ಲೋಕದರ್ಶನ ವರದಿ
ನೌಕರರ ಸಂಘದ ನಿರ್ದೇಶಕರಾಗಿ ನೇಮಕ:ಸನ್ಮಾನ
ಕೊಪ್ಪಳ 20: ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಭಾರತಿ ಹವಳೆ ಅವರನ್ನು ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಗೆ ಜಿಲ್ಲಾಧ್ಯಕ್ಷರಾದ ನಾಗರಾಜ ಆರ್ ಜುಮ್ಮಣ್ಣನ್ನವರ ನೇಮಕ ಮಾಡಿದ್ದಾರೆ.ನಿರ್ದೇಶಕರಾಗಿ ನೇಮಕವಾದ ಹಿನ್ನಲೆ ಶಾಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಈ ಸಮಯಲ್ಲಿ ಶಾಲಾ ಮೇಲು ಉಸ್ತುವಾರಿ ಅಧ್ಯಕ್ಷರಾದ ಮಂಜುನಾಥ ಕುರಿ,ಗ್ರಾ.ಪಂ.ಅಧ್ಯಕ್ಷರಾದ ಯೋಗಾನಂದ,ಸದಸ್ಯರಾದ ಮೊಹಮ್ಮದ ರಫಿ,ಎಸ್.ಡಿ.ಎಂ.ಸಿ.ಯ ಸದಸ್ಯರಾದ ಬಾಬಾ ಕಿಲ್ಲೇದಾರ.ಬಸವರಾಜ,ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ್ಪ ಅಂಡಗಿ,ಶಿಕ್ಷಕರಾದ ಭಾರತಿ ಉಪಾಧ್ಯಾಯ,ಜ್ಯೋತಿಲಕ್ಷ್ಮೀ,ಗಂಗಮ್ಮ ಕಪರಶೆಟ್ಟರ್,ಪೂರ್ಣಿಮಾ ತುಪ್ಪದ,ಮಮತಾ,ಹನುಮಂತವ್ವ,ಮೇರಾಜುನ್ನಿಸಾ,ಜಲಜಾಕ್ಷೀ,ನಗ್ಮಾ,ಗೀತಾ ಕುರಿ,ವೀಣಾ,ಹನುಮಂತಪ್ಪ ಹಾಗೂ ರಾಜಾ ಹುಸೇನ ಸೇರಿದಂತೆ ಅನೇಕರು ಹಾಜರಿದ್ದರು.
ಪೋಟೊ:ನೌಕರರ ಸಂಘದ ನಿರ್ದೇಶಕರಾಗಿ ನೇಮಕವಾದ ಭಾರತಿ ಹವಳೆ ಅವರನ್ನು ಸನ್ಮಾನಿಸಿದರು.