ಕಲಾ ಆರಾಧಕರು ಕಾಳಮುಖ ಪಂಥದವರು: ಡಾ. ವಸುಂಧರಾ

ಕಲಾ ಆರಾಧಕರು ಕಾಳಮುಖ ಪಂಥದವರು: ಡಾ. ವಸುಂಧರಾ  Art worshippers are from the Kalamukh sect: Dr. Vasundhara


ವಿಜಯಪುರ 27: ಕಾಳಮುಖರು ಎಂದರೆ ಮಾಟಮಂತ್ರ ಮಾಡೋರು ಎಂದು ತಪ್ಪು ಕಲ್ಪನೆಯನ್ನು ಬ್ರಿಟಿಷರು ಭಾರತೀಯರಲ್ಲಿ ಹುಟ್ಟಿಹಾಕಿದ್ದು ಎಂದು ಡಾ. ವಸುಂಧರಾ ಕವಲಿ ಫಿಲಿಯೋಜಾ ಹೇಳಿದರು. 

ರವಿವಾರ 25 ರಂದು ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್(ನೋಂ) ವಿಜಯಪುರ ಜಿಲ್ಲಾ ಸಮಿತಿ ಆಯೋಜನೆ ಆನ್ಲೈನ್ ಉಪನ್ಯಾಸ ಮಾಲಿಕೆಯಲ್ಲಿಯಲ್ಲಿ "ಕಾಳಮುಖ ಪಂಥ ಹಾಗೂ ಕಾಳಮುಖ ಪಂಥದ ದೇವಾಲಯಗಳು" ವಿಷಯಾಧಾರಿತವಾಗಿ ಅವರು ಉಪನ್ಯಾಸ ಮಾಡಿದರು. ಕಾಳಮುಖ ಈ ಶಬ್ದ ಕಲಾ ಎಂಬ ಶಬ್ದದಿಂದ ನಿಷ್ಪತ್ತಿಯಾಗಿರುವಂತಹದ್ದು. ಕಲಾ ಅಂದರೆ ಶಿವ ಹಾಗೂ ಶಕ್ತಿಯ ಆರಾಧಕರು. ಬಾದಾಮಿ ಚಾಳುಕ್ಯರ ವಿಕ್ರಮಾದಿತ್ಯ ಹಾಗೂ ವಿನಯಾದಿತ್ಯರ ಕಾಲದಲ್ಲಿಂದಲೂ ಕಾಳಮುಖ ಪಂಥದ ಪರಂಪರೆಯ ದೇವಸ್ಥಾನಗಳು ಕರ್ನಾಟಕದಲ್ಲಿ ಕಾಣಬಹುದು. ಕಾಲಾನಂತರ ಕಾಳಮುಖ ಪಂಥ ಇತರ ಪಂಥದಲ್ಲಿ ಸೇರಿಕೊಂಡಿತು ಎಂದು ವಿಸ್ತಾರವಾಗಿ ವಿವರಿಸಿದರು. 

ನಿರೂಪಣೆ ವಿದ್ಯಾವತಿ ಬೆಣ್ಣೂರು, ಸ್ವಾಗತ ಪರಿಚಯ ಹೇಮಲತಾ ಪಾಟೀಲ, ಪ್ರಾರ್ಥನೆ ಮಹಾನಂದಿ ವಂದನಾರೆ​‍್ಣ ಪ್ರಿಯಾ ಹರಿದಾಸ ನಿರ್ವಹಿಸಿದರು. ವಿವೇಕ ಕುಲಕರ್ಣಿ, ಹರ್ಷವರ್ಧನ ಸರಾಫ್, ಆನಂದ ಗೋಡಸೆ, ಸುಕಾಂತ ಕುಲಕರ್ಣಿ, ಶ್ರೀರಂಗ ಪುರಾಣಿಕ, ಅನಿಲ ಬಳ್ಳುಂಡಗಿ, ಶ್ರೀರಂಗ ಕುಲಕರ್ಣಿ, ಮನು ಪತ್ತಾರ, ಡಾ.ಚಾಮರಾಜ ಕಮ್ಮಾರ, ಮಂಜು ಸೇರಿದಂತೆ ಅನೇಕರು ಭಾಗವಹಿಸಿದ್ದರು.