ವಿಠಲ-ರುಕ್ಕಿಣಿ ದೇವಸ್ಥಾನದಲ್ಲಿ ಆಷಾಢಿ ಏಕಾದಶಿಯ ಮಹಾಪೂಜೆ

ವಿಠಲ-ರುಕ್ಕಿಣಿ ದೇವಸ್ಥಾನದಲ್ಲಿ ಆಷಾಢಿ ಏಕಾದಶಿಯ ಮಹಾಪೂಜೆ Ashadhi Ekadashi Maha Puja at Vitthal-Rukkini Temple

ವಿಠಲ-ರುಕ್ಕಿಣಿ ದೇವಸ್ಥಾನದಲ್ಲಿ ಆಷಾಢಿ ಏಕಾದಶಿಯ ಮಹಾಪೂಜೆ 

ಮಾಂಜರಿ, 05 ; ಜಯ ಹರಿ ವಿಠಲ, ಶ್ರೀ ಹರಿ ವಿಠಲನಾಮದ ಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ಇಂದು ಪಂಢರಪುರದ ಶ್ರೀ ವಿಠಲ-ರುಕ್ಕಿಣಿ ದೇವಸ್ಥಾನದಲ್ಲಿ ಆಷಾಢಿ ಏಕಾದಶಿಯ ಮಹಾಪೂಜೆ ಭಕ್ತಿಪೂರ್ಣ ವಾತಾವರಣದಲ್ಲಿ ನೆರವೇರಿತು. 

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ಪತ್ನಿ ಅಮೃತಾ ಫಡ್ನವೀಸ್ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಸರ್ಕಾರಿ ಮಹಾಪೂಜೆಯಲ್ಲಿ ಪಾಲ್ಗೊಂಡರು. 

ರಾಜ್ಯದ ಅಭಿವೃದ್ಧಿ, ರೈತರ ನೆಮ್ಮದಿ ಮತ್ತು ಸುಖಕ್ಕಾಗಿ ಅವರು ವಿಠಲನ ಪಾದಪದ್ಮಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮಧ್ಯರಾತ್ರಿ 2:30ರ ಸುಮಾರಿಗೆ ಪರಂಪರೆ ಅನುಸಾರ ವಿಜೃಂಭಣೆಯಿಂದ ಪೂಜೆ ಸಲ್ಲಿಸಲಾಯಿತು. ಏಕಾದಶಿ ಹಿನ್ನೆಲೆ ಸಂದರ್ಭ ವಿಠಲ ದೇವಾಲಯವನ್ನು ಸುಂದರ ಹೂವಿನಿಂದ ಅಲಂಕರಿಸಲಾಗಿತ್ತು, ಇದು ದೇವಸ್ಥಾನದ ಪಾವಿತ್ರ್ಯತೆಗೂ ಹೆಚ್ಚುವರಿ ಶೋಭೆ ನೀಡಿತು. 

ಈ ವರ್ಷದ ಶಾಸಕೀಯ ಪೂಜೆಯ ಗೌರವ ಸಾತಾರಾ ಜಿಲ್ಲೆಯ ಫಲಟಣ ತಾಲ್ಲೂಕಿನ ಪಿಂಪ್ರದ ಗ್ರಾಮದ ರೈತ ದಂಪತಿಗಳಾದ ಬಾಳಾಸಾಹೇಬ್ ಪಾಟೀಲ ಮತ್ತು ಶೋಭಾ ಪಾಟೀಲ ಅವರಿಗೆ ಲಭಿಸಿತು. ಮುಖ್ಯಮಂತ್ರಿ ಅವರಿಂದ ಇವರಿಗೆ ಗೌರವ ಪ್ರದಾನ ಮಾಡಲಾಯಿತು. 

ಮಹಾಪೂಜೆಯ ನಂತರ ಮುಖ್ಯಮಂತ್ರಿ ಫಡಣವೀಸ್ ಅವರು ವಾರಕರಿಗಳೊಮದಿಗೆ ಸಂವಾದ ನಡೆಸಿ, ಅವರಿಗೆ ಆಷಾಢಿ ಏಕಾದಶಿಯ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. 

ಈ ಸಂದರ್ಭದಲ್ಲಿ ವಿಠಲ-ರುಕ್ಕಿಣಿಯ ದರ್ಶನದಿಂದ ಮನಸ್ಸಿಗೆ ಶಾಂತಿ ಲಭಿಸಿದೆ ಎಂದು ಹೇಳಿದ ಫಡಣವೀಸ್, ವಿಠಲ ಮತ್ತು ರುಕ್ಕಿಣಿ ತಾಯಿಯ ಪಾದಪದ್ಮಗಳಲ್ಲಿ ನಮನ ಸಲ್ಲಿಸಿ, ರಾಜ್ಯದ ರೈತರು, ಶ್ರಮಜೀವಿಗಳು ಹಾಗೂ ಸಮಸ್ತ ಮಹಾರಾಷ್ಟ್ರದ ಜನತೆಯ ಸುಖ-ಸಮೃದ್ಧಿಗಾಗಿ ಪ್ರಾರ್ಥನೆ ಸಲಿ ತಮ್ಮ ಭಾವನೆ ವ್ಯಕ್ತಪಡಿಸಿದರು.