ವಯಸ್ಕರರಿಗೆ ಬಿ.ಸಿ.ಜಿ. ಲಸಿಕೆ ನೀಡುವ ಲಸಿಕಾ ಅಭಿಯಾಕ್ಕೆ ಚಾಲನೆ
BCG vaccination campaign launched for adults
ವಯಸ್ಕರರಿಗೆ ಬಿ.ಸಿ.ಜಿ. ಲಸಿಕೆ ನೀಡುವ ಲಸಿಕಾ ಅಭಿಯಾಕ್ಕೆ ಚಾಲನೆ
ಮುದ್ದೇಬಿಹಾಳ. 03 : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ, ವಿಜಯಪುರ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ವಯಸ್ಕರರಿಗೆ ಬಿ.ಸಿ.ಜಿ. ಲಸಿಕೆ ನೀಡುವ ಲಸಿಕಾ ಅಭಿಯಾಕ್ಕೆ ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ ಅವರು ಚಾಲನೆ ನೀಡಿದರು.
ಇಲ್ಲಿನ ಹೊರಪೇಟೆ ಗಲ್ಲಿಯಲ್ಲಿರುವ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಮುಂದೆ ವಯಸ್ಕರರಿಗೆ ಬಿ.ಸಿ.ಜಿ. ಲಸಿಕೆ ನೀಡುವ ಅಭಿಯಾಕ್ಕೆ ಚಾಲನೆ ನೀಡಿ ಮಾತನಾಡಿ ಕ್ಷಯರೋಗ ನಿರ್ಮೂಲನೆಯಲ್ಲಿ ಲಸಿಕಾಕರಣವು ಪ್ರಮುಖವಾದ ಪಾತ್ರವನ್ನು ನಿರ್ವಹಿಸಲಿದ್ದು ದುರ್ಬಲ ವರ್ಗದ ಜನರಾದ 60 ವರ್ಷ ಮೇಲ್ಪಟ್ಟವರು, ಮಧುಮೇಹದಿಂದ ಬಳಲುತ್ತಿರುವವರು, ಧೂಮಪಾನ ಹಾಗೂ ಮಧ್ಯ ವ್ಯಸನಿಗಳು, ಅಪೌಷ್ಠಿಕತೆಯಿಂದ ಬಳಲುತ್ತಿರುವವರು (18 ಬಿ.ಎಂ.ಐ), ಕ್ಷಯರೋಗಿಗಳ ಸಂಪರ್ಕಿತರು ವಯಸ್ಕರ ಬಿ.ಸಿ.ಜಿ. ಲಸಿಕಾಕರಣದ ಸದುಪಯೋಗ ಪಡೆದುಕೊಳ್ಳಬೇಕು ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಲಸಿಕೆ ತೆಗೆದುಕೊಳ್ಳಲು ಬರುವಾಗ ಫಲಾನುಭವಿಗಳು ಕಡ್ಡಾಯವಾಗಿ ಆಧಾರ ಕಾರ್ಡನ್ನು ಜೊತೆಗೆ ತೆಗೆದುಕೊಂಡು ಬರಬೇಕು ಲಸಿಕೆ ನೀಡಿದ ನಂತರ ಟಿ ಬಿ ವಿನ್ ಪೋರ್ಟಲ್ ಆನ್ಲೈನ್ ನಲ್ಲಿ ನೊಂದಣಿ ಮಾಡಲಾಗುವುದೆಂದು ತಿಳಿಸಿದರು.
ನಗರ ಆರೋಗ್ಯ ನೀರೀಕ್ಷಣಾಧಿಕಾರಿ ಎಂ ಎಸ್ ಗೌಡರ ಮಾತನಾಡಿ ಕ್ಷಯರೋಗ ನಿರ್ಮೂಲನೆಯಲ್ಲಿ ಓಷಧಿ ಹಾಗೂ ಆರೈಕೆಯ ಜೊತೆಗೆ ಕುಟುಂಬದ ಸಹಯೋಗ ಅತೀ ಅವಶ್ಯವಿದ್ದು, ಕ್ಷಯರೋಗದಿಂದ ಆಗಬಹುದಾದ ಸೋಂಕನ್ನು ತಡೆಗಟ್ಟುವಲ್ಲಿ ವಯಸ್ಕರ ಬಿ ಸಿ ಜಿ ಲಸಿಕಾಕರಣವು ಪ್ರಮುಖವಾದ ಪಾತ್ರವನ್ನು ನಿರ್ವಹಿಸಲಿದ್ದು ಎಲ್ಲಾ ಕ್ಷಯರೋಗದ ಫಲಾನುಭವಿಗಳು ಹಾಗೂ ಸಂಘ ಸಂಸ್ಥೆಗಳು ಈ ಅಭಿಯಾನದ ಕುರಿತು ಜಾಗೃತಿ ಮೂಡಿಸಿ ಎಲ್ಲರೂ ಈ ಲಸಿಕಾಕರಣದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸಾಂಕೇತಿಕವಾಗಿ 18 ಫಲಾನುಭವಿಗಳಿಗೆ ಬಿಸಿಜಿ ಲಸಿಕೆ ನೀಡಲಾಯಿತು ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ. ಸಂಗಮೇಶ ದಶವಂತ ಡಾ.ತೈಸನ್ ಮೇಲ್ವಿಚಾರಕರಾದ ಎ ಎಸ್ ತೆರದಾಳ ಐ ಸಿ ಮಾನಕರ್ ಯಲ್ಲಪ್ಪ ಚಲವಾದಿ ಫಾರ್ಮಸಿ ಅಧಿಕಾರಿ ಎ ಐ ಕೇಶಾಪೂರ ಕ್ಷಯ್ ರೋಗ ಘಟಕದ ಶಿವರಾಜ್ ದೀಕ್ಷಿತ್ ಝೆಡ್ ಎಂ ಬೀಳಗಿ ವ್ಹಿ ಕೆ ಪಾಟೀಲ್ ಆರೋಗ್ಯ ನೀರೀಕ್ಷಣಾಧಿಕಾರಿ ಇಸ್ಮಾಯಿಲ್ ವಾಲಿಕಾರ ಸಂಗೀತಾ ಬಸರಕೋಡ ಆಶಾ ಮೇಲ್ವಿಚಾರಕಿ ಪ್ರಶಿಭಾರಾಣಿ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 