ಕೃತಕ ಕಾಲು ಜೋಡಣಾ ಶಿಬಿರ

ಹುಬ್ಬಳ್ಳಿ 09: ಅಪ್ಪ ಅಮ್ಮನ ಕೈ ಹಿಡಿದು ಖುಷಿಯಿಂದ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಿದ್ದ ಕಂದಮ್ಮ ರಸ್ತೆ ಆಚೆ ಬದಿಗೆ ಮಾರುತ್ತಿದ್ದ ಐಸ್ಕ್ರೀಮ್ ಕಂಡು ವಯೋ ಸಹಜವಾದ ಬಯಕೆಯನ್ನು ಬಯಸಿ  ಕೈ ಕೊಸರಿಕೊಂಡು ಐಸ್ಕ್ರಿಂ ಮಾರಾಟಗಾರನತ್ತ ಓಡಿದ ಕಂದಮ್ಮನಿಗೆ ರಭಸವಾಗಿ ಬರುತ್ತಿದ್ದ ಟ್ರಕ್ ಕಾಣಲೇ ಇಲ್ಲ, ಚಕ್ರದ ಅಡಿಗೆ ಸಿಕ್ಕ ಕಂದಮ್ಮ, ಕಾಲು ಕಳೆದುಕೊಂಡಿತು ಪ್ರಾಣ ಉಳಿಯಿತು. 3 ವರ್ಷದ ಕಂದಮ್ಮನ ಕಳೆದುಕೊಂಡ ಕಾಲಿಗೆ - ಕೃತಕ ಕಾಲು ಜೋಡಿಸಿ ಆಸರೆಯಾಗಿದ್ದು ಹುಬ್ಬಳ್ಳಿಯ ಮಹಾವೀರ ಲಿಂಬ್ಸ ಸೆಂಟರ್.

ತಾಯಿ ಗರ್ಭದಿಂದ ಹೊಸ ಜಗತ್ತಿಗೆ ಕಾಲಿಡಬೇಕಿದ್ದ ಕಂದಮ್ಮನ ಪಾಲಿಗೆ ವೈದ್ಯರೇ ಮುಳುವಾಗಿ, ಸಿಝೇರಿಯನ್ ಶಸ್ತ್ರ ಕ್ರಿಯೆಯ ಮೂಲಕ ಹೆರಿಗೆ ಮಾಡಿಸಿ, ಮಗುವನ್ನು ಮೇಲೆತ್ತಿದ್ದಾಗ ಕಂಡದ್ದೇನು? ಕತ್ತರಿಗೆ ಸಿಲುಕಿ ತುಂಡಾಗಿದ್ದ ಮಗುವಿನ ಪಾದ ಜೋತಾಡುತ್ತಿರುವದು. ಯಾರ ತಪ್ಪ್ಪು, ಯಾರಿಗೆ ಶಿಕ್ಷೆ. 

ಐಸ್ಕ್ರಿಂನ ಆಸೆಗೆ ಕಾಲು ಕಳೆದುಕೊಂಡ ಬಾಗಲಕೋಟೆಯ ಜ್ಯೋತಿ ರಾಟೋಡ, ಇದೀಗ 18ರ ಯುವತಿ, ಮಾಹಾವೀರ ಲಿಂಬ್ಸ ಸೆಂಟರ ತನಗೆ ಕೃತಕ ಕಾಲು ನೀಡಿದ್ದು, ತನ್ನ ಜೀವನವನ್ನು ಮುಂದೆ ತಂದಿದೆ, ಬದುಕು ಕಟ್ಟಿಕೊಂಡಿದ್ದೇನೆ. ಇಂಜನೀಯರಿಂಗ್ ಡಿಪ್ಲೋಮಾ ಪಡೆದುಕೊಂಡು ಕನರ್ಾಟಕ ಸರಕಾರದ ವಿದ್ಯುತ್ ನಿಗಮದಲ್ಲಿ ಕೆಲಸ ಸಿಕ್ಕಿದೆ, ಪದವಿ ಪರೀಕ್ಷೆಯನ್ನೂ ನೌಕರಿ ಮಾಡುತ್ತಲೇ ಬರೆಯುತ್ತಿದ್ದೇನೆ, ಎಂಬ ಅಭಿಮಾನ ತಂಬಿದ ದೃಢ ಮಾತಗಳನ್ನಾಡುತ್ತ, ಮಹಾವೀರ ಲಿಂಬ್ಸ ಸೆಂಟರನ ನೆನೆಯುತ್ತ ಭಾವುಕಳಗುತ್ತಾಳೆ.

ವೈದ್ಯರು ಮಾಡಿದ ತಪ್ಪಿಗೆ ಪಾದ ಕಳೆದು ಕೊಂಡು ಮಗು ಅನೂಷಾಳ ತಂದೆ ಸಿದ್ದಾಪೂರ ತಾಲೂಕಿನ ಕನಕೋಡ ಗ್ರಾಮದ ಮಾರುತಿ, ನಾಯಕ ದಂಪತಿಗಳು, ಪುಟ್ಟ ಮಗುವಿಗೆ ಪಾದ ನೀಡಿ ಆರೈಕೆ ಮಾಡಿ ಕಳುಹಿಸಿದ ಮಹಾವೀರ ಲಿಂಬ್ಸ ಸೆಂಟರ್ನ ಉಪಕಾರವನ್ನು ಕಣ್ಣಿರು ತೆಗೆದು ಸ್ಮರಿಸುತ್ತಾರೆ, ಕೃತಕ ಕಾಲು ಹಾಕಿ ಕೊಂಡಿದ್ದೇನೆ ಎಂಬ ಆತಂಕವೂ ಇಲ್ಲದೇ ಮಗು ನಿರಾಳವಾಗಿದೆ, ದೈನಂದಿನ ಎಲ್ಲ ಕಾರ್ಯಗಳನ್ನು ಸುಲಭವಾಗಿ ಮಾಡುತ್ತದೆ, ಅಷ್ಟೇ ಏಕೆ ಡ್ಯಾನ್ಸ ಕೂಡಾ ಮಾಡುತ್ತಾಳೆ, ಇನ್ನೇನು ಬೇಕು? ಇದೀಗ ಉಳಿದ ಮಕ್ಕಳಂತೆ ನಾಲ್ಕನೆಯ ಕ್ಲಾಸಿನಲ್ಲಿ ಓದುತ್ತಿದ್ದಾಳೆ, ಓದಿನಲ್ಲೂ ಚಟವಟಿಕೆಗಳಲ್ಲೂ ಚುರುಕಾಗಿದ್ದಾಳೆ, ಅದೇ ನಮ್ಮ ಸಂತೋಷ ಎನ್ನುತ್ತಾರೆ. 

ಇಂಥಹ ಇಪ್ಪತೆಂಟು ಹೃದಯ ವಿದ್ರಾವಕ ಸಂಗತಿಗಳಿಗೆ ಕಾರಣವಾದ ಸಂಗತಿ ಎಂದರೆ, ಹುಬ್ಬಳ್ಳಿಯ ಲಾಯನ್ಸ ಪರಿವಾರ ಸಂಸ್ಥೆಯು 

'ವಿಶ್ವ ಅಂಗವಿಕಲ ವ್ಯಕ್ತಿ ದಿನಾಚರಣೆ' ಅಂಗವಾಗಿ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಶನ್ ಮತ್ತು ಮಹಾವೀರ ಕೃತಕ ಕಾಲು ಜೋಡಣಾ ಸಂಸ್ಥೆಯ ಸಹಯೋಗದೊಂದಿಗೆ, ನಗರದ ಖ್ಯಾತ ಔಷಧಿ ಮಾರಾಟಗಾರ ಸಂಸ್ಥೆಯ ಬಾಲಘಟ್ ಕುಟುಂಬವು ತಮ್ಮ ತಂದೆ ಸುರೇಶಚಂದ ಬಾಲಘಟ್ ಅವರ ಸ್ಮರಣದಿವಸದ ಅಂಗವಾಗಿ, ಮಾನುಬಾಯಿ ಬಾಲಘಟ, ಮನೋಜ ಬಾಲಘಾಟ, ವಿನೋದ ಬಾಲಘಾಟ ಅವರು 25 ಜನ ವಿಕಲಾಂಗ ಚೇತನರಿಗೆ ಕೃತಕ ಕಾಲು ವಿತರಣಾ ಶಿಬಿರವನ್ನು ಏರ್ಪಡಿಸಿದುದು.

ಸಮಾನ ಮನಸ್ಕರೊಡಗೂಡಿದ ಗೆಳೆಯರ ಗುಂಪು- ಸಮಾಜಕ್ಕೆ ತನ್ನಿಂದಾಗುವ ತನು ಮನ ಧನ ಸೇವೆಯ ಮೂಲಕ ಸೇವೆಯನ್ನು ನೀಡಬೇಕೆಂಬ ಉತ್ಕಟ, ಆಶಯಗಳೊಂದಿಗೆ ಆರಂಭವಾದ ಸಂಸ್ಥೆ, ಇಂದು ಸಾವಿರಾರು ಕುಟುಂಬಗಳ ಸದಸ್ಯರ ನೆರವಿಗೆ ಬಂದು ಅವರ ಬದುಕನ್ನು ಹಸನಾಗಿಸಿದೆ, ಅವರ ಬಾಳಿಗೆ ಬೆಳಕು ತಂದಿದೆ, ಬಾಲಘಾಟ ಕುಟುಂಬದ ದಾನದಿಂದಾಗಿ ಈ ಕೆಲಸವನ್ನು ಪೂರೈಸಲು ಮಹಾವೀರ ಲಿಂಬ್ಸ ಸೆಂಟರಗೆ, ಇಂಥಹ ಅನೇಕ ಕಾರ್ಯಕ್ರಮಗಳನ್ನು ನಡೆಸುವದು ಸಾಧ್ಯವಾಗುತ್ತಿದೆ, ಈ ದಿಶೆಯಲ್ಲಿ ಬಾಲಘಾಟ ಕುಟುಂಬದ ಮಾನೂಬಾಯಿ, ಮನೋಜ, ವಿನೋದರನ್ನು ಸ್ಮರಣೀಯ ದಿವಸವನ್ನು ಅನು ಕರಣೀಯವಾಗಿ ಆಚರಿಸಿದುದಕ್ಕೆ ಅಭಿನಂದಿಸಿದವರು, ಲಾಯನ್ಸ ಕ್ಲಬ್ ಪರವಾಗಿ 28 ಕಾಲುಗಳನ್ನು ನೀಡುವದರ ಮೂಲಕ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಸಂಸ್ಥೆಯ ಅಧ್ಯಕ್ಷರೂ, ಲಾಯನ್ಸ ಜಿಲ್ಲಾ ಚೇರಮನ್ನರೂ ಆದ ಮಹೇಂದ್ರ ಸಿಂಘಿಯವರು ಅಭಿಪ್ರಾಯ ಪಟ್ಟರು.

ಮಾಜಿ ಜಿಲ್ಹಾ ಗವರ್ನರ ಕೃಷ್ಣಾ ಪುಣಜಿ, ಕ್ಲಬ್ ಅಧ್ಯಕ್ಷ ಶಶಿ ಸಾಲಿ, ಕಾರ್ಯದಶರ್ಿ ಡಾ. ಸಂಜಯ ಗಣೇಶಕರ, ಖಜಾಂಚಿ, ಶ್ರೇಣಿಕರಾಜ ರಾಜಮಾನೆ, ಸದಸ್ಯರಾದ, ಗೌತಮ ಗೊಲೇಚಾ, ಅಲ್ಲದೇ ಶಿಬಿರದಲ್ಲಿ, ಗೋಕಾಕ, ಬಾಗಲಕೋಟ, ಗುಲಬುಗರ್ಾ, ಸಿಂಧನೂರು, ಬಳ್ಳಾರಿ ಮುಂತಾದ ಭಾಗಗಳಿಂದ ಆಗಮಿಸಿದ್ದ 28ಜನ ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು, ಪದಗಳನ್ನು ಜೋಡಿಸಲಾಯಿತು.