ಕನ್ನಡ ಪುಸ್ತಕ ಪ್ರಾಧಿಕಾರದ ಮನಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ನೇಮಕ
Appointed as a member of the Kannada Book Authority's Managono Library Vigilance Committee
ವಿಜಯಪುರ 1: ಕನ್ನಡ ಪುಸ್ತಕ ಪ್ರಾಧಿಕಾರದ ಮನಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ವಿಜಯಪುರ ನಗರದ ಸಾಹಿತಿ, ಪತ್ರಕರ್ತ ಪರಶುರಾಮ ಶಿವಶರಣ ಅವರನ್ನು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ. ಮಾನಸ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಪರಶುರಾಮ ಶಿವಶರಣ ಅವರ ‘ಜೀವಪೀಠ’ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ ಪಡೆದಿದೆ, ರಾಣಿಬಗೀಚ ಕಥಾ ಸಂಕಲನ, ವಾರ ನೋಟ ಅಂಕಲನ ಸಂಕಲನ, ನೀಲಿ ಮಿಂಚು ಕರ್ನಾಟಕ ಸರ್ಕಾರ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಗಿದೆ. ಇವರ ಕಾದಂಬರಿ ಜೀವಯಂತ್ರ ಯೋನಿ, ಕಥಾ ಸಂಕಲನ ಹುಳಿ ಮಜ್ಜಿಗೆ, ಕವನ ಸಂಕಲನ ಕಾಡು ಕವಿತೆ ಮುದ್ರಣದ ಅಂಚಿನಲ್ಲಿವೆ.
ಅದರಂತೆ ಸಾಮಾಜಿಕ ಕಾಳಜಿಯನ್ನು ಮೈಗೂಡಿಸಿಕೊಂಡು ಸತ್ಯ, ನ್ಯಾಯದ ಪರವಾಗಿ ಬದ್ಧತೆಯಿಂದ, ಜವಾಬ್ದಾರಿ, ನಿರ್ಭೀಡೆಯಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ಪತ್ರಕರ್ತರಾಗಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ದೀನ ದಲಿತರ, ಶೋಷಿತರ, ನೊಂದವರ, ನಿರ್ಗತಿಕರ, ಅನ್ಯಾಯ ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿ ವಿಶೇಷ ವರದಿಗಳನ್ನು ಮಾಡಿ ಸಮಾಜ ಹಾಗೂ ಸರ್ಕಾರವನ್ನು ಎಚ್ಚರಿಸುತ್ತಿದ್ದಾರೆೆ. ಪರಶುರಾಮ ಅವರ ಸಮಾಜ ಮುಖಿ, ಜನಮುಖಿ ಹಲವು ವಿಶೇಷ ವರದಿಗಳು ವಿಧಾನ ಸೌಧದ ಅಧಿವೇಶನದಲ್ಲಿ ಪ್ರತಿಧ್ವನಿಸಿ ಸರ್ಕಾರದ ಗಮನ ಸೆಳೆದಿವೆ. ಅಲ್ಲದೇ ಪರಶುರಾಮ ಶಿವಶರಣ ಅವರ ಸಾಮಾಜಿಕ, ಜನಪರ ಪತ್ರಿಕಾ ಸೇವೆಗೆ 2021ನೇ ಸಾಲಿನ ಬೆಸ್ಟ್ ರಿಪೋರ್ಟ್‌ರ ಅವಾರ್ಡ್, ದಲಿತ ಸಾಹಿತ್ಯ ಪರಿಷತ್ತು ಬೆಳ್ಳಿ ಸಂಭ್ರಮ ರಾಜ್ಯ ಮಟ್ಟದ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಶಿವಶರಣ ಅವರನ್ನು ಅರಸಿ ಬಂದಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 