ಗಮನ ಸೆಳೆದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ
Attention-grabbing flower exhibition program
ಹಾವೇರಿ 28 : ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆಯು ಆಯೋಜಿಸಿದ್ದ 2025-26 ನೇ ಸಾಲಿನ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ವಿಧಾನಸಭಾ ಉಪ ಸಭಾಧ್ಯಕ್ಷರಾದ ರುದ್ರ್ಪ ಮಾನಪ್ಪ ಲಮಾಣಿ ಅವರು ಉದ್ಘಾಟಸಿದರು. ನಗರದ ಹುಕ್ಕೇರಿ ಮಠದ ಆವರಣದಲ್ಲಿ ಡಿಸೆಂಬರ್ 27,28 ಮತ್ತು 29 ರ ವರೆಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಫಲಪುಷ್ಪ ಪ್ರದರ್ಶನದಲ್ಲಿ ನಂದಿ ವಿಗ್ರಹ, ಗರುಡ ಆಕೃತಿ, ಎತ್ತುಗಳು ಹಾಗೂ ಚಕ್ಕಡಿ ನಡೆಸುವ ರೈತನ ಮಾದರಿ, ಪರಪೂಜ್ಯ ಲಿಂಗೈಕ್ಯ .ಮ.ನಿ.ಪು ಶಿವಬಸವ ಮಹಾಸ್ವಾಮಿಗಳು, ಪರಮಪೂಜ್ಯ ಶಿಮ.ನಿ.ಪ್ರ ಶಿವಲಿಂಗ ಮಹಾಶಿವಯೋಗಿಗಳು ಹಾಗೂ ಹಾಲಿ ಇರುವ ಪರಮಪೂಜ್ಯ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳ ಗುರು ಶಿಷ್ಯರ ಸಂಗಮದ ಆಕೃತಿ, ಪರಮಪೂಜ್ಯ ಲಿಂಗೈಕ್ಯ ಮಹಾಸ್ವಾಮಿಗಳ ಮೂಲ ಕತ್ರ ಗದ್ದಿಗೆ,ವಿಶ್ವಕ್ಕೆ ಉತ್ತಮ ಸಂದೇಶವನ್ನು ಸಾರುವ ಕೆಟ್ಟದನ್ನು ನೋಡಬೇಡಿ,
ಕೇಳಬೇಡಿ, ಮಾತನಾಡಬೇಡಿ ಎಂಬ ಸಂದೇಶ, ಮೊಬೈಲ್ ಉಪಯೋಗ ದುಷ್ಪಪರಿಣಾಮಗಳನ್ನು ಸಾರುವ ಕೋತಿಗಳ ಚಿತ್ರಣ,ಬುದ್ಧ, ಬಸವ ಹಾಗೂ ಅಂಬೇಡ್ಕರ್ ಆಕೃತಿ, ಜಿಲ್ಲೆಯ ಸೂಫಿ ಸಂತ, ಕನಕದಾಸ ಸಂತಶಿಶುನಾಳ ಷರೀಪ್, ಸರ್ವಜ್ಞ, ಅಂಬೀಗರಚೌಡಯ್ಯ, ಹಾನಗಲ್ ಕುಮಾರಮಹಾಸ್ವಾಮಿ ಆಕೃತಿಗಳು, ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ರವರ ರಂಗೋಲಿ ಚಿತ್ರ,ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ರವರ ಆಕೃತಿ ವಿವಿಧ ಜಾತಿಯ 30 ರಿಂದ 40 ಸಂಖ್ಯೆ ಬೋನ್ಸಾಯಿ ಗಿಡಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ಹಣ್ಣು, ತರಕಾರಿಗಳಿಂದ ಕೆತ್ತನೆಮಾಡಿದ ಕಲಾಕೃತಿಗಳು ಹಾಗೂ ಒಣಗಿದ ತೆಂಗಿನ ಕಾಯಿಗಳ ಚಿಪ್ಪುಗಳಿಂದ ಕೆತ್ತನೆ ಮಾಡಿರುವ ಕಲಾಕೃತಿಗಳನ್ನು ಪ್ರದರ್ಶಿಸಲಾಗಿರುತ್ತದೆ.
ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ರೈತರು ಬೆಳೆದ ವಿಶೇಷ ತೋಟಗಾರಿಕೆ ಬೆಳೆಗಳನ್ನು ಈ ಫಲಪುಷ್ಪ ಪ್ರದರ್ಶನದಲ್ಲಿ ವೀಕ್ಷಣೆಗೆ ಇಟ್ಟಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಸಂಸದರಾದ ಬಸವರಾಜ್ ಬೊಮ್ಮಾಯಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವರಾಜ್ ಶಿವಣ್ಣನವರ,ಗ್ಯಾರಂಟಿಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಂ. ಎಂ. ಹಿರೇಮಠ. ಗ್ಯಾರಂಟಿ ಯೋಜನೆಹಾವೇರಿ ತಾಲೂಕು ಅಧ್ಯಕ್ಷರಾದ ಎಂ. ಎಂ. ಮೈದೂರ್ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಿದ್ದರಾಮಪ್ಪ ಬರಗಿಮಠ, ನಗರ ಸಭೆ ಸದಸ್ಯರಾದ ಸಂಜೀವಕುಮಾರ ನೀರಲಗಿ,ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 