ಜಾಗೃತಿ ಅಭಿಯಾನ: ಮನೆಮನೆ ಸಮೀಕ್ಷೆ ಹಾಗೂ ಪರೀಶೀಲನೆ ಕಾರ್ಯಕ್ಕೆ ಚಾಲನೆ

ಜಾಗೃತಿ ಅಭಿಯಾನ: ಮನೆಮನೆ ಸಮೀಕ್ಷೆ ಹಾಗೂ ಪರೀಶೀಲನೆ ಕಾರ್ಯಕ್ಕೆ ಚಾಲನೆ  Awareness Campaign: Door-to-door survey and inspection drive launched

ಲೋಕದರ್ಶನ ವರದಿ

ದಾಂಡೇಲಿ 02:  ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಮನೆ ಸಮೀಕ್ಷೆ ಹಾಗೂ ಪರೀಶೀಲನೆ ಕಾರ್ಯವನ್ನು ಸ್ಥಳೀಯ ಹಸಕಾಂ ಅಧಿಕಾರಿಗಳು ಆರಂಭಿಸಿದ್ದಾರೆ. ಯೋಜನೆಯ ಪಾರದರ್ಶಕತೆ ಮತ್ತು ದುರ್ಬಳಕೆ ತಡೆಯುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಕಾರ್ಯನಿರ್ವಹಣಾಧಿಕಾರಿ ದೀಪಕ ನಾಯ್ಕ್‌ ಮನವಿ ಮಾಡಿದ್ದಾರೆ.  

ದಾಂಡೇಲಿ ಹಸಕಾಂ ವ್ಯಾಪ್ತಿಗೆ ಒಳಪಡುವ ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಫಲಾನುಭವಿಗಳ ಮನೆಗಳಿಗೆ ಹಸಕಾಂ ಸಿಬ್ಬಂದಿ ಮತ್ತು ಮೀಟರ್ ರೀಡರ್ಗಳು ಭೇಟಿ ನೀಡಿ ಮೊಬೈಲ್ ಆಪ್ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಅಗತ್ಯ ದಾಖಲೆಗಳ ಪರೀಶೀಲನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಈ ಸಂದರ್ಭದಲ್ಲಿ ಆಧಾರ್ ಕಾರ್ಡ, ಪಾಸ್ಪೋರ್ಟ್‌ ಅಳತೆಯ ಭಾವಚಿತ್ರ, ರೇಷನ್ ಕಾರ್ಡ, ಓಟರ್ ಐಡಿ ಹಾಗೂ ಬಾಡಿಗೆ ಮನೆಯಲ್ಲಿರುವವರು ಟೆನನ್ಸಿ ಒಪ್ಪಂದ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ.  ಯೋಜನೆಯ ಸಮರ​‍್ಕ ಅನುಷ್ಠಾನ ಹಾಗೂ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಈ ಸಮೀಕ್ಷೆ ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.