ಓಂಕಾರ ಆಶ್ರಮ ಮಠದ ಪಟ್ಟಾಧಿಕಾರಿಗಳ ನೇಮಕ

ಓಂಕಾರ ಆಶ್ರಮ ಮಠದ ಪಟ್ಟಾಧಿಕಾರಿಗಳ ನೇಮಕ Appointment of Pattadhikari of Omkara Ashram Math


ರಾಯಬಾಗ 23; ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ಶ್ರೀ ದಿ. ಶಿವಶಂಕರ ಸ್ವಾಮೀಜಿಗಳು ಮರಣ ಹೊಂದುವ ಮೊದಲೇ ಮೃತ್ಯುಪತ್ರ ಬರೆದಿಟ್ಟು ಪತ್ರದ ಪ್ರಕಾರ ಇಂದು ಓಂಕಾರ ಆಶ್ರಮ ಮಠದ ಪಟ್ಟಾಧಿಕಾರಿಯಾಗಿ ಮಾತೋಶ್ರೀಗಳಾದ ಬ್ರಮರಾಂಭಿಕಾದೇವಿ ಹಾಗೂ ನಾಗಲಾಂಬಿಕಾ ದೇವಿಯವರನ್ನು ಸಹಸ್ರಾರು ಜನರ ಹಾಗೂ ಸ್ವಾಮೀಜಿಗಳ ಸಮ್ಮುಖದಲ್ಲಿ ನೇಮಕ ಮಾಡಲಾಯಿತು.  

ನಂತರ ಚಿಕ್ಕೋಡಿ ಚರಮೂರ್ತಿಮಠದ ಸಂಪಾದನ ಸ್ವಾಮೀಜಿಗಳು ಮಾತನಾಡಿ, ಓಂಕಾರ ಆಶ್ರಮ ಮಠದ ಶಿವಶಂಕರ ಸ್ವಾಮೀಜಿಗಳು ಮಠದಲ್ಲಿ ಪಾಠ ಪ್ರವಚನ ಮಾಡಿ, ಬಂದ ಭಕ್ತರಿಗೆ ದಾಸೋಹ ನೀಡುತ್ತಿದ್ದರಲ್ಲದೇ ಕೃಷಿಯಲ್ಲಿ ಆಯುರ್ವೇದದಲ್ಲಿ ಉತ್ತಮ ಪರಿಣತಿ ಹೊಂದಿದ್ದರು. ಇವರಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಹಾಗೂ ಸ್ವಾಮೀಜಿ ಬಳಗ ಹೊಂದಿದ್ದರು. ಅವರ ಇಂದು ಲಿಂಗೈಕ್ಯರಾಗಿದ್ದು ಎಲ್ಲರಿಗೂ ದುಃಖದ ವಿಷಯವಾಗಿದೆ. ಅವರು ಬರೆದಂತಹ ಮೃತ್ಯ ಪತ್ರದ ಪ್ರಕಾರ ಇಬ್ಬರ ಮಾತೋಶ್ರೀಗಳ ಮಠದ ಜವಾಬ್ದಾರಿ ತೆಗೆದುಕೊಂಡು ಶ್ರೀಗಳು ನಡೆದುಕೊಂಡ ಹೋದ ದಾರಿಯಲ್ಲಿ ತಾವೂ ಸಾಗಬೇಕು ಎಂದು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ನ್ಯಾ. ಎಲ್ ಬಿ ಚೌಗುಲೆ ಮೃತ್ಯುಪತ್ರ ಓದಿದರು. ಈ ವೇಳೆ, ವೀರಭದ್ರೇಶ್ವರ ಮಹಾಸ್ವಾಮಿಗಳು,  ಬಸವಲಿಂಗ ಮಹಾಸ್ವಾಮಿಜಿ,  ಜ್ಞಾನಾನಂದ ಸ್ವಾಮೀಜಿ,  ಸಂಗಮೇಶ್ವರ ಸ್ವಾಮೀಜಿ,  ಮರುಘರಾಜೇಂದ್ರ ಮಹಾಸ್ವಾಮಿ,  ಶಿವಲಿಂಗೇಶ್ವರ ಸ್ವಾಮೀಜಿ,  ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿ, ಯತೀಶ್ವರಾನಂದ ಮಹಾಸ್ವಾಮಿಜಿ,  ಕೃಪಾನಂದ ಮಹಾಸ್ವಾಮೀಜಿ,  ಕಾಡಯ್ಯ ಹಿರೇಮಠ,  ಮಹೇಶ್ವರಾನಂದ ಮಹಾಸ್ವಾಮಿಜಿ, ಬಸವರಾಜ ಮಹಾಸ್ವಾಮಿಜಿ, ಪ್ರಾಣಲಿಂಗ ಮಹಾಸ್ವಾಮೀಜಿ,  ರಾಮಚಂದ್ರ ಕಾಟೆ, ಈರಗೌಡ ಪಾಟೀಲ, ಧೂಳಗೌಡ ಪಾಟೀಲ, ಮಲ್ಲಿಕಾರ್ಜುನ್ ಕೋರೆ, ತಾತ್ಯಾಸಾಹೇಬ್ ಕಾಟೆ, ಅನೀಲ ಹಂಜೆ, ಮಹಾವೀರ ಪಾಟೀಲ, ಪಾರೀಸ್ ಉಗಾರೆ, ಭರತೇಶ ಬನವಣೆ, ಅರುಣ ಐಹೊಳೆ, ರಮೇಶ ಕಿಚಡೆ, ಸತ್ಯಪ್ಪ ಭಿಷ್ಠೆ,ಕಿರಣ ಕಲೋಲಕರ,  ಅಶೋಕ ಮಂಗಸೂಳೆ, ಅಜೀತ ಖಮಲಾಪುರೆ, ಅಜ್ಜಾ ನಾಗರಾಳೆ, ತುಕಾರಾಮ ಪಾಟೀಲ  ಸೇರಿದಂತೆ ಅನೇಕ ಭಕ್ತಾಧಿಗಳು ಇದ್ದರು.