ಚಿತ್ರಕಲಾವಿದ ಬಸವರಾಜಗೆ ‘ಚಿತ್ತಾರ ಚೇತನ’ ಪ್ರಶಸ್ತಿ
Artist Basavaraj receives 'Chittar Chetana' award
ಚಿತ್ರಕಲಾವಿದ ಬಸವರಾಜಗೆ ‘ಚಿತ್ತಾರ ಚೇತನ’ ಪ್ರಶಸ್ತಿ
ಧಾರವಾಡ 14 : ಚಿತ್ರಕಲೆ ಮನಸ್ಸಿಗೆ ಉಲ್ಲಾಸ ಹಾಗೂ ನೆಮ್ಮದಿ ನೀಡುವ ಮಾಧ್ಯಮ. ಚಿತ್ರಕಲೆಯಲ್ಲಿ ಸೌಂದರ್ಯಾನುಭೂತಿ ನೀಡುವ ಶಕ್ತಿ ಇದೆ ಎಂದು ಹಿರಿಯ ಚಿತ್ರ ಕಲಾವಿದರಾದ ಪ್ರಭು ಹರಸೂರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಬಿ. ಮಾರುತ್ತಿ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಚಿತ್ತಾರ ಚೇತನ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಸಂಗೀತ ಸಾಹಿತ್ಯ ಚಿತ್ರಕಲೆಯಂತಹ ಯಾವುದೇ ಕ್ಷೇತ್ರವಿರಲಿ ಅಲ್ಲಿ ನಂಬಿಕೆ, ವಿಶ್ವಾಸ ಹಾಗೂ ಬದ್ಧತೆ ಬಹಳ ಮುಖ್ಯ. ಕಲೆಯನ್ನು ಒಂದು ತಪಸ್ಸು ಎಂದು ತಿಳಿಯಬೇಕು. ದಕ್ಷಿಣದವರಿಗೆ ಸಿಕ್ಕಷ್ಟು ಪ್ರೋತ್ಸಾಹ ಉತ್ತರ ಕರ್ನಾಟಕದ ಯುವ ಕಲಾವಿದರಿಗೆ ಅವಕಾಶ ಸಿಗಬೇಕು. ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ವಿಶೇಷ ಶಿಕ್ಷಕರ ನೇಮಕ ಸರ್ಕಾರ ಮಾಡಬೇಕಿದೆ. ಬಸವರಾಜ ತಳವಾರ ಅವರಂತಹ ಯುವ ಚಿತ್ರಕಲಾವಿದರಿಗೆ ಪ್ರೋತ್ಸಾಹಿಸುವ ಬಿ. ಮಾರುತಿ ಅವರ ಕಾರ್ಯ ಅಭಿನಂದನೀಯ ಎಂದರು.
ಧಾರವಾಡ ಆಕಾಶವಾಣಿ ನಿಲಯದ ವಿಶ್ರಾಂತ ನಿರ್ದೇಶಕ ಸಿ. ಯು. ಬೆಳ್ಳಕ್ಕಿ ಮಾತನಾಡಿ, ಚಿತ್ರಕಲೆ ಸೃಜನಾತ್ಮಕತೆ, ಕಲ್ಪನಾಶಕ್ತಿ ವೃದ್ಧಿಸುವ ಪ್ರಭಲವಾದ ಒಂದು ಮಾಧ್ಯಮ. ವಿದ್ಯಾರ್ಥಿಗಳನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸದೇ ಅವರ ಆಲೋಚನೆ, ಅನುಭವ ವ್ಯಕ್ತಪಡಿಸಲು ಪಾಲಕರು ಪ್ರಯತ್ನಿಸಬೇಕು. ಚಿತ್ರಕಲೆಯಿಂದ ಕಲ್ಪನಾಶಕ್ತಿ ಅನಾವರಣವಾಗುವುದು ಎಂದು ಹೇಳಿದರು.
ಹಿರಿಯ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಕಲೆ ಯಾವುದೇ ಇರಲಿ. ಅದನ್ನು ಆಸ್ವಾದಿಸುವ ಮನಸ್ಸು ಮುಖ್ಯ. ಅದು ನಮ್ಮ ಸಂಸ್ಕೃತಿಯ ಪ್ರತೀಕ. ಬಸವರಾಜ ತಳವಾರ ಅವರ ಜಲವರ್ಣ ಚಿತ್ರಗಳು ಒಂದೊಂದು ಸಂದೇಶ ಸಾರುವ ಮನಮೋಹಕ ಚಿತ್ರಗಳಾಗಿವೆ ಎಂದರು.
‘ಚಿತ್ತಾರ ಚೇತನ’ ಪ್ರಶಸ್ತಿ ಪುರಸ್ಕೃತರಾದ ಯುವ ಚಿತ್ರಕಲಾವಿದ ಬಸವರಾಜ ತಳವಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಚಿತ್ರಕಲಾವಿದ ಬಿ. ಮಾರುತಿ ಮಾತನಾಡಿದರು. ವೇದಿಕೆಯಲ್ಲಿ ದತ್ತಿದಾನಿ ದೀಪಕ ಮಾರುತಿ ಬಿ. ಇದ್ದರು.
ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.
ಡಾ. ಸಂಜೀವ ಕುಲಕರ್ಣಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಪ್ರಿ. ಶಶಿಧರ ತೋಡಕರ, ಡಾ. ಧನವಂತ ಹಾಜವಗೋಳ, ಎಸ್.ಕೆ. ಪತ್ತಾರ, ಚಿತ್ರಕಲಾ ವಿದ್ಯಾರ್ಥಿಗಳು, ಮುಗದ ಗ್ರಾಮಸ್ಥರು ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 