ಸಿ.ಎಂ ತಿಂಗಳಿಗೊಮ್ಮೆ ಜಿಲ್ಲೆಗೆ ಬೇಟಿ ನೀಡಲಿ ಬಿ.ಗೀರೀಶಾನಂದ ಆಗ್ರಹ
B. Girishananda demands that the CM visit the district once a month
ಸಿ.ಎಂ ತಿಂಗಳಿಗೊಮ್ಮೆ ಜಿಲ್ಲೆಗೆ ಬೇಟಿ ನೀಡಲಿ ಬಿ.ಗೀರೀಶಾನಂದ ಆಗ್ರಹ
ಕೊಪ್ಪಳ 05: ಸಿ.ಎಂ ಆಗಮನಕ್ಕಾಗಿ ತಾರತುರಿಯಲ್ಲಿ ರಸ್ತೆಗಳ ತಗ್ಗು ಗುಂಡಿಗಳನ್ನು ಮುಚ್ಚಿ ಅರೆ ಬರೆ ಕಾಮಗಾರಿಕೆಯ ಕೆಲಸಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಿರುವುದನ್ನು ಕರವೇ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ಬಲವಾಗಿ ಖಂಡಿಸಿದ್ದಾರೆ.ರವಿವಾರದಂದು ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದ ಸಾಲರಜಂಗ ರಸ್ತೆ, ಜವಾಹರ ರಸ್ತೆ, ಹಸನ್ ರಸ್ತೆ, ಭಾಗ್ಯನಗರ ಮುಖ್ಯ ರಸ್ತೆ, ಕಿನ್ನಾಳ ರಸ್ತೆ, ಕುಷ್ಟಗಿ ರಸ್ತೆ ಹಾಗೂ ಇನ್ನೂ ಅನೇಕ ರಸ್ತೆಗಳು ನಿರ್ಮಾಣಗೊಂಡು 15-20 ವರ್ಷಗಳು ಕಳೆದರೂ ಪುನಃ ನವಿಕರಣಕ್ಕೆ ಅನುದಾನದ ನೆಪ ಹೇಳುವ ಸರ್ಕಾರ, ಮುಖ್ಯಮಂತ್ರಿಗಳು ಬಂದರೆ ಮಾತ್ರ ರಸ್ತೆ ಅಭಿವೃದ್ಧಿ ಮಾಡುವುದು ಎಷ್ಷು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಕೂಡಲೇ ನಗರದ ಎಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಇಲ್ಲವಾದರೆ ರಸ್ತೆ ಅಭಿವೃದ್ದಿಗೆ ಸಿ.ಎಂ ತಿಂಗಳಿಗೊಮ್ಮೆ ಜಿಲ್ಲೆಗೆ ಬೇಟಿ ನೀಡಲಿ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 