ಕ್ಯಾನ್ಸರ, ಆಧುನಿಕ ಜೀವನಶೈಲಿ ಪರಿಣಾಮದ ಕುರಿತು ಜಾಗೃತಿ ಜಾಥಾ

ಕ್ಯಾನ್ಸರ, ಆಧುನಿಕ ಜೀವನಶೈಲಿ ಪರಿಣಾಮದ ಕುರಿತು ಜಾಗೃತಿ ಜಾಥಾ Awareness on cancer, modern lifestyle effects

ಕ್ಯಾನ್ಸರ, ಆಧುನಿಕ ಜೀವನಶೈಲಿ ಪರಿಣಾಮದ ಕುರಿತು ಜಾಗೃತಿ ಜಾಥಾ 

ಚಿಕ್ಕೋಡಿ, 16 ; ಕ್ಯಾನ್ಸರ್ ಕುರಿತ ಸರಿಯಾದ ಅರಿವು ಇಲ್ಲದಿರುವುದರಿಂದ ಬಹುಪಾಲು ಸಾವುಗಳು ಸಂಭವಿಸುತ್ತಿವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ರೋಗ ಗುಣಪಡಿಸಬಹುದಾಗಿದೆ ಎಂದು ಚಂದರಗಿ ಕ್ರೀಡಾ ಶಾಲೆಯ ನಿರ್ದೇಶಕರು ಮತ್ತು ಮಾಜಿ ಜಿಲ್ಲಾ ಪಂಚಾಯತ ಸದ್ಯಸರಾದ ಮಹೇಶ ಭಾತೆ ರವರು ಹೇಳಿದರು. 

ಅವರು ಸೆ 15 ರಂದು ಕೆ ಎಲ್ ಇ ಸಂಸ್ಥೆಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ  ಹಾಗೂ ಗ್ರಾಮ ಪಂಚಾಯಿತಿ ಕರೋಶಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನದ ನಿಮಿತ್ತ ಹಮ್ಮಿಕೊಂಡಿದ್ದ  ಕ್ಯಾನ್ಸರ ಮತ್ತು ಆಧುನಿಕ ಜೀವನಶೈಲಿ ಪರಿಣಾಮದ ಕುರಿತು ಜಾಗೃತಿ ಜಾಥಾ ಚಾಲನೆ ನೀಡಿ ಮಾತನಾಡುತ್ತಾ ಕ್ಯಾನ್ಸರ್ ಸಾಮಾನ್ಯವಾಗಿ 40-70 ವಯೋಮಿತಿಯವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಇತ್ತೀಚೆಗೆ ಬದಲಾದ ಆಹಾರ ಶೈಲಿ, ಜೀವನ ಕ್ರಮ, ಸೌಂದರ್ಯ ಕಾಳಜಿ, ಸೇರಿದಂತೆ ಹಲವು ಕಾರಣಗಳಿವೆ. ಕ್ಯಾನ್ಸರ್ ಸಂಬಂಧಿಸಿದ ಲಕ್ಷಣಗಳು ಕಾಣಿಸಿದರೆ, ಇಲ್ಲವೇ ಅನುಮಾನಗಳು ಬಂದಾಗ ನೇರವಾಗಿ ವೈದ್ಯರ ಬಳಿಗೆ ತೆರಳಬೇಕು. ಅಗತ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು ಮತ್ತು ಕೆ ಎಲ್ ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ರವರು ದೂರದೃಷ್ಟಿಯಿಂದ ಚಿಕ್ಕೋಡಿಯಲ್ಲಿ ಆಯುರ್ವೇದ ಕಾಲೇಜು ಪ್ರಾರಂಭಿಸಿರುವುದು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು. 

ಕೆ ಎಲ್ ಇ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ.ಕಿರಣ ಮುತ್ನಾಳಿ ಮಾತನಾಡುತ್ತಾ ಧೂಮಪಾನ, ತಂಬಾಕು ಸೇವನೆ ಮತ್ತು ಮದ್ಯಪಾನ ಮುಂತಾದ ದುಶ್ಚಟಗಳಿಂದ ದೂರ ಉಳಿಯಬೇಕು ಮತ್ತು ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಲೂ ಕ್ಯಾನ್ಸರ್ ಹೆಚ್ಚಳವಾಗುತ್ತಿದೆ ಆದ್ದರಿಂದ ಆಯುರ್ವೇದ ರೀತಿಯ ಜೀವನಶೈಲಿ ಅಳವಡಿಸಿಕೊಂಡಲ್ಲಿ ಇವುಗಳನ್ನು ತಡೆಗಟ್ಟಬಹುದು ಎಂದು ಹೇಳಿದರು. 

ಜಾಗೃತಿ ರಾ​‍್ಯಲಿ: ಇದೇ ಸಮಯದಲ್ಲಿ ವಿದ್ಯಾರ್ಥಿಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಂಶಗಳು, ದುಷ್ಪರಿಣಾಮ ಹಾಗೂ ತಡೆಗಟ್ಟುವ ವಿಷಯದ ಭಿತ್ತಿ ಚಿತ್ರಗಳು ಮತ್ತು ಬರಹಗಳ ಫಲಕ ಹಿಡಿದು ಘೋಷಣೆ ಕೂಗುತ್ತಾ ಕರೋಶಿ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಯಿತು. 

ಇದೇ ಸಂದರ್ಬದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಪಂಚಾಕ್ಷರಿ ಹಳಿಜೋಳಿ ಗ್ರಾಮ ಪಂಚಾಯತಿ ಸರ್ವ ಸದ್ಯಸರು ಚಿಕ್ಕೋಡಿ ಕೆ.ಎಲ್ ಇ ಆಯುರ್ವೇದ ಕಾಲೇಜಿನ ಉಪನ್ಯಾಸಕರಾದ ಡಾ. ಹೋನವಾಡ. ಡಾ. ಬಿ ಬಿ ದೇಸಾಯಿ ವೈದ್ಯರು. ಹಾಗೂ ವಿದ್ಯಾರ್ಥಿಗಳು ಇತರೆ ಸಿಬ್ಬಂದಿ ವರ್ಗದವರು ರಾ​‍್ಯಲಿಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಮಹಾಂತೇಶ ಗುಡ್ನವರ ನಿರೂಪಿಸಿ ವಂದಿಸಿದರು.  

ದಿ 16 ಆರೋಗ್ಯ ತಪಾಸಣಾ ಶಿಬಿರ ಏರಿ​‍್ಡಸಿ ಸುಮಾರು​‍್ಲ 200 ರೋಗಿಗಳನ್ನು ತಪಾಸಿಸಿ ಉಚಿತ ಓಷಧಿಗಳನ್ನು ವಿತರಿಸಲಾಯಿತು.