ಬಿ.ಎಲ್. ಎ-2 ಕಾರ್ಯಾಗಾರ, ಆತ್ಮನಿರ್ಭರ ಅಭಿಯಾನ
B.L. A-2 Workshop, Self-Reliance Campaign
ಬ್ಯಾಡಗಿ 10 : ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 224 ಬೂತ್ಗಳಿದ್ದು, ಪ್ರತಿ ಬೂತ್ಗಳಲ್ಲಿ ಬಿಎಲ್‌ಎಗಳು ಪರಿಷ್ಕರಣೆಗಾಗಿ ಹೋದಂತ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಜತೆಯಲ್ಲಿದ್ದುಕೊಂಡು ಸಹಕಾರ ನೀಡಬೇಕು ಎಂದು ಮತದಾರ ಪರಿಷ್ಕರಣ ಪಟ್ಟಿಯ ಕಾರ್ಯಾಗಾರದ ಅಧ್ಯಕ್ಷರು ರಾಜ್ಯ ಶಿಸ್ತು ಸಮಿತಿ ಎಸ್‌ಐಆರ್ ಜಿಲ್ಲಾ ಪ್ರಭಾರಿಗಳಾದ ಲಿಂಗರಾಜ್ ಪಾಟೀಲ, ಹೇಳಿದರು.ತಾಲೂಕಿನ ಮೊಟೆಬೆನ್ನೂರು ಗ್ರಾಮದ ಮೈಲಾರ ಮಹದೇವಪ್ಪ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆದ ಬಿ.ಎಲ್. ಎ-2 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮತದಾರ ಪಟ್ಟಿಯಲ್ಲಿ ಮೃತರಾದವರು, ಗ್ರಾಮ, ಪಟ್ಟಣ ಬಿಟ್ಟು ಹೋಗಿರುವವರನ್ನು ಗುರುತಿಸಬೇಕು ಮತ್ತು ಅನೇಕ ಕಡೆಗಳಲ್ಲಿ ಬರುವ ಹೆಸರನ್ನು ತೆಗೆದು ಹಾಕುವ ಕೆಲಸ ಮಾಡಬೇಕು ಅದೆ ರೀತಿ ಹೊಸ ಮತದಾರರನ್ನು ಸೇರಿಸಬೇಕು ಎಂದು ಹೇಳಿದರು.ಹಾವೇರಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಮಾತನಾಡಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯದಲ್ಲಿರುವ ನಿಜವಾದ ಮತದಾರರು ಮಾತ್ರ ಮತದಾನ ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಬೂತ್ ಏಜೆಂಟರದ್ದಾಗಿರುತ್ತದೆ ಎಲ್ಲ ಕಾರ್ಯಕರ್ತರ ಶ್ರಮ ಅತ್ಯಂತ ಅವಶ್ಯಕವಾಗಿದೆ .ಪ್ರತಿ ಬೂತ್ನಲ್ಲಿ ಬಿಎಲ್‌ಎಗಳು ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅವರ ಜೊತೆ ಸಹಕಾರ ನೀಡಬೇಕು ಎಂದು ಸೂಚಿಸಿದರು.
ಎಸ್ ಆರ್ ಐ ಪ್ರಭಾರಿಗಳಾದ ಸಂತೋಷ್ ಹಡಪದ್ ಮಾತನಾಡಿ, ಸ್ಥಳೀಯ ಜಿಪಂ. ತಾಪಂ ಚುನಾವಣೆಯೂ ಯಾವ ಸಂದರ್ಭದಲ್ಲಿ ಬೇಕಾದರೂ ಚುನಾವಣೆಯಾಗಬಹುದಾಗಿದ್ದು ಬಹುದಾಗಿದ್ದು ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಿರಬೇಕು. ಮೊದಲ ಹಂತದಲ್ಲಿ ಸರಿಯಾದ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದ್ದೇವೆ ಎಂದರು.ಬಿ ಎಲ್ ಎ 1 ಕೆಂಪನಗೌಡ ಪಾಟೀಲ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯರ್ತರು ಕೇಂದ್ರ ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ಹೆಚ್ಚು ಸಕ್ರಿಯರಾಗಿ, ರಾಜ್ಯರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ, ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಿ ಜನರಿಗೆ ಮನವರಿಕೆ ಮಾಡಿಕೊಡುವ ಬಗ್ಗೆಯೂ ಸಲಹೆಗಳನ್ನು ನೀಡಿದರು. ಬಿ ಜೆ ಪಿ ಹಾವೇರಿ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಕಾರ್ಯಾಗಾರದಲ್ಲಿ ಉಮೇಶ್ ರಟ್ಟಿಹಳ್ಳಿ. ವಿನಯ ಹಿರೇಮಠ. ಹಾಲೇಶ್ ಜಾಧವ್. ಶಿವರಾಯಪ್ಪ ಅಪ್ಪಣ್ಣನವರ್. ವರುಣ ಮಲ್ಲಿಗಾರ್. ಸರೋಜಾ ಉಳ್ಳಾಗಡ್ಡಿ. ಕಲಾವತಿ ಬಡಿಗೇರ್ ಎಚ್ ಆರ್ ಲಮಾಣಿ ಶಿವಯೋಗಿ ಉಕ್ಕುಂದ ಹಾಗೂ ಅನೇಕರು ಭಾಗವಹಿಸಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 