ಜ. 10ರಿಂದ ಐಹೊಳೆ ಗಾಯನ ಪ್ರತಿಭಾ ಪ್ರಶಸ್ತಿ-ಸೀಸನ್-9ರ ಅಡಿಷನ್
Auditions for Aihole Gayana Pratibha Award-Season-9 from Jan. 10
ರಾಯಬಾಗ 25: ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ಐಹೊಳೆ ಗಾಯನ ಪ್ರತಿಭಾ ಪ್ರಶಸ್ತಿ-ಸೀಸನ್-9ರ ಅಡಿಷನ್ (ಧ್ವನಿ ಪರೀಕ್ಷೆ) ಜ.10 ಮತ್ತು 11ರಂದು ಪಟ್ಟಣದ ಸಾಯಿನಗರದಲ್ಲಿರುವ ಸಂಸ್ಥೆಯ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಅರುಣ ಐಹೊಳೆ ತಿಳಿಸಿದ್ದಾರೆ. ಗುರುವಾರ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಡಿ.ಎಂ.ಐಹೊಳೆ ಅವರ ನೇತೃತ್ವದಲ್ಲಿ, ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಜಾನಪದ ಗೀತೆ, ತತ್ವ ಪದಗಳು ಹಾಗೂ ಚಲನಚಿತ್ರ ಗೀತೆಗಳ ವಿಭಾಗಗಳಲ್ಲಿ ಗಾಯನ ಸ್ಪರ್ಧೆ ನಡೆಯಲಿದೆ. ಆಡಿಷನ್‌ನಲ್ಲಿ ಆಯ್ಕೆಯಾದವರಿಗೆ ಜ.22 ರಂದು ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಅಂತಿಮ ಸ್ಪರ್ಧೆ ನಡೆಯಲಿದ್ದು, ಚಲನಚಿತ್ರ ನಟ ರವಿಚಂದ್ರನ್, ಗಾಯಕಿ ಶಮಿತಾ ಮಲ್ನಾಡ, ಉತ್ತರ ಕರ್ನಾಟಕದ ಜಾನಪದ ಗಾಯಕರಾದ ಬಾಳು ಬೆಳಗುಂದಿ ಹಾಗೂ ಪರಸು ಕೋಲಾರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಂತಿಮ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ.21 ಸಾವಿರ, ದ್ವಿತೀಯ ಬಹುಮಾನ ರೂ.15 ಸಾವಿರ, ತೃತೀಯ ಬಹುಮಾನ ರೂ.11 ಸಾವಿರ ನೀಡಲಾಗುವುದು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 