ತಜ್ಞ ಆಸ್ಪತ್ರೆಗೆ ಆರೋಗ್ಯ ಜ್ಯೋತಿ ಅವಾರ್ಡ್ ಡಾ, ಅಬ್ದುಲ್ ಮುನಾಫ್ ಮತ್ತು ಡಾ,ಸಭಾ ತಜ್ಮೀನ್ ಗೆ ಪ್ರಶಸ್ತಿ ಪ್ರಧಾನ
Arogya Jyoti Award for Specialist Hospital
ಕೊಪ್ಪಳ 24: ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ನೂರಕ್ಕೂ ಹೆಚ್ಚು ಸಾಧಕರಿಗೆ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ವತಿಯಿಂದ ಕೊಡ ಮಾಡಿದ ಪ್ರತಿಷ್ಠಿತ ಆರೋಗ್ಯ ಜ್ಯೋತಿ ಪ್ರಶಸ್ತಿಯನ್ನು ಬೆಂಗಳೂರಿನ ತಜ್ಞೆ ಆಸ್ಪತ್ರೆಯ ಉತ್ತಮ ಸೇವೆಗೆ ನೀಡಲಾಗಿದ್ದು ಸದರಿ ಅವಾರ್ಡನ್ನು ತಜ್ಞ ಆಸ್ಪತ್ರೆಯ ಪ್ರಮುಖ ವೈದ್ಯರಾದ ಡಾ, ಅಬ್ದುಲ್ ಮುನಾಫ್ ಮತ್ತು ಅವರ ಪತ್ನಿ ಡಾ, ಸಭಾ ತಜ್ಮೀನ ರವರು ಸ್ವೀಕರಿಸಿದರು,
ಬೆಂಗಳೂರಿನ ಅಂಬೇಡ್ಕರ್ ಭವನ್ ದಲ್ಲಿ ರಾಘವೇಂದ್ರ ಸುಂಟ್ರಹಳ್ಳಿ ಯವರ ನೇತೃತ್ವದ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ವತಿಯಿಂದ ಏರಿ್ಡಸಿದ ಸರಕಾರಿ ಮತ್ತು ಖಾಸಗಿ ಆರೋಗ್ಯ ಸೇವಾ ವಲಯದಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರನ್ನು ತಜ್ಞ ವೈದ್ಯರನ್ನು ಅವರ ಉತ್ತಮ ಸೇವೆಗಳಿಗಾಗಿ ಕೊಡ ಮಾಡಿದ ಸದರಿ ಆರೋಗ್ಯ ಜ್ಯೋತಿ ಪ್ರಶಸ್ತಿ ಯನ್ನು ಡಾ, ಅಬ್ದುಲ್ ಮುನಾಫ್ ಮತ್ತು ಅವರ ಪತ್ನಿ ಡಾ. ಸಭಾ ತಜ್ಮೀನ ರವರು ಪಡೆದುಕೊಂಡರು,
ಪ್ರಶಸ್ತಿ ಪುರಸ್ಕೃತ ವೈದ್ಯ ದಂಪತಿಗಳು ಕೊಪ್ಪಳದ ನಿವಾಸಿ ಹಾಗೂ ಹಾಲಿ ವಸತಿ ಮೈಸೂರಿನ ಲ್ಯಾಂಡ್ ಡೆವಲೋಪರ್ ಮತ್ತು ಸಮಾಜ ಸೇವಕರಾದ ಎಂ ತಾಹಿರ್ ಅಲಿ ಯವರ ಅಳಿಯ ಮತ್ತು ಮಗಳಾಗಿದ್ದಾರೆ,
ಸಮಾರಂಭಕ್ಕೆ ಚಾಲನೆ ನೀಡಿ ಸಾಧಕ ವೈದ್ಯರಿಗೆ ಪ್ರಶಸ್ತಿ ವಿತರಣೆ ಮಾಡಿದ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ರವರು ಮಾತನಾಡಿ ವೈದ್ಯರ ಉತ್ತಮ ಸೇವೆ ಗಳ ಬಗ್ಗೆ ತಮ್ಮ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದರು, ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ, ವಿ, ಸದಾನಂದ ಗೌಡ ,ಅರಣ್ಯ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ, ಅರುಣ್ ಗುರೂಜಿ, ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ಅಧ್ಯಕ್ಷರಾದ ರಾಘವೇಂದ್ರ ಸುಂಟ್ರಹಳ್ಳಿ ,ಚಿತ್ರ ನಟಿಯರಾದ ಸುಧಾರಾಣಿ, ಕಾರುಣ್ಯ ರಾಮ್ ಗೌಡ, ಡಿ ಜಯಮಾಲಾ, ನಳಿನಿ ,ಡಾ, ಶ್ವೇತಾ ಜಾಕಾ ಮತ್ತು ಶ್ವೇತಾ ಗೌಡ ಅನೇಕರು ಉಪಸ್ಥಿತರಿದ್ದರು,
ಬೆಂಗಳೂರಿನ ತಜ್ಞ ಆಸ್ಪತ್ರೆಯ ವೈದ್ಯರಾದ ಡಾ, ಅಬ್ದುಲ್ ಮುನಾಫ್ ಮತ್ತು ಅವರ ಪತ್ನಿ ಡಾ, ಸಭಾ ತಜ್ಮೀನ್ ರವರ ವೈದ್ಯಕೀಯ ಉತ್ತಮ ಸೇವೆಗಾಗಿ ಆರೋಗ್ಯ ಜ್ಯೋತಿ ಅವಾರ್ಡ್ ಪಡೆದಿರುವುದಕ್ಕೆ ಕೊಪ್ಪಳ ಮತ್ತು ಮೈಸೂರಿನ ಅವರ ಕುಟುಂಬ ವರ್ಗದವರು ,ಸ್ನೇಹಿತ ಬಳಗದವರು ಮತ್ತು ಅಭಿಮಾನಿ ಬಳಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 