ಹುಕ್ಕೇರೀಶರ ಉತ್ಸವಕ್ಕೆ ಸಂಸದರಾದ ಯದುವೀರ ಒಡೆಯರ ಆಗಮನ

ಹುಕ್ಕೇರೀಶರ ಉತ್ಸವಕ್ಕೆ ಸಂಸದರಾದ ಯದುವೀರ ಒಡೆಯರ ಆಗಮನ  Arrival of MP Yaduveera Odiyar at the Hukkerishara festival

ಹುಕ್ಕೇರಿ 10:   ಗುರುಶಾಂತೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಶ್ರೀ ಜಗದ್ಗುರು ರೇಣುಕಾಚಾರ್ಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ,   ಗುರುಶಾಂತೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ,    ವಿರೂಪಾಕ್ಷಲಿಂಗ ಶಿವಾಚಾರ್ಯ ಸಂಸ್ಕೃತ ಮತ್ತು ವೇದ ಪಾಠಶಾಲೆ ಹಿರೇಮಠ ಹುಕ್ಕೇರಿ ಹುಕ್ಕೇರೀಶರ ಉತ್ಸವ 2025-26 ಸಾಲಿನ ಶಾಲೆಯ ವಿದ್ಯಾರ್ಥಿಗಳಿಂದ ಗುಂಡು ಎಸೆತ ಕಪ್ಪೇಜಿಗಿತ ಐನೂರು ಮೀಟರ್ ಓಟ ಬುಕ್ ಬ್ಯಾಲೆನ್ಸ್‌ ಲಿಂಬು ಚಮಚ ಹೀಗೆ ಹಲವಾರು ಕ್ರೀಡೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು ಹಾಗೂ ಸಾಯಂಕಾಲ 4 ಗಂಟೆಗೆ ಮುದ್ದು ಮಕ್ಕಳಿಂದ ಮನರಂಜನ ಕಾರ್ಯಕ್ರಮ ಹಾಗೂ 2025 ರ ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಯುಕ್ತವಾಗಿ ಪ್ರತಿಭಾ ಪುರಸ್ಕಾರ ಹಾಗೂ ಬಿಳ್ಕೊಡು ಸಮಾರಂಭ ಹಾಗೂ ಪ್ರತಿಯೊಬ್ಬರ ವಿದ್ಯಾರ್ಥಿ ವಿದ್ಯಾರ್ಥಿನಿಯರ ಕೈಯಲ್ಲಿ ದೀಪ ಹಿಡಿದು ಪ್ರತಿಜ್ಞಾವಿಧಿಯನ್ನು ಬೋಧಿಸಿ ಬಿಳ್ಕೊಡಲಾಯಿತು. ವಿದ್ಯುತ್ ಸಹಕಾರಿ ಸಂಘದ ನೂತನ ನಿರ್ದೇಶಕರಾದ  ಪೃಥ್ವಿ ಕತ್ತಿ ಹಾಗೂ ಶಿವಾನಂದ ಮುಡಶಿ ಹಾಗೂ ಪ್ರಜ್ವಲ್ ನೀಲಜಗಿ. ಚೆನ್ನಪ್ಪ ಗಜಬರ ಇವರು   ಯದುವೀರ ಒಡೆಯರಿಗೆ ಇವರಿಗೆ ವಿಶೇಷ ಸನ್ಮಾನ ಮಾಡಿದರು ಈ ಸಮಾರಂಭದಲ್ಲಿ ದಿವ್ಯ ಸಾನಿಧ್ಯ   ಷ ಬ್ರ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ ಮೈಸೂರು ರಾಜಮನೆತನದ   ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಸಂಸದರು ಮೈಸೂರು ಕೊಡಗು ಮುಖ್ಯ ಅತಿಥಿಗಳಾಗಿ ಶ್ರೀಮತಿ ಪ್ರಭಾವತಿ ಪಾಟೀಲ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹುಕ್ಕೇರಿ   ಸವಿತಾ ಹಲಕಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ   ಎ ಎಸ್ ಪದ್ಮನ್ನವರ್ ಕ್ಷೇತ್ರ ಸಮನ್ವಯ ಅಧಿಕಾರಿಗಳು ಹುಕ್ಕೇರಿ  ಎಮ್ ಡಿ ಬಡಿಗೇರ್ ಶಿಕ್ಷಣ ಸಂಯೋಜಕರು ಹುಕ್ಕೇರಿ ಹಾಗೂ ಮುಖೋಪಾಧ್ಯಾಯರಾದ ಶಿವಾನಂದ ಜಿನರಾಳಿ ಹಾಗೂ   ಸಂಪತ್ ಕುಮಾರಯ್ಯ ಹಿರೇಮಠ ವ್ಯವಸ್ಥಾಪಕರು ಸಿದ್ದಲಿಂಗಯ್ಯ ಎಸ್ ಹಿರೇಮಠ ಸ್ವಾಗತ ಕೋರುವವರು ಮುಖ್ಯೋಪಾಧ್ಯಾಯರು ಶಿಕ್ಷಕರು ಶಿಕ್ಷಕಿಯರು ಸಿಬ್ಬಂದಿ ವರ್ಗದವರು  ಹಾಗೂ ವಿದ್ಯಾರ್ಥಿ ಬಳಗ ದಿಂದಾ ಸ್ವಾಗತ ಕೋರಿದರು ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಯರ ಪಾಲಕರು ಪೋಷಕರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.