂ ಬರದೆ ಜಾತಿ ಜನಗಣತಿ ನಡೆಸಲು ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದರೆ ನನ್ನ 40 ವರ್ಷದ ರಾಜಕೀಯ ಅನುಭವದಲ್ಲಿ ಇಂತಹ ನಾಚಿಗೇಟ್ಟ ಸರಕಾರ ಎಂದು ನೋಡಿಲ್ಲ ಎಂದು ಹರಿಹಾಯ್ದರು.
ತೊಗರಿ, ಹತ್ತಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಪ್ರತಿಶತ 80 ರಷ್ಟು ಹಾಳಾಗಿದ್ದರು ಸಮೀಕ್ಷೆ ಮಾತ್ರ 20 ರಷ್ಟು ಮಾಡಿ ವರದಿ ಮಾಡುತ್ತಿದ್ದಾರೆ. ಇದರಿಂದ ರೈತರು ಬಿತ್ತನೆ ಮಾಡಿದ ಖರ್ಚು ಸಹ ಬರದ ಹಾಗೆ ನೋಡಿಕೊಳ್ಳುತ್ತ ರೈತರನ್ನು ಮೂಲೆಗುಂಪು ಮಾಡಲು ಹೊರಟ್ಟಿದ್ದಾರೆ. ಸರಿಯಾಗಿ ಸಮೀಕ್ಷೆ ಮಾಡಿ ವರದಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದರೆ ಮಾತ್ರ ಪರಿಹಾರಕ್ಕೆ ಸಂಸದನಾಗಿ ಕೇಂದ್ರ ಸರಕಾರದ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಇದನ್ನು ಬಿಟ್ಟು ಕಾಟಾಚಾರಕ್ಕೆ ಒಬ್ಬ ತಲಾಟಿಯಿಂದ ಸಮೀಕ್ಷೆ ನಡೆಸಿ ಕೈತೊಳೆದುಕೊಳ್ಳುತ್ತಿದ್ದಾರೆ ಇದರಿಂದ ರೈತರ ಕಣ್ಣಿರು ಒರೆಸಿದಂತಾಗುವುದಿಲ್ಲ. ಇನ್ನೂ ಈ ಕ್ಷೇತ್ರದ ರಸ್ತೆಗಳೆಲ್ಲ ಗುಂಡಿಮಯವಾಗಿದೆ ಇವೆಲ್ಲವನ್ನು ನೋಡಿದರೆ ಸರಕಾರದ ಬೊಕ್ಕಸ ಖಾಲಿಯಾಗಿದೆ ಎನ್ನುವುದು ಮೇಲ್ನೋಟಕ್ಕೆ ತೊರಿಸಿಕೊಡುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಹದಿಗೆಟ್ಟಿರುವ ಹಿನ್ನಲೆಯಲ್ಲಿ ಈ ಕ್ಷೇತ್ರದ 6 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕಾರದ ದೋರಣೆಯನ್ನು ಖಂಡಿಸಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದೇವೆ ಆಡಳಿತಾರೂಡ ಸರಕಾರಕ್ಕೆ ಕೀವಿ, ಕಣ್ಣು ತೆರೆಸಲು ವಿರೋಧ ಪಕ್ಷದ ಕಾರ್ಯ ನಡೆಸುವುದಷ್ಟೆ ವಿರೋಧ ಪಕ್ಷದ ಕೆಲಸ ಅನುದಾನ ಹಾಕುವುದು ಸರಕಾರದ ಕೆಲಸ. ಈ ಕ್ಷೇತ್ರದಲ್ಲಿ ಅತೀವೃಷ್ಠಿಯಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ ರೂ 25 ಸಾವಿರ ಪರಿಹಾರ ನೀಡಬೇಕು, ಮಳೆಯಿಂದ ಬಿದ್ದ ಮನೆಗಳಿಗೆ ಈ ಸರಕಾರದಲ್ಲಿ ಪೂರ್ಣ ಬಿದ್ದ ಮನೆಗಳಿಗೆ ಬರೀ ರೂ 1ಲಕ್ಷ 25, ಅರ್ಧ ಬಿದ್ದ ಮನೆಗಳಿಗೆ ರೂ 50 ಸಾವಿರ ಅಲ್ಲದೆ ಜಲಾವೃತಗೊಂಡ ಮನೆಗಳಿಗೆ ರೂ 5 ಸಾವಿರ ನೀಡಲಾಗುತ್ತಿದ್ದು ನಿಮ್ಮ ಸರಕಾರ ಸುಭದ್ರವಿದೆ ಎಂದು ಹೇಳುತ್ತ ಬೊಗಳೆ ಬೀಗುತ್ತಿದ್ದಾರೆ. ಕಳೇದ ಯಡಿಯೂರ್ಪ ನೆತೃತ್ವದಲ್ಲಿ ಸರಕಾರದಲ್ಲಿ ರೂ 5 ಲಕ್ಷ, ನೇರೆ ಹಾವಳಿಯಿಂದ ಜಲಾವೃತಗೊಂಡ ಮನೆಗಳಿಗೆ 10 ಸಾವಿರ ನೀಡಲಾದ ಪರಿಹಾರ ನಿಮಗೆ ಧಮ್ಮು ತಾಕತ್ತಿದ್ದರೆ ಇನ್ನೂ ಹೆಚ್ಚಿನ ಪರಿಹಾರ ಕೊಡುವ ಕಾರ್ಯ ಆಗಬೇಕು ಎಂದು ಆಗ್ರಹಿಸಿದರು.
ರೈತರು ಬೆಳೆದ ಎಲ್ಲ ಬೆಳೆಗಳು ಸಂಪೂರ್ಣ ಜಲಾವೃತ್‌ಗೊಂಡು ಹಾಳಾಗಿವೆ, ಬಹುಪಾಲು ಕಬ್ಬು ಹಾನಿಯಾಗಿದೆ ಇನ್ನೂ ಉಳೀದ ಪ್ರತಿಶತ 20 ಕಬ್ಬು ಕಟಾವಿಗೆ ಬಂದಿದ್ದು ಈಗಾಗಲೇ ಕೇಂದ್ರ ಸರಕಾರ ಎಂಆರ್‌ಪಿ ದರ ನಿಗದಿಪಡಿಸಿದೆ ಆದಾಗ್ಯೂ ಸರಕಾರಕ್ಕೆ ಸರಿಯಾದ ಸಮೀಕ್ಷೆಯ ವರದಿ ಕಳಿಸಲು ಆಗುತ್ತಿಲ್ಲ 4500 ಬೆಂಬಲ ಬೆಲೆ ನೀಡಿ ಕಬ್ಬು ಕಟಾವು ಮಾಡಬೇಕು, ಭೀಮಾನದಿ ಪ್ರವಾಹದಿಂದ ಬಾದಿತವಾದ ಗ್ರಾಮಗಳನ್ನು ಶಾಶ್ವತ ಸ್ಥಳಾಂತರಿಸಿ ಬಸವ ವಸತಿ ಯೋಜನೆಯಡಿ ರೂ 5 ಲಕ್ಷಗಳಲ್ಲಿ ಮನೆ ಕಟ್ಟಿಸಿಕೊಡಬೇಕು ಬಹು ವಾರ್ಷಿಕ ಬೆಳೆಗಳಿಗೆ ಎಕರೆಗೆ ರೂ 1 ಲಕ್ಷ ಪರಿಹಾರ ಘೋಷಣೆ ಮಾಡಬೇಕು, ಸಿಂದಗಿ, ಆಲಮೇಲ ತಾಲೂಕಿನ ಎಲ್ಲ ಹದೆಗೆಟ್ಟ ರಸ್ತೆಗಳಲ್ಲಿ ಗುಂಡಿ ಮುಚ್ಚಿ ರಸ್ತೆಗಳನ್ನು ಸುಧಾರಣೆ ಮಾಡಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಬಿರಾದಾರ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ರೈತಮೋರ್ಚಾ ತಾಲೂಕಾದ್ಯಕ್ಷ ಬಸವರಾಜ ಐರೋಡಗಿ ಸೇರಿದಂತೆ ಅನೇಕರು ಮಾತನಾಡಿದರು.
ಶಿಲ್ಪಾ ಕುದರಗೊಂಡ, ರೈತ ಮೋರ್ಚಾ ಕಾರ್ಯದರ್ಶಿ ಪೀರು ಕೆರೂರ, ಸಿದ್ದರಾಮ ಆನಗೊಂಡ, ರಾಜು ಪೂಜಾರಿ, ಮಲ್ಲು ಬಗಲಿ, ಈರಣ್ಣ ರಾವೂರ, ಅಶೋಕ ನಾರಾಯಣಪುರ, ಬಂಗಾರೆಪ್ಪ ಬಿರಾದಾರ, ಮಲ್ಲು ಸಾವಳಸಂಗ ಮಾಧ್ಯಮ ಪ್ರತಿನಿದಿ ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 