ಬಸವ ಜಯಂತಿಯಂದು ಪ್ರತಿ ವರ್ಷದಂತೆ ಮಠದಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ರಾಗಿ ಅಂಬಲಿ ವಿತರಣೆ
As every year, on Basava Jayanti, the Math distributes Ragi Ambali to children and the public
ಹಾವೇರಿ 22 : ಬಸವ ಜಯಂತಿಯಂದು ಪ್ರತಿ ವರ್ಷದಂತೆ ಮಠದಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ರಾಗಿ ಅಂಬಲಿ ವಿತರಣೆ ಮಾಡಲಾಯಿತು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.ನಗರದ ಹೊಸಮಠದ ಮುಂಭಾಗದಲ್ಲಿರುವ ಬಸವೇಶ್ವರರ ಪುತ್ಥಳಿಗೆ ಮಾಲಾರೆ್ಣ ಮಾಡಿ,ರಾಗಿ ಅಂಬಲಿ ಉಣಬಡಿಸಿ ಅವರು ಮಾತನಾಡಿದರು. ಹನ್ನೆರಡನೆ ಶತಮಾನದಲ್ಲಿ ಕರ್ನಾಟಕದ ಕಲ್ಯಾಣದಲ್ಲಿ ಮಾನವೋದ್ದಾರದ ಒಂದು ಮಹಾಕ್ರಾಂತಿ ನಡೆಯಿತು. ಅದು ಏಕಮುಖ ಚಳುವಳಿಯಲ್ಲ, ಬದುಕಿನ ಎಲ್ಲ ಸಂಗತಿ- ಸಮಸ್ಯೆಗಳನ್ನು ಒಳಗೊಂಡ ಸಮಗ್ರ ಸಾಂಸ್ಕೃತಿಕ ಕ್ರಾಂತಿ,ಶ್ರಮ ಸಂಸ್ಕೃತಿಯ ಎಲ್ಲ ಕಾಯಕ ಜೀವಿಗಳು ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಕಲ ಜೀವಾತ್ಮರ ಲೇಸು,ಸರ್ವಸಮಾನತೆಯ ಸುಂದರ ಸಮಾಜ ನಿರ್ಮಿತಿ, ಸತ್ಯಶುದ್ಧ ಕಾಯಕ -ದಾಸೋಹದ ಆರ್ಥಿಕ ಸಮಾನತೆಯ ಸ್ವಾವಲಂಬಿ ಸ್ವಾಭಿಮಾನ ಬದುಕಿಗೆ ಪ್ರೇರಣೆ ನೀಡಿದರು ಮಹಾತ್ಮ ಬಸವಣ್ಣನವರುಎಂದು ಶ್ರೀಗಳು ತಿಳಿಸಿದರು. ಈ ಸಂದರ್ಭದಲ್ಲಿ ಸಾಹಿತಿ ಸತೀಶ ಕುಲಕರ್ಣಿ,ಮಲ್ಲಿಕಾರ್ಜುನ ಹಿಂಚಿಗೇರಿ,ವಿ,ಜಿ,ಯಳಗೆರಿ,ಎನ್,ಬಿ, ಕಾಳೆ,ಮುರುಗೆಪ್ಪ ಕಡಕೊಪ್ಪ,ಶಿವಯೋಗಿ ಅಂಗಡಿ,ಗಂಗಣ್ಣ ಮಾಸೂರ ಸಾರ್ವಜನಿಕರು ಹಾಗೂ ಭಕ್ತರು ಪಾಲ್ಗೊಂಡಿದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 