ಧಾರವಾಡ 11: ಮಾನವ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳ ಅರಿವು ಸಹ ಇಂದಿನ ಅಗತ್ಯವಾಗಿದೆ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಯುಜಿಸಿಯ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರದ ನಿರ್ಧೆ ಶಕ ಪ್ರೋ. ಹರೀಶ ರಾಮಸ್ವಾಮಿ ಹೇಳಿದರು.
ಧಾರವಾಡದ ಕರ್ನಾ ಟಕ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ಸೋನಿಯಾ ಶಿಕ್ಷಿಣ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಹಕ್ಕುಗಳ ಅನುಷ್ಠಾನ ಹಾಗೂ ಅವುಗಳ ಮಹತ್ವದ ಜೊತೆಗೆ ನಾವು ನಿರ್ವಹಿಸಬೇಕಾದ ಕರ್ತವ್ಯಗಳ ಅರಿವು ಜಾಗೃತಿ ಇಂದಿನ ಅವಶ್ಯಕತೆಯಾಗಿದೆ. ನಾವು ಯಾವ ಹಕ್ಕುಗಳನ್ನು ಹೊಂದಿದ್ದೇವೆ ಅನುವುದಕ್ಕಿಂತ ಮತ್ತೋಬ್ಬರನ್ನು ಹೇಗೆ ಗೌರವಿಸುತ್ತೇವೆ ಎಂಬುದು ಮುಖ್ಯವಾಗಿದೆ. ಅಸಮಾನತೆಯನ್ನು ಹೋಗಲಾಡಿಸಲು ಮಾನವ ಹಕ್ಕುಗಳು ಅಗತ್ಯವಾಗಿವೆ. ಭಾರತದಲ್ಲಿ ಹಕ್ಕುಗಳ ಅನುಷ್ಠಾನ ಮತ್ತು ರಕ್ಷಣೆಗಾಗಿ ಅನೇಕ ಕಾಯ್ದೆಗಳಿವೆ ಹಾಗೂ ಆಯೋಗಗಳಿವೆ. ಆದರೆ ಸಮಾಜದ ಸಮಗ್ರ ಪುನರಾಚನೆಗಾಗಿ ಮಾನವ ಹಕ್ಕುಗಳ ಅನುಷ್ಠಾನದಲ್ಲಿ ಸಾಮಾಜಿಕ ಚಳುವಳಿಗಳ ಜವಾಬ್ದಾರಿ, ಚಿಂತನೆ, ಸಮಸೈಗಳ ಅರಿವು ಹಾಗೂ ಪರಿಹಾರವನ್ನು ಕಂಡು ಕೊಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಅಸಮಾನ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾನ ಸಮಾಜ ನಿಮರ್ಾಣಕ್ಕಾಗಿ ಡಿಸೆಂಬರ 10 ರಂದು ವಿಶ್ವಸಂಸ್ಥೆ ವಿಶ್ವಮಾನವ ಹಕ್ಕುಗಳನ್ನು ಘೋಷಣೆ ಮಾಡಿ ಪ್ರತಿಯೊಬ್ಬರೂ ನಿರ್ವವಹಿಸಬೇಕಾದ ಕರ್ತವ್ಯಗಳನ್ನು ಹಾಗೂ ಜವಾಬ್ದಾರಿಗಳನ್ನು ತಿಳಿಸಿದೆ. ಆದರೆ ನಮ್ಮ ಕರ್ತವ್ಯಗಳನ್ನು ಮರೆತು ನಡೆಯುತ್ತಿರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.
ಕರ್ನಾ ಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್.ಕೋಶದ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋನಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗು ಮಾಜಿ ಮಹಾಪೌರರಾದ ಡಾ.ಎಚ್.ವ್ಹಿ.ಡಂಬಳ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯಡಾ.ಎಸ್.ಎಸ್.ಹಿರೇಮಠ, ಕಾರ್ಯಕ್ರಮ ಅಧಿಕಾರಿ ಕೆ.ಎನ್ ತೋಟಗಂಟಿ, ಪ್ರಾಧ್ಯಾಪಕರು ಹಾಗೂ ಪ್ರಶಿಕ್ಷಣಾಥರ್ಿಗಳು ಭಾಗವಹಿಸಿದ್ದರು.