ವಕೀಲರ ಪರಿಷತ್ ಚುನಾವಣೆಗೆ ಕೊಪ್ಪಳದ ಆಸಿಫ್‌ಅಲಿ ಸ್ಪರ್ಧೆಗೆ ಸಿದ್ಧತೆ

ವಕೀಲರ ಪರಿಷತ್ ಚುನಾವಣೆಗೆ ಕೊಪ್ಪಳದ ಆಸಿಫ್‌ಅಲಿ ಸ್ಪರ್ಧೆಗೆ ಸಿದ್ಧತೆ  Asif Ali of Koppal prepares to contest in Bar Council elections


ಕೊಪ್ಪಳ  27: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆ 2026 ಮಾರ್ಚ್‌ ತಿಂಗಳ ಒಳಗಾಗಿ ನಡೆಯುವ ಸಾಧ್ಯತೆ ಗಳಿದ್ದು ಸದರಿ ಚುನಾವಣೆಯಲ್ಲಿ ಕೊಪ್ಪಳದ ಹಿರಿಯ ನ್ಯಾಯವಾದಿ ಎಸ್ ಆಸಿಫ್ ಅಲಿ ಯವರು ಪುನರಾಯ್ಕೆ ಬಯಸಿ ಚುನಾವಣಾ ಸ್ಪರ್ಧೆಗೆ ಸಿದ್ಧತೆ ಗಳಲ್ಲಿ ತೊಡಗಿದ್ದಾರೆ ಅವರ ಅಭಿಮಾನಿ ಬಳಗ ತಿಳಿಸಿದೆ,ಎಸ್ ಆಸಿಫ್ ಅಲಿ ಅವರು ಕೊಪ್ಪಳ ದ ಹಿರಿಯ ನ್ಯಾಯವಾದಿ ಯಾಗಿದ್ದು ಹಾಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾಗಿ ತಮ್ಮ ಅಧಿಕಾರದ ಅವಧಿ ಪೂರ್ಣ ಗೊಳಿಸಿ ಜೊತೆಗೆ ಕರ್ನಾಟಕ ರಾಜ್ಯ ವಕ್ಫ್‌ ಸಲಹಾ ಮಂಡಳಿಯ ಹಣಕಾಸು ಸ್ಥಾಯಿ ಸಮೀತಿ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸುವ ದರ ಜೊತೆಗೆ ವಕ್ಫ್‌ ಆಸ್ತಿ ಗಳ ಸಂರಕ್ಷಣೆಗಾಗಿ ಪ್ರಮಾಣಿಕ ಪ್ರಯತ್ನ ಮಾಡಿ ಸಮಾಜದ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿ ಯಾಗಿದ್ದಾರೆ .  

ಅಲ್ಲದೆ ಅಖಿಲ ಭಾರತ ನೋಟರಿ ಸಂಘದ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಸಹ ಉತ್ತಮ ಸೇವೆ ಸಲ್ಲಿಸುತ್ತಿರುವ ಇವರು ಪುನರಾಯ್ಕೆ ಗೊಂಡು ಇನ್ನಷ್ಟು ಒಳ್ಳೆಯ ಕೆಲಸ ಮಾಡುವುದರ ಜೊತೆಗೆ ಕಿರಿಯ ನ್ಯಾಯವಾದಿಗಳಿಗೆ ಮಾರ್ಗದರ್ಶನ ಮಾಡಲಿ ಹಾಗೂ ವಕ್ಫ್‌ ಆಸ್ತಿಗಳ ಸಂರಕ್ಷಣೆ ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿ ಶ್ರಮಿಸಲು ಇವರಿಗೆ ಪುನರಾಯ್ಕೆ ಮಾಡುವುದು ಅನಿವಾರ್ಯ ,ಈ ದಿಶೆಯಲ್ಲಿ ಹಿರಿ ಕಿರಿಯ ನ್ಯಾಯವಾದಿಗಳು ಸೇರಿ ಎಸ್ ಆಸಿಫ್ ಅಲಿ ಅವರಿಗೆ ಮತ್ತೊಮ್ಮೆ ಆಯ್ಕೆಮಾಡಿಕೊಳ್ಳಲು ಸಕಾರಾತ್ಮಕ ಆಲೋಚನೆಯಲ್ಲಿ ತೊಡಗಿಕೊಂಡಿರುವದಾಗಿ ತಿಳಿದು ಬಂದಿದೆ, ಒಟ್ಟಾರೆ ಎಸ್ ಆಸಿಫ ಅಲಿ ಯವರು ಕರ್ನಾಟಕ ರಾಜ್ಯ ವಕೀಲ ಪರಿಷತ್ತಿಗೆ ಪುನರಾಯ್ಕೆಗೊಳ್ಳಲಿ ಇನ್ನಷ್ಟು ಅಭಿವೃದ್ಧಿಪರ ಸಾಮಾಜಿಕ ಸುಧಾರಣೆ ಗಳ ಬಗ್ಗೆ ಉತ್ತಮ ಯೋಜನೆಗಳನ್ನು ರೂಪಿಸಿಕೊಂಡು ಅದರ ಸಮರ​‍್ಕ ಅನುಷ್ಠಾನಕ್ಕಾಗಿ ಶ್ರಮಿಸಲಿ ,ಸದರಿ ಯವರಲ್ಲಿ ಉತ್ತಮ ಸಾಮರ್ಥ್ಯ ಗಳಿದ್ದು ತಮ್ಮ ಅನುಭವ ಗಳಿಂದ ವಕೀಲರ ಪರಿಷತ್ತಿನಲ್ಲಿ ವಕೀಲರ ಹಿತ ಜೊತೆಗೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಾಗಿ ಇವರ ಪುನರಾಯ್ಕೆ ಸಮಾಜಕ್ಕೆ ಮತ್ತು ಕಿರಿಯ ನ್ಯಾಯವಾದಿಗಳಿಗೆ ಅತ್ಯಂತ ಸಹಕಾರಿ ಯಾಗಲಿದೆ ಅದಕ್ಕಾಗಿ ಸದರಿಯವರು ಮತ್ತೊಮ್ಮೆ ಆಯ್ಕೆಗೊಳ್ಳಲಿ ಎಂದು ಶುಭ ಹಾರೈಸೋಣ,