ಕರ್ನಾಟಕದ ಅತ್ಯುತ್ತಮ ಪ್ಲಾಟಿನಂ ಪ್ರಶಸ್ತಿಗೆ ಭಾಜನವಾದ ಅಥಣಿ ಶುಗರ್ಸ್‌ನ ಡಿಸ್ಟಿಲರಿ..!

ಕರ್ನಾಟಕದ ಅತ್ಯುತ್ತಮ ಪ್ಲಾಟಿನಂ ಪ್ರಶಸ್ತಿಗೆ ಭಾಜನವಾದ ಅಥಣಿ ಶುಗರ್ಸ್‌ನ ಡಿಸ್ಟಿಲರಿ..!  Athani Sugars Distillery wins the Best Platinum Award in Karnataka!

ಕರ್ನಾಟಕದ ಅತ್ಯುತ್ತಮ ಪ್ಲಾಟಿನಂ ಪ್ರಶಸ್ತಿಗೆ ಭಾಜನವಾದ ಅಥಣಿ ಶುಗರ್ಸ್‌ನ ಡಿಸ್ಟಿಲರಿ..!  


ಕಾಗವಾಡ 24 : ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ್‌ ಲಿಮಿಟೆಡ್‌ನ ಡಿಸ್ಟಲರಿ ಯುನಿಟಗೆ ಕರ್ನಾಟಕದ ಅತ್ಯುತ್ತಮ ಪ್ಲಾಟಿನಂ ಪ್ರಶಸ್ತಿ ಲಭಿಸಿದೆ. ಸೆಪ್ಟೆಂಬರ್ 19 ರಂದು ಆಂಧ್ರ​‍್ರದೇಶದ ತಿರುಪತಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ದಕ್ಷಿಣ ಭಾರತ ಕಬ್ಬು ಹಾಗೂ ಸಕ್ಕರೆ ತಂತ್ರಜ್ಞಾನ ಸಂಸ್ಥೆ ಅವರು ಅಥಣಿ ಶುಗರ್ಸ್‌ ಲಿಮಿಟೆಡ್ ಕಾರ್ಖಾನೆಯ ಡಿಸ್ಟಿಲರಿಗೆ ಕರ್ನಾಟಕ ಪ್ರದೇಶದ ಅತ್ಯುತ್ತಮ ಡಿಸ್ಟಿಲರಿ ಪ್ಲಾಟಿನಂ ಪ್ರಶಸ್ತಿಯನ್ನು ಕಾರ್ಖಾನೆಯ ಅಧ್ಯಕ್ಷರು ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು, ಸ್ವೀಕರಿಸಿದ್ದಾರೆ.  ಮಂಗಳವಾರ ದಿ. 23 ರಂದು ಕಾರ್ಖಾನೆಯ ಕಚೇರಿಯಲ್ಲಿ ಮಾತನಾಡಿದ ಶ್ರೀಮಂತ ಪಾಟೀಲ ಅವರು, ನಮ್ಮ ಕಾರ್ಖಾನೆಯ ಡಿಸ್ಟಿಲರಿಗೆ ಸತತ 8 ನೇ ಬಾರಿಗೆ ಬೆಸ್ಟ್‌ ಡಿಸ್ಟಿಲರಿ ಪ್ರಶಸ್ತಿ ದೊರಕಿದ್ದು, ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಈ ಪ್ರಶಸ್ತಿ ದೊರೆಯಲು ಕಾರಣಿಭೂತರಾದ ನಮ್ಮ ಡಿಸ್ಟಿಲರಿ ಮ್ಯಾನೆಜರ್ ಹಾಗೂ ಎಲ್ಲ ಅಧಿಕಾರಿಗಳಿಗೆ,  ಕಾರ್ಮಿಕ ಬಂಧುಗಳಿಗೆ ಅಭಿನಂದನಗಳನ್ನು ತಿಳಿಸುತ್ತೇನೆ ಎಂದರು. ಈ ಸಮಯದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಯುವ ನಾಯಕ ಶ್ರೀನಿವಾಸ ಪಾಟೀಲ, ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಸಿಸ್ಮಾ-ಕೆ ದ ಅಧ್ಯಕ್ಷ ಯೋಗೇಶ ಪಾಟೀಲ, ಡಿಸ್ಟಿಲರಿ ವಿಭಾಗದ ಜನರಲ್ ಮ್ಯಾನೇಜರ ಕಿರಣ ಮುದಾಳೆ ಸೇರಿದಂತೆ ಕಾರ್ಖಾನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.