ಕಾರವಾರ 12: ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಭಟ್ಕಳ ಮತ್ತು ಕುಮಟಾ ತಾಲೂಕು ಕ.ಸಾ.ಪ. ಘಟಕಗಳಿಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.
ಸಾಹಿತ್ಯ ಸಾರಥ್ಯ ಪ್ರಶಸ್ತಿ ತಲಾ ರೂ. 10000, ಪ್ರಶಸ್ತಿ ಫಲಕ ಒಳಗೊಂಡಿದ್ದು ಅದನ್ನು ಭಟ್ಕಳ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಮತ್ತು ಕುಮಟಾ ಘಟಕದ ಅಧ್ಯಕ್ಷ ಡಾ.ಶ್ರೀಧರ ಉಪ್ಪಿನಗಣಪತಿ ಅವರಿಗೆ ಜಿಲ್ಲಾ ಕಸಾಪ ಪ್ರದಾನ ಮಾಡಿತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ.ಶ್ರೀಪಾದ ಶೆಟ್ಟಿ ಅವರು ಸಾಹಿತ್ಯ ಸಾರಥ್ಯ ಪ್ರಶಸ್ತಿ ರಾಜ್ಯದಲ್ಲಿಯೇ ಮೊಟ್ಟಮೊದಲು ವಿನೂತನ ಪರಿಕಲ್ಪನೆಯೊಂದಿಗೆ ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕಕರ್ಿಕೋಡಿ ಅವರು ಆರಂಭಿಸಿದ್ದು ಇದರಿಂದಾಗಿ ಸ್ಥಳೀಯ ಘಟಕಗಳಲ್ಲಿ ಆರೋಗ್ಯಕರ ಸ್ಪದರ್ೆ ಏರ್ಪಟ್ಟು ಕನ್ನಡದ ಕೆಲಸ ತುಂಬ ಉತ್ಸಾಹದಿಂದ ನಡೆಯಲು ಸಾಧ್ಯವಾಗಿದೆ. ಅರವಿಂದ ಕಕರ್ಿಕೋಡಿ ಅವರು ಜಿಲ್ಲಾಧ್ಯಕ್ಷರಾದ ಮೇಲೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯುವ ಕೃತಿ ಪುರಸ್ಕಾರ, ಅನುಭವ ಮಂಟಪದಂಥ ವಿಶಿಷ್ಟ ಯೋಜನೆಗಳು ಜಾರಿ ತಂದಿರುವುದು ಕಸಾಪ ಜಿಲ್ಲಾ ಘಟಕಕ್ಕೆ ಹೊಸ ಸ್ಪರ್ಷ ನೀಡಿದಂತಾಗಿದೆ ಎಂದರು.
ವಿಮರ್ಶಕ ಡಾ. ಮೋಹನ ಚಂದ್ರಗುತ್ತಿ ಅವರು ಇಂದು ಆಧುನಿಕ ಪ್ರಪಂಚಕ್ಕೆ ಕಾಲಿಟ್ಟಿದ್ದೇವೆ ಎಂದು ಹೇಳಿ ಕೊಳ್ಳುವ ನಾವೇ ಮೊಬೈಲ್ ಕೈಯಲ್ಲಿ ಹಿಡಿದು ಶಬರಿಮಲೈ ಮಡಿವಂತಿಕೆಯನ್ನು ಸಮಥರ್ಿಸುತ್ತೇವೆ. ಗಾಂಧಿ, ಬುದ್ದ ಮಾರ್ಗಗಳನ್ನು ಅನುಸರಿಸುವವರು ಅದೇ ಮಾರ್ಗವನ್ನು ಧೂಷಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಇಂದು ನಾವು ಆಚರಿಸುವ ಹಬ್ಬಗಳೆಲ್ಲ ಹಬ್ಬಗಳಾಗಿ ಉಳಿಯದೇ ಆಡಂಬರದ ದ್ಯೋತಕವಾಗುತ್ತಿರುವುದು ವಿಪಯರ್ಾಸ. ಇಂಥ ಸಂದರ್ಭದಲ್ಲಿ ಮನುಷ್ಯ ಪ್ರೀತಿ ಅರಸುವುದು ಎಲ್ಲಿ ಎಂಬುದು ಪ್ರಶ್ನೆಯಾಗಿದೆ ಎಂದರು.
ಸೌಹಾರ್ದತೆ ಬಗ್ಗೆ ಚಚರ್ಿಸುವ ಜನರೇ ವರ್ತಮಾನದಲ್ಲಿ ಇಲ್ಲವಾಗಿದೆ. ಹೊಸ ಸೃಷ್ಟಿ ಮತ್ತು ಹೊಸ ಚಿಂತನೆ ಇಂದಿನ ತುತರ್ು. ಇಂಥ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿ ತುಂಬ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪರಿಷತ್ತನ್ನು ಚಲನಶೀಲಗೊಳಿಸುವಲ್ಲಿ ಖಂಡಿತ ಕೆಲಸ ಮಾಡಬಲ್ಲದು ಎಂಬ ಭರವಸೆ ಹುಟ್ಟಿಸಿದೆ ಎಂದು ಡಾ.ಚಂದ್ರಗುತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಟ್ಕಳ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಮತ್ತು ಕುಮಟಾ ಘಟಕದ ಅದ್ಯಕ್ಷ ಡಾ. ಶ್ರೀಧರ ಉಪ್ಪಿನಗಣಪತಿ ಅವರು ತಾವು ಎಲ್ಲರ ಸಹಕಾರದಿಂದ ಒಂದಿಷ್ಟು ಕೆಲಸ ಮಾಡಲು ಸಾಧ್ಯವಾಗಿದೆ. ಪ್ರಾಮಾಣಿಕವಾಗಿ, ಒಳ್ಳೆಯ ಕೆಲಸ ಮಾಡಿದ್ದೇವೆ ಎಂಬ ಸಮಾಧಾನ ಮತ್ತು ಅಭಿಮಾನ ತಮಗಿದೆ. ತಮ್ಮ ಮೇಲೆ ವಿಶ್ವಾಸ ಇಟ್ಟು ಜವಾಬ್ದಾರಿ ನೀಡಿದ ಜಿಲ್ಲಾಧ್ಯಕ್ಷ ಅರವಿಂದ ಕಕರ್ಿಕೋಡಿ ಅವರಿಗೆ ಈ ಮೂಲಕ ಕೃತಜ್ಞತೆ ತಿಳಿಸುತ್ತೇವೆ ಎಂದರು.
ಅಧ್ಯಕ್ಷತೆವಹಿದ್ದ ಜಿಲ್ಲಾಧ್ಯಕ್ಷ ಅರವಿಂದ ಕಕರ್ಿಕೋಡಿ ಅವರು ಸಾಹಿತ್ಯ ಪರಿಷತ್ ಜಿಲ್ಲಾಘಟಕವನ್ನು ನಮ್ಮ ಮಿತಿ ಮತ್ತು ಸಾಧ್ಯತೆಯಲ್ಲಿ ಪರಿಣಾಮಕಾರಿಯಾಗಿ ಮುನ್ನಡೆಸಿಕೊಂಡಲು ಹೋಗಲು ಪ್ರಯತ್ನಿಸುತ್ತಿದ್ದೇನೆ. ಮುಂದಿನ ಪೀಳಿಗೆಗೆ ಒಂದಿಷ್ಟು ಉತ್ಕೃಷ್ಟ ಪರಂಪರೆ ಹಾಕಿಕೊಟ್ಟು, ಪರಿಷತ್ತಿನ ನೆಲಗಟ್ಟು ಇನ್ನೂ ಗಟ್ಟಿಗೊಳಿಸಿ ಈ ವೇದಿಕೆಯನ್ನು ಬಿಟ್ಟುಕೊಡುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ಜಿಲ್ಲಾ ಕಸಾಪ ಸಹ ಕಾರ್ಯದಶರ್ಿ ಡಾ. ಸುರೇಶ ನಾಯಕ, ಯಲ್ಲಾಪುರ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಹೊನ್ನಾವರ ಘಟಕದ ಕಾರ್ಯದಶರ್ಿ ಭವಾನಿಶಂಕರ ಉಪಸ್ಥಿತರಿದ್ದರು.
ಸಭೆಯಲ್ಲಿ ಡಾ.ಎನ್.ಆರ್.ನಾಯಕ, ಶಾಂ.ಮಂ.ಕೃಷ್ಣರಾಯ ಮುಂತಾದ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಕೋಶಾಧ್ಯಕ್ಷ ಉಮೇಶ ಮುಂಡಳ್ಳಿಕನ್ನಡ ಕನ್ನಡ ಗೀತೆ ಹಾಡಿದರು. ಹೊನ್ನಾವರ ತಾಲೂಕು ಕಸಾಪ ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧ್ಯಕ್ಷ ಪ್ರಶಾಂತ ಹೆಗಡೆ ಮೂಡಲಮನೆ ಸ್ವಾಗತಿಸಿದರು. ಕಾರ್ಯದಶರ್ಿ ಶಶಿಧರ ದೇವಾಡಿಗ ವಂದಿಸಿದರು.