ಅಥಣಿ ಪುರಸಭೆ 34 ಲಕ್ಷ 70 ಸಾವಿರದಷ್ಟು ಉಳಿತಾಯ ಬಜೆಟ್ ಮಂಡನೆ
Athani Municipality presents budget with savings of Rs. 34 lakh 70 thousand
ಅಥಣಿ 09 : ಅಥಣಿ ಪುರಸಭೆಯಲ್ಲಿ 34 ಲಕ್ಷ 76 ಸಾವಿರದಾ 897 ರೂಪಾಯಿಗಳಷ್ಟು ಉಳಿತಾಯದ ಬಜೆಟ್ ನ್ನು ಪುರಸಭಾಧ್ಯಕ್ಷೆ ಶ್ರೀಮತಿ ಶಿವಲೀಲಾ ಬುಟಾಳಿ ಅಧ್ಯಕ್ಷತೆಯಲ್ಲಿ ನಡೆದ 2026-27. ನೇ ಸಾಲಿನ ಆಯವ್ಯಯ ಮಂಡನಾ ಸಭೆಯಲ್ಲಿ ಮಂಡಿಸಲಾಯಿತು. 2026-27 ನೇ ಸಾಲಿನಲ್ಲಿ ಒಟ್ಟು ಆದಾಯ 38 ಕೋಟಿ 77ಲಕ್ಷ 78 ಸಾವಿರದಾ 500 ರೂಪಾಯಿ ವಿವಿಧ ತೆರಿಗೆ ಮೂಲಗಳಿಂದ ಸಂಗ್ರಹವಾಗುವ ನೀರಿಕ್ಷೆ ಇದ್ದು, ಈ ಪೈಕಿ 38ಕೋಟಿ 43ಲಕ್ಷ 1ಸಾವಿರದಾ 603 ಗಳಷ್ಟು ವಿವಿಧ ವೆಚ್ಚಗಳಿಗೆ ವಿನಿಯೋಗಿಸಿ ಅಂದಾಜು 34ಲಕ್ಷ 77 ಸಾವಿರ ರೂಪಾಯಿಗಳಷ್ಟು ಹಣ ಉಳಿತಾಯವಾಗಲಿದೆ ಎಂದು ಅಧ್ಯಕ್ಷೆ ಶಿವಲೀಲಾ ಬುಟಾಳಿ ತಿಳಿಸಿದರು.
ಆಯವ್ಯಯ ಸಭೆಯಲ್ಲಿ ಸದಸ್ಯರಾದ ಪ್ರಮೋದ ಬಿಳ್ಳೂರ, ವೀಲೀನರಾಜ ಯಳಮೇಲಿ, ರಾಜಶೇಖರ ಗುಡೋಡಗಿ, ಸೈಯ್ಯದಮೀನ್ ಗದ್ಯಾಳ, ಉದಯ ಸೋಳಸಿ, ರಮೇಶ ಪವಾರ, ಮಲ್ಲೇಶ ಹುದ್ದಾರ ಸೇರಿದಂತೆ ಅನೇಕರು ಸಲಹೆ ನೀಡಿದರು. ಪ್ರಾರಂಭದಲ್ಲಿ ಮುಖ್ಯಾಧಿಕಾರಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮೀತಿ ಅಧ್ಯಕ್ಷ ಸೇರಿದಂತೆ ಸರ್ವ ಸದಸ್ಯರನ್ನು ಸ್ವಾಗತಿಸಿ ಸಭೆಯ ಕೊನೆಯಲ್ಲಿ ವಂದಿಸಿದರು. ಆಯವ್ಯಯ ಪ್ರತಿಯನ್ನು ಸರ್ವ ಸದಸ್ಯರು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಕಲ್ಲೇಶ ಮಡ್ಡಿ, ಸಂತೋಷ ಸಾವಡಕರ, ಮೃಣಾಲಿನಿ ದೇಶಪಾಂಡೆ, ಮಲ್ಲಿಕಾರ್ಜುನ ಬುಟಾಳಿ, ಶಾಂತಾ ಲೋಣಾರೆ, ರಿಯಾಜ ಸನದಿ, ಬಸವರಾಜ ಪಾಟೀಲ, ಶಶಿಕಾಂತ ಹುಲಕುಂದ ಮತ್ತು ಲೆಕ್ಕಪತ್ರ ವಿಭಾಗದ ಮಹಾವೀರ ಕಲಕೇರಿ ಸೇರಿದಂತೆ ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್ 